

ಮೈಸೂರಿನ ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆ (ಎಐಐಎಸ್ಎಚ್) ವಿವಿಧ ಹುದ್ದೆಗಳಿಗೆ ರೆಗ್ಯುಲರ್ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ಅಧಿಸೂಚನೆ ಹೊರಡಿಸಿದೆ. ಒಟ್ಟು ಹುದ್ದೆಗಳು: 7
ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುವ ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಯಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿರುವ 7 ಹುದ್ದೆಗಳಲ್ಲಿ ಸಾಮಾನ್ಯ ವರ್ಗದ ಅಭ್ಯರ್ಥಿಗೆ 5 ಸ್ಥಾನ, ಎಸ್ಸಿಗೆ 1, ಇತರ ಹಿಂದುಳಿದ ವರ್ಗಕ್ಕೆ 1 ಸ್ಥಾನಗಳನ್ನು ಮೀಸಲಿರಿಸಲಾಗಿದೆ. ಹಲವು ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪ್ರತ್ಯೇಕ ಅರ್ಜಿ ಸಲ್ಲಿಸಬೇಕು.
ಹುದ್ದೆ ವಿವರ
* ಅಸಿಸ್ಟೆಂಟ್ ಆಡಿಟ್ ಆಫೀಸರ್ (ಐಎಸಿ) - 1
* ಸ್ಟಾಫ್ ನರ್ಸ್ - 4
* ಸೆಕ್ಯೂರಿಟಿ ಆಫೀಸರ್ - 1
* ಅಕೌಂಟೆಂಟ್ - 1
ಶೈಕ್ಷಣಿಕ ಅರ್ಹತೆ: ಅಸಿಸ್ಟೆಂಟ್ ಆಡಿಟ್ ಹುದ್ದೆಗೆ ಪದವಿ, ಎಸ್ಎಎಸ್ ಅಥವಾ ಐಎಸ್ಟಿಎಂನಲ್ಲಿ ಕ್ಯಾಶ್ ಆ್ಯಂಡ್ ಅಕೌಂಟೆನ್ಸಿಯಲ್ಲಿ 3 ತಿಂಗಳ ತರಬೇತಿ ಪಡೆದಿರಬೇಕು. ಕಂಪ್ಯೂಟರ್ ಜ್ಞಾನ ಅವಶ್ಯ.
ಸ್ಟಾಫ್ ನರ್ಸ್: ನರ್ಸಿಂಗ್ನಲ್ಲಿ ಬಿಎಸ್ಸಿ, 3 ವರ್ಷದ ಜನರಲ್ ನರ್ಸಿಂಗ್ ಡಿಪೆÇ್ಲಮಾ ಮಾಡಿರಬೇಕು. ಆಪರೇಷನ್ ಥಿಯೇಟರ್ನಲ್ಲಿ ಕೆಲಸ ಮಾಡಿ ಅನುಭವ ಇರುವವರಿಗೆ ಮೊದಲ ಆದ್ಯತೆ ನೀಡಲಾಗುವುದು.
ಸೆಕ್ಯುರಿಟಿ ಆಫೀಸರ್: ಪದವಿ ಜತೆ ಅಸಿಸ್ಟೆಂಟ್ ಸೆಕ್ಯುರಿಟಿ ಆಫೀಸರ್ ಆಗಿ ಸರ್ಕಾರಿ ಒಡೆತನ/ ಸರ್ಕಾರಿ ಅಂಗಸಂಸ್ಥೆಯಲ್ಲಿ ಕೆಲಸ ಮಾಡಿದ ಅನುಭವ ಅವಶ್ಯ.
ಅಕೌಂಟೆಂಟ್: ಕಾಮರ್ಸ್ ಪದವಿ ಜತೆ ಸರ್ಕಾರ ನೀತಿ-ನಿಯಮದ ಜ್ಞಾನ ಅವಶ್ಯ. ಕನಿಷ್ಠ 2 ವರ್ಷ ಅಕೌಂಟ್ಗೆ ಸಂಬಂಧಿಸಿದ ಕೆಲಸ ಮಾಡಿದ ಅನುಭವ ಹೊಂದಿರಬೇಕು.
ವಯೋಮಿತಿ: ಸ್ಟಾಫ್ ನರ್ಸ್ ಹುದ್ದೆಗೆ ಗರಿಷ್ಠ 35 ವರ್ಷ, ಉಳಿದ ಹುದ್ದೆಗಳಿಗೆ ಗರಿಷ್ಠ 30 ವರ್ಷ ವಯೋಮಿತಿ ನಿಗದಿಯಾಗಿದೆ. ಮೀಸಲಾತಿ ಅಭ್ಯರ್ಥಿಗಳಿಗೆ ವಯೋ ಸಡಿಲಿಕೆ ಇದೆ.
ಅರ್ಜಿ ಶುಲ್ಕ: ಸಾಮಾನ್ಯ ವರ್ಗ, ಇತರ ಹಿಂದುಳಿದ ವರ್ಗ, ಆರ್ಥಿಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗಳಿಗೆ 100 ರೂ., ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ 40 ರೂ., ಮಹಿಳಾ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.
ವೇತನ: 7ನೇ ವೇತನ ಶ್ರೇಣಿ ಅನ್ವಯ ಮಾಸಿಕ ಅಂದಾಜು 40,000 ರೂ. ನಿಂದ 50,000 ರೂ. ಇದೆ.
ಅರ್ಜಿ ಸಲ್ಲಿಸಲು ಕೊನೇ ದಿನ: 30.3.2021
ಅರ್ಜಿ ಸಲ್ಲಿಕೆ ವಿಳಾಸ: ಮುಖ್ಯ ಆಡಳಿತಾಧಿಕಾರಿ, ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆ, ಮಾನಸ ಗಂಗೋತ್ರಿ, ಮೈಸೂರು - 570 006
ಅಧಿಸೂಚನೆಗೆ: https://bit.ly/3ajKkmt ಮಾಹಿತಿಗೆ: https://aiishmysore.in ಹೆಚ್ಚಿನ ಉದ್ಯೋಗ ಸುದ್ದಿಗೆ ಕ್ಲಿಕ್ಕಿಸಿ: https://www.vijayavani.net/category/%e0%b2%89%e0%b2%a6%e0%b3%8d%e0%b2%af%e0%b3%8b%e0%b2%97-%e0%b2%ae%e0%b2%bf%e0%b2%a4%e0%b3%8d%e0%b2%b0/ ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