

ಪವರ್ ಗ್ರಿಡ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್ ಕೇಂದ್ರ ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುವ ಸಂಸ್ಥೆಯಾಗಿದ್ದು, ಪ್ರಸ್ತುತ ದೇಶಾದ್ಯಂತ ಇರುವ ಹಲವು ಪ್ರಾದೇಶಿಕ ಕಚೇರಿಗಳಲ್ಲಿ ಅಪ್ರೆಂಟೀಸ್ಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಪವರ್ ಗ್ರಿಡ್ ಸಂಸ್ಥೆಗೆ ನೇಮಕ ಮಾಡಿಕೊಳ್ಳಲಾಗುವ ಅಭ್ಯರ್ಥಿಗಳನ್ನು ದೇಶದ ಯಾವುದೇ ಭಾಗಕ್ಕೆ ಬೇಕಾದರೂ ನೇಮಕ ಮಾಡಬಹುದಾಗಿದೆ.
ಅಭ್ಯರ್ಥಿಗಳ ಮೆರಿಟ್ ಲಿಸ್ಟ್ ಆಧರಿಸಿ ಶಾರ್ಟ್ಲಿಸ್ಟ್ ಮಾಡಲಾದ ಅಭ್ಯರ್ಥಿಗಳಿಗೆ ದಾಖಲೆ ಪರಿಶೀಲನೆಗೆ ಆಹ್ವಾನಿಸಲಾಗುವುದು. ಅಂತಿಮ ವರ್ಷದ ಲಿತಾಂಶಕ್ಕೆ ಕಾಯುತ್ತಿರುವ, 18 ವರ್ಷ ಪೂರ್ಣಗೊಳ್ಳದ, ಇತರ ಸಂಸ್ಥೆಯಲ್ಲಿ ಅಪ್ರೆಂಟೀಸ್ ತರಬೇತಿ ಪಡೆದಿರುವ, ಒಂದು ವರ್ಷಕ್ಕಿಂತ ಹೆಚ್ಚು ವೃತ್ತಿ ಅನುಭವ ಇರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ ಎಂದು ತಿಳಿಸಲಾಗಿದೆ. ಗುರುಗ್ರಾಮ್, ರಿದಾಬಾದ್, ಜಮ್ಮು, ಲಖನೌ, ಪಟ್ನಾ, ಕೋಲ್ಕತ್ತಾ, ಶಿಲ್ಲಾಂಗ್, ಭುವನೇಶ್ವರ್, ನಾಗ್ಪುರ್, ವಡೋದರಗಳಲ್ಲೂ ಅಪ್ರೆಂಟೀಸ್ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಸ್ಥಾನಗಳ ವಿವರ
* ಐಟಿಐ ಅಪ್ರೆಂಟೀಸ್ (ಎಲೆಕ್ಟ್ರಿಕಲ್)
* ಡಿಪ್ಲೊಮಾ ಅಪ್ರೆಂಟೀಸ್ (ಸಿವಿಲ್/ ಎಲೆಕ್ಟ್ರಿಕಲ್ ಇಂಜಿನಿಯರಿಂಗ್)
* ಗ್ರಾಜುಯೇಟ್ ಅಪ್ರೆಂಟೀಸ್
* ಎಚ್ ಆರ್ ಎಕ್ಸಿಕ್ಯೂಟಿವ್
ಸೌತ್ ರೀಜನ್ ಐಐ ವಿವರ
ಸೌತ್ ರೀಜನ್ 2 ವಿಭಾಗದಲ್ಲಿ ಕರ್ನಾಟಕ, ಕೇರಳ, ತಮಿಳುನಾಡು ರಾಜ್ಯಗಳು ಒಳಗೊಂಡಿದ್ದು, ಕರ್ನಾಟಕದಲ್ಲಿ - 34, ತಮಿಳುನಾಡಿನಲ್ಲಿ - 59, ಕೇರಳದಲ್ಲಿ 21 ಸ್ಥಾನಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ.
ಸೌತ್ ರೀಜನ್ ಐ ವಿವರ
ಸೌತ್ ರೀಜನ್ 1ರಲ್ಲಿ ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಿದ್ದು, ಒಟ್ಟು 76 ಸ್ಥಾನಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ. ಆಂಧ್ರದಲ್ಲಿ 43 ಸ್ಥಾನ, ತೆಲಂಗಾಣದಲ್ಲಿ 33 ಸ್ಥಾನಗಳಿವೆ.
ಕರ್ನಾಟಕದ ವಿವರ
* ಐಟಿಐ - 10
* ಡಿಪ್ಲೊಮಾ - 10
* ಗ್ರಾಜುಯೇಟ್ 14
ವಿದ್ಯಾರ್ಹತೆ: ಎಲೆಕ್ಟ್ರಿಕಲ್, ಸಿವಿಲ್ ಇಂಜಿನಿಯರಿಂಗ್ನಲ್ಲಿ 3 ವರ್ಷದ ಡಿಪ್ಲೊಮಾ, 4 ವರ್ಷದ ಬಿಇ, ಬಿ.ಟೆಕ್, ಬಿಎಸ್ಸಿ ಮಾಡಿರಬೇಕು.
ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 27ವರ್ಷ ಇದ್ದು, ಮೀಸಲಾತಿ ಅಭ್ಯರ್ಥಿಗಳಿಗೆ ವಯೋಸಡಿಲಿಕೆ ಇದೆ.
ವೇತನ: ಐಟಿಐ ಅಪ್ರೆಂಟೀಸ್ಗೆ ಮಾಸಿಕ 11,000 ರೂ., ಡಿಪ್ಲೊಮಾಗೆ 12,000 ರೂ., ಗ್ರಾಜುಯೇಟ್ಗೆ 15,000 ರೂ. ಸ್ಟೆ$ಪೆಂಡ್ ನೀಡಲಾಗುವುದು. ಅಲ್ಲದೇ ವಸತಿ ವ್ಯವಸ್ಥೆಗೆಂದು 2,500 ರೂ. ನೀಡಲಾಗುವುದು.
ಸೂಚನೆ: ಆಸಕ್ತ ಅಭ್ಯರ್ಥಿಗಳು ಮೊದಲು ಅಪ್ರೆಂಟೀಸ್ಶಿಪ್ಇಂಡಿಯಾ ಅಥವಾ ಎಂಎಚ್ಆರ್ಡಿ ಪೋರ್ಟಲ್ನಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು. ಅಲ್ಲಿನ ನೋಂದಣಿ ಸಂಖ್ಯೆಯನ್ನು ಪವರ್ಗ್ರಿಡ್ಗೆ ಅರ್ಜಿಸಲ್ಲಿಸುವಾಗ ನಮೂದಿಸಲು ಸೂಚಿಸಲಾಗಿದೆ.
ಅರ್ಜಿ ಸಲ್ಲಿಸಲು ಕೊನೇ ದಿನ: 20.8.2021
ಅಧಿಸೂಚನೆಗೆ: https://bit.ly/3kB5dPD
ಮಾಹಿತಿಗೆ: http://www.powergridindia.com