

ಪವರ್ ಗ್ರಿಡ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್ ಕೇಂದ್ರ ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುವ ಸಂಸ್ಥೆಯಾಗಿದ್ದು, ಪ್ರಸ್ತುತ ಹರಿಯಾಣದ ಘಟಕದಲ್ಲಿ ವಿವಿಧ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಆಸಕ್ತ, ಅರ್ಹ ಅಭ್ಯಥಿರ್ಗಳುಅರ್ಜಿಸಲ್ಲಸಬಹುದು.
ಒಟ್ಟು ಸ್ಥಾನಗಳು: 97
ಪವರ್ ಗ್ರಿಡ್ ಸಂಸ್ಥೆಯಲ್ಲಿ ಪ್ರಾರಂಭಿಸುತ್ತಿರುವ ಟ್ಯಾರಿಫ್ ಬೇಸಡ್ ಕಾಂಪಿಟಿಟೀವ್ ಬಿಡ್ಡಿಂಗ್ (ಟಿಬಿಸಿಬಿ) ಯೋಜನೆಗೆ ಅಭ್ಯಥಿರ್ಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಈ ಹುದ್ದೆಯ ಕಾಲಾವಧಿಯು 1 ವರ್ಷ ಅಥವಾ ಯೋಜನೆ ಮುಗಿಯುವವರೆಗೆ ಇರುತ್ತದೆ. ನೇಮಕ ಮಾಡಿಕೊಳ್ಳಲಾಗುವ ಅಭ್ಯಥಿರ್ಗಳನ್ನು ದೇಶದ ಯಾವುದೇ ಭಾಗಕ್ಕೆ ಬೇಕಾದರೂ ನೇಮಕ ಮಾಡಬಹುದಾಗಿದೆ ಎಂದು ಸಂಸ್ಥೆ ತಿಳಿಸಿದೆ.
ಹುದ್ದೆ ವಿವರ
* ಫೀಲ್ಡ್ ಇಂಜಿನಿಯರ್ ಎಲೆಕ್ಟ್ರಿಕಲ್ - 30
* ಫೀಲ್ಡ್ ಇಂಜಿನಿಯರ್ ಸಿವಿಲ್ - 8
* ಫೀಲ್ಡ್ ಸೂಪರ್ವೈಸರ್ ಎಲೆಕ್ಟ್ರಿಕಲ್ - 47
* ಫೀಲ್ಡ್ ಸೂಪರ್ವೈಸರ್ ಸಿವಿಲ್ - 12
ವಿದ್ಯಾರ್ಹತೆ: ಎಲೆಕ್ಟ್ರಿಕಲ್ ಹಾಗೂ ಸಿವಿಲ್ ಇಂಜಿನಿಯರಿಂಗ್ನಲ್ಲಿ ಬಿಇ/ ಬಿ.ಟೆಕ್/ ಬಿಎಸ್ಸಿ ಪದವಿ ಪಡೆದಿದ್ದು ಕನಿಷ್ಠ ಶೇ.55 (ಎಸ್ಸಿ, ಎಸ್ಟಿ, ಅಂಗವಿಕಲ್ ಅಭ್ಯಥಿರ್ಗಳಿಗೆ ಉತ್ತೀರ್ಣ ಅಂಕ) ಅಂಕ ಪಡೆದಿರಬೇಕು. ಫೀಲ್ಡ್ ಸೂಪರ್ವೈಸರ್ ಹುದ್ದೆಗೆ ಪೂರ್ಣಾವಧಿಯ ಡಿಪ್ಲೊಮಾ ಮಾಡಿದ್ದು, ಕನಿಷ್ಠ ಶೇ.55 ಅಂಕ ಪಡೆದಿರಬೇಕು. ಎಂಇ/ ಎಂಟಿಕ್ ಮಾಡಿರುವ ಅಭ್ಯಥಿರ್ಗಳುಅರ್ಜಿಸಲ್ಲಿಸಬಹುದು.
