ವಿಜ್ಞಾನ ಪದವೀಧರರಿಗೆ ಕೇಂದ್ರದ ಜವಳಿ ಸಚಿವಾಲಯದ ಎನ್​ಐಎಫ್​ಟಿಯಲ್ಲಿ ಉದ್ಯೋಗಾವಕಾಶ

udyoga-fashion
Published on

ಜವಳಿ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುವ ನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ (ಎನ್​ಐಎಫ್​ಟಿ) ಶ್ರೀನಗರ ಘಟಕದಲ್ಲಿ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್​ಲೈನ್ ಅರ್ಜಿ ಆಹ್ವಾನಿಸಲಾಗಿದೆ.

ಶ್ರೀನಗರದಲ್ಲಿರುವ ಎನ್​ಐಎಫ್​ಟಿ ಹುದ್ದೆಗಳು ಗ್ರೂಪ್ ಸಿ ಗುಂಪಿಗೆ ಸೇರಿದ್ದು, ಹುದ್ದೆಯ ಅವಧಿಯು ದೀರ್ಘಾವಧಿ ಅಂದರೆ 3 ವರ್ಷದ ಒಪ್ಪಂದಕ್ಕೆ ಒಳಪಟ್ಟಿವೆ. 21 ಹುದ್ದೆಗಳಲ್ಲಿ ಸಾಮಾನ್ಯ ವರ್ಗದ ಅಭ್ಯರ್ಥಿಗೆ 17 ಸ್ಥಾನ, ಎಸ್ಸಿಗೆ 1, ಇತರ ಹಿಂದುಳಿದ ವರ್ಗಕ್ಕೆ 3 ಸ್ಥಾನ ಮೀಸಲಿರಿಸಲಾಗಿದೆ. ಈ ಹುದ್ದೆಗಳಿಗೆ ಸಂಬಂಧಿಸಿದಂತೆ 2021ರ ಮೇ ತಿಂಗಳಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು. ಈಗ ಹುದ್ದೆ ಹಾಗೂ ಸಂಖ್ಯೆಗಳಲ್ಲಿ ಕೆಲ ಬದಲಾವಣೆ ಮಾಡಿ ಹೊಸ ಅಧಿಸೂಚನೆ ಹೊರಡಿಸಲಾಗಿದೆ.

ಒಟ್ಟು ಹುದ್ದೆಗಳು: 21

ಹುದ್ದೆ ವಿವರ

* ಅಸಿಸ್ಟೆಂಟ್ (ಅಡ್ಮಿನಿಸ್ಟ್ರೇಷನ್) - 4

* ಅಸಿಸ್ಟೆಂಟ್ (ಫೈನಾನ್ಸ್ ಆಂಡ್ ಅಕೌಂಟ್ಸ್) - 1

* ಅಸಿಸ್ಟೆಂಟ್ ವಾರ್ಡನ್ (ಮಹಿಳಾ-ಪುರುಷ) - 2

* ಮಷಿನ್ ಮೆಕಾನಿಕ್ - 1

* ನರ್ಸ್ - 1

* ಲೈಬ್ರರಿ ಅಸಿಸ್ಟೆಂಟ್ - 1

* ಜೂನಿಯರ್ ಅಸಿಸ್ಟೆಂಟ್ - 8

* ಲ್ಯಾಬ್ ಅಸಿಸ್ಟೆಂಟ್-3 (ಫ್ಯಾಷನ್ ಡಿಸೈನ್-1, ಫ್ಯಾಷನ್ ಕಮ್ಯುನಿಕೇಷನ್-1, ಇನ್​ಫಮೇಷನ್ ಟೆಕ್ನಾಲಜಿ-1) * ಲ್ಯಾಬ್ ಅಸಿಸ್ಟೆಂಟ್ (ಐಟಿ) - 1

ವಿದ್ಯಾರ್ಹತೆ: ದ್ವಿತೀಯ ಪಿಯುಸಿ, ಐಟಿಐ, ನರ್ಸಿಂಗ್ ಡಿಪ್ಲೊಮಾ, ಕಟ್ಟಿಂಗ್ ಆಂಡ್ ಟೈಲರಿಂಗ್/ ಡ್ರೆಸ್ ಡಿಸೈನಿಂಗ್ ಡಿಪ್ಲೊಮಾ, ಕಾಮರ್ಸ್, ಲೈಬ್ರರಿ ಸೈನ್ಸ್​ನಲ್ಲಿ ಪದವಿ, ಯಾವುದೇ ಪದವಿ, ಬಿಎಸ್ಸಿ, ನಿಮಿಷಕ್ಕೆ 40 ಪದ ಇಂಗ್ಲಿಷ್/ ಹಿಂದಿ ಟೈಪಿಂಗ್ ವೇಗದ ಜತೆ ಕಂಪ್ಯೂಟರ್ ಜ್ಞಾನ ಅವಶ್ಯ.

ವಯೋಮಿತಿ: ಗರಿಷ್ಠ 27 ವರ್ಷ ನಿಗದಿಪಡಿಸಲಾಗಿದ್ದು, ಎನ್​ಐಎಫ್​ಟಿ ಸಿಬ್ಬಂದಿಗೆ ಅವರ ಒಟ್ಟು ಸೇವಾವಧಿಯ ಲೆಕ್ಕದ ಪ್ರಕಾರ ಗರಿಷ್ಠ 5 ವರ್ಷ ವಯೋಸಡಿಲಿಕೆ ನೀಡಲಾಗುವುದು. ಮೀಸಲಾತಿ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮದನ್ವಯ ವಯೋಸಡಿಲಿಕೆ ನೀಡಲಾಗುವುದು.

ಅರ್ಜಿಶುಲ್ಕ: ಎಸ್ಸಿ, ಎಸ್ಟಿ, ಅಂಗವಿಕಲ, ಮಹಿಳಾ ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದ ಅಭ್ಯರ್ಥಿಗಳು 500 ರೂ. ಅರ್ಜಿಶುಲ್ಕವನ್ನು ಆನ್​ಲೈನ್ ಮೂಲಕ ಪಾವತಿಸಬೇಕು.

ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ, ಕೌಶಲ ಪರೀಕ್ಷೆ ಮೂಲಕ ಅಭ್ಯರ್ಥಿಗಳ ಆಯ್ಕೆ ಮಾಡಲಾಗುವುದು. ಶಾರ್ಟ್​ಲಿಸ್ಟ್ ಮಾಡಲಾದ ಅಭ್ಯರ್ಥಿಗಳಿಗೆ ಪರೀಕ್ಷಾ ಕೇಂದ್ರ, ಸಮಯ, ದಿನಾಂಕ, ಪರೀಕ್ಷೆಯ ಪಠ್ಯ, ಲಿಖಿತ ಪರೀಕ್ಷೆಯ ಮಾದರಿ ಹಾಗೂ ಇತರ ಮಾಹಿತಿಯನ್ನು ನೀಡಲಾಗುವುದು.

ಅರ್ಜಿ ಸಲ್ಲಿಸಲು ಕೊನೇ ದಿನ: 20.8.2021

ಅಧಿಸೂಚನೆಗೆ: https://bit.ly/3eYqeQY

ಮಾಹಿತಿಗೆ: https://nift.ac.in

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net