

ಕರೊನಾ ಹಿನ್ನೆಲೆಯಲ್ಲಿ ಎಲ್ಲೆಡೆ ವೈದ್ಯಾಧಿಕಾರಿ ಹಾಗೂ ನರ್ಸ್ಗಳಿಗೆ ಬೇಡಿಕೆ ಹೆಚ್ಚಿದೆ. ಬೆಂಗಳೂರಿನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್‌ಮೆಂಟಲ್ ಹೆಲ್ತ್ ಆ್ಯಂಡ್ ನ್ಯೂರೋ ಸೈನ್ಸ್ನಲ್ಲಿ (ನಿಮ್ಹಾನ್ಸ್) ನರ್ಸಿಂಗ್‌ಆಫೀಸರ್ ಹಾಗೂ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಒಟ್ಟು ಹುದ್ದೆಗಳು: 275
ನಿಮ್ಹಾನ್ಸ್ನಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿರುವ 275 ಹುದ್ದೆಗಳಲ್ಲಿ 88 ಸ್ಥಾನಗಳನ್ನು ಸಾಮಾನ್ಯವರ್ಗದ ಅಭ್ಯರ್ಥಿಗೆ, 64 ಸ್ಥಾನ ಎಸ್ಸಿಗೆ, ಎಸ್ಟಿಗೆ 31 ಸ್ಥಾನ, ಇತರ ಹಿಂದುಳಿದ ವರ್ಗಕ್ಕೆ 66, ಆರ್ಥಿಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗಳಿಗೆ 25 ಸ್ಥಾನ ಮೀಸಲಿರಿಸಲಾಗಿದೆ. ನರ್ಸಿಂಗ್ ಅಧಿಕಾರಿ ಹುದ್ದೆಯಲ್ಲಿ ಶೇ.4 ಅಂಗವಿಕಲ ಅಭ್ಯರ್ಥಿಗಳಿಗೆ ಕಾಯ್ದಿರಿಸಲಾಗಿದೆ.
ನರ್ಸಿಂಗ್‌ಅಧಿಕಾರಿ ಹುದ್ದೆಗೆ ನಸಿರ್ಂಗ್ನಲ್ಲಿ ಬಿಎಸ್ಸಿ/ ಬಿಎಸ್ಸಿ (ಪೋಸ್ಟ್ ಸಟಿರ್ಫಿಕೇಟ್)/ ಬಿಎಸ್ಸಿ ನರ್ಸಿಂಗ್‌ಅನ್ನು ಇಂಡಿಯನ್ ನರ್ಸಿಂಗ್ಕೌನ್ಸಿಲ್ನಿಂದ ಪಡೆದಿದಿದ್ದು, ರಾಜ್ಯದ ನರ್ಸ್ಸ್ ಆ್ಯಂಡ್ ಮಿಡ್ವೈಫ್ನಲ್ಲಿ ನೋಂದಾಯಿತರಾಗಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. 50 ಹಾಸಿಗೆಯುಳ್ಳ ಆಸ್ಪತ್ರೆಯಲ್ಲಿ 2 ವರ್ಷದ ವೃತ್ತಿ ಅನುಭವವನ್ನು ಕೇಳಲಾಗಿದೆ. ಗರಿಷ್ಠ ವಯೋಮಿತಿ 35 ವರ್ಷ ನಿಗದಿಪಡಿಸಿದ್ದು, ಮಾಸಿಕ 44,900 ರೂ. ವೇತನ ಇದೆ.