ವಯೋಮಿತಿ: 9.5.2021ಕ್ಕೆ ಅನ್ವಯವಾಗುವಂತೆ ಗರಿಷ್ಠ 29 ವರ್ಷ. ಮೀಸಲಾತಿ ಅಭ್ಯಥಿರ್ಗಳಿಗೆ ಸರ್ಕಾರದ ನಿಯಮದನ್ವಯ ವಯೋ ಸಡಿಲಿಕೆ ಇದೆ.
ಮೀಸಲಾತಿ: ಸಾಮಾನ್ಯ ವರ್ಗದ ಅಭ್ಯಥಿರ್ಗಳಿಗೆ 42 ಸ್ಥಾನ, ಇತರ ಹಿಂದುಳಿದ ವರ್ಗಕ್ಕೆ 24, ಎಸ್ಸಿಗೆ 19, ಎಸ್ಟಿಗೆ 2, ಆಥಿರ್ಕವಾಗಿ ದುರ್ಬಲವಾಗಿರುವ ಅಭ್ಯಥಿರ್ಗಳಿಗೆ 9 ಸ್ಥಾನ ಮೀಸಲಿರಿಸಲಾಗಿದೆ. ಇದರಲ್ಲಿ ಮಾಜಿ ಸೈನಿಕರಿಗೆ 3 ಹಾಗೂ ಅಂಗವಿಕಲ ಅಭ್ಯಥಿರ್ಗಳಿಗೆ 5 ಸ್ಥಾನ ಕಾಯ್ದಿರಿಸಲಾಗಿದೆ.
ವೇತನ: ಫೀಲ್ಡ್ ಇಂಜಿನಿಯರ್ಗೆ ಮಾಸಿಕ 30,000 ರೂ. ವೇತನ ಜತೆ ಡಿಎ, ಮನೆ ಬಾಡಿಗೆ ಭತ್ಯೆ ನೀಡಲಾಗುವುದು. ಫೀಲ್ಡ್ ಸೂಪರ್ವೈಸರ್ ಹುದ್ದೆಗೆ ಮಾಸಿಕ 23,000 ರೂ, ವೇತನ ಜತೆ ಡಿಎ, ಮನೆ ಬಾಡಿಗೆ ಭತ್ಯೆ ನೀಡಲಾಗುವುದು. ವರ್ಷಕ್ಕೆ ಒಮ್ಮೆ ಶೇ.3 ರಷ್ಟು ವೇತನ ಹೆಚ್ಚಳ ಮಾಡಲಾಗುವುದು.
ಆಯ್ಕೆ ಪ್ರಕ್ರಿಯೆ: ಶಾರ್ಟ್ಲಿಸ್ಟ್ ಮಾಡಲಾದ ಅಭ್ಯಥಿರ್ಗಳನ್ನು ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು. ಸಲ್ಲಿಕೆಯಾದ ಅಜಿರ್ಗಳ ಸಂಖ್ಯೆ ಆಧರಿಸಿ ಸ್ಕ್ರೀನ್ ಟೆಸ್ಟ್ ನಡೆಸಬಹುದು. ಸಂದರ್ಶನವು ಹಿಂದಿ/ ಇಂಗ್ಲಿಷ್ನಲ್ಲಿರಲಿದೆ.
ಅಜಿರ್ ಶುಲ್ಕ: ಫೀಲ್ಡ್ ಇಂಜಿನಿಯರ್ ಹುದ್ದೆಗೆ 400 ರೂ., ಸೂಪರ್ವೈಸರ್ ಹುದ್ದೆಗೆ 300 ರೂ.ಅರ್ಜಿಶುಲ್ಕ ನಿಗದಿಪಡಿಸಲಾಗಿದೆ.
ಅರ್ಜಿ ಸಲ್ಲಿಸಲು ಕೊನೇ ದಿನ: 9.5.2021
ಅಧಿಸೂಚನೆಗೆ: https://bit.ly/3gQNAcM
ಮಾಹಿತಿಗೆ: http://www.powergrid.in