ಇತರ ಹುದ್ದೆಗಳ ವಿವರ
* ಸೀನಿಯರ್ ಸೈಂಟಿಫಿಕ್ ಆಫೀಸರ್ (ನ್ಯೂರೋಮಸ್ಕುಲರ್) - 1
* ಕಂಪ್ಯೂಟರ್ ಪ್ರೋಗ್ರಾಮರ್ -1
* ಜೂನಿಯರ್ ಸೈಂಟಿಫಿಕ್ ಆಫೀಸರ್-ಸಬ್ ಸ್ಪೆಷಾಲಿಟಿ ಬ್ಲಾಕ್ -1
* ಸ್ಪೀಚ್ ಥೆರಪಿಸ್ಟ್ ಆ್ಯಂಡ್ ಆಡಿಯಾಲಜಿಸ್ಟ್ -3
* ಸೀನಿಯರ್ ಸೈಂಟಿಫಿಕ್ ಅಸಿಸ್ಟೆಂಟ್ (ಹ್ಯೂಮನ್ ಜೆನೆಟಿಕ್) -1
* ಟೀಚರ್ ಫಾರ್ ಎಂಆರ್ ಚಿಲ್ಡ್ರ್ನ್ -1
* ಅಸಿಸ್ಟೆಂಟ್ ಡೆಯಟೀಷಿಯನ್ -1
ವಿದ್ಯಾರ್ಹತೆ: ಹುದ್ದೆಗಳಿಗೆ ಅನುಗುಣವಾಗಿ ಸ್ಪಿಚ್ ಪ್ಯಾಥೋಲಜಿ/ ಆಡಿಯಾಲಜಿ, ಲೈ್ ಸೈನ್ಸ್ನಲ್ಲಿ ಸ್ನಾತಕೋತ್ತರ ಪದವಿ, ಕಂಪ್ಯೂಟರ್ ಅಪ್ಲಿಕೇಷನ್ನಲ್ಲಿ ಸ್ನಾತಕೋತ್ತರ ಡಿಪ್ಲೊಮಾ, ಎಂಡಿ/ ಎಂಬಿಬಿಎಸ್, ಬೇಸಿಕ್/ ಮೆಡಿಕಲ್ ಸೈನ್ಸ್ನಲ್ಲಿ ಪಿಎಚ್ಡಿ ಮಾಡಿರಬೇಕು.
ವಯೋಮಿತಿ: ಹುದ್ದೆಗಳಿಗೆ ಅನುಗುಣವಾಗಿ ಗರಿಷ್ಠ 30, 35, 40 ವರ್ಷ ನಿಗದಿಪಡಿಸಲಾಗಿದೆ.
ವೇತನ: ಸೀನಿಯರ್ ಸೈಂಟಿಫಿಕ್ ಆಫೀಸರ್ (ನ್ಯೋರೋಮಸ್ಕುಲರ್)ಗೆ ಮಾಸಿಕ 67,700 ರೂ., ಕಂಪ್ಯೂಟರ್ ಪ್ರೋಗ್ರಾಮರ್, ಸ್ಪೀಚ್ ಥೆರಪಿಸ್ಟ್, ಸೀನಿಯರ್ ಸೈಂಟಿಫಿಕ್ ಅಧಿಕಾರಿ, ಟೀಚರ್ ಹಾಗೂ ಅಸಿಸ್ಟೆಂಟ್ ಡಯಟೀಷಿಯನ್ಗೆ ಮಾಸಿಕ 35,400 ರೂ., ಜೂ.ಸೈಂಟಿಫಿಕ್ ಆಫೀಸರ್ಗೆ ಮಾಸಿಕ 44,900 ರೂ. ವೇತನ ಇದೆ.
ಅರ್ಜಿ ಶುಲ್ಕ: ಸೀನಿಯರ್ ಸೈಂಟಿಫಿಕ್ ಆಫೀಸರ್ ಹುದ್ದೆಗೆ ಎಸ್ಸಿ, ಎಸ್ಟಿ ಅಭ್ಯರ್ಥಿಗಳು 1,180 ರೂ., ಹಾಗೂ ಉಳಿದ ಅಭ್ಯರ್ಥಿಗಳು 2,360 ರೂ. ಪಾವತಿಸಬೇಕು. ಉಳಿದ ಹುದ್ದೆಗಳಿಗೆ ಎಸ್ಸಿ, ಎಸ್ಟಿ ಅಭ್ಯರ್ಥಿಗಳು 885 ರೂ., ಹಾಗೂ ಉಳಿದ ಅಭ್ಯರ್ಥಿಗಳು 1,180 ರೂ. ಪಾವತಿಸಬೇಕು.
ಅರ್ಜಿ ಸಲ್ಲಿಸಲು ಕೊನೇ ದಿನ: 28.6.2021
ಅರ್ಜಿ ಸಲ್ಲಿಕೆ ವಿಳಾಸ: Director, NIMHANS, P.B.No.2900, Hosur Road, Bengaluru – 560 029
ಅಧಿಸೂಚನೆಗೆ: https://bit.ly/3iA0P2i
ಮಾಹಿತಿಗೆ: www.nimhans.ac.in