ಐಟಿಐ ಮುಗಿಸಿದವರಿಗೆ ಮೈಸೂರಿನ ಇಸಿಐಎಲ್​ನಲ್ಲಿದೆ ಉದ್ಯೋಗಾವಕಾಶ- 45 ಹುದ್ದೆಗಳಿಗೆ ಆಹ್ವಾನ

udyoga-mysore
Published on

ಎಲೆಕ್ಟ್ರಾನಿಕ್ಸ್​ ಕಾರ್ಪೋರೇಷನ್‌ ಆಫ್‌ ​ ಇಂಡಿಯಾ ಲಿಮಿಟೆಡ್​ನ (ಇಸಿಐಎಲ್​) ಮೈಸೂರು ಘಟಕಕ್ಕೆ ಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗುತ್ತಿದೆ. ಈ ಸಂಬಂಧ ಅರ್ಹ, ಆಸಕ್ತ ಅಭ್ಯರ್ಥಿಗಳನ್ನು ನೇರ ಸಂದರ್ಶನಕ್ಕೆ ಆಹ್ವಾನಿಸಲಾಗಿದೆ.

ಒಟ್ಟು ಹುದ್ದೆಗಳು: 45

ಪರಮಾಣು ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುವ ಇಸಿಐಎಲ್​ನಲ್ಲಿ 4 ವರ್ಷದ ಒಪ್ಪಂದ ಮೇಲೆ ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗುತ್ತಿದೆ. ದೂರ ಶಿಕ್ಷಣ ಮೂಲಕ ಪಡೆದ ಪದವಿಗೆ ಮಾನ್ಯತೆ ಇಲ್ಲ.

ಹುದ್ದೆ ವಿವರ

* ಸೈಂಟಿಫಿಕ್​ ಅಸಿಸ್ಟೆಂಟ್​-ಎ - 6

* ಜೂನಿಯರ್​ ಆಟಿರ್ಸನ್​ - 39

ಯಾವ ವಿಭಾಗದಲ್ಲಿ ನೇಮಕ?

ಕೆಮಿಕಲ್​, ಎಲೆಕ್ಟ್ರಾನಿಕ್ಸ್​ ಆಫ್‌ ಯಂಡ್​ ಕಮ್ಯುನಿಕೇಷನ್​/ ಇನ್​ಸ್ಟ್ರುಮೆಂಟೇಷನ್​, ಎಲೆಕ್ಟ್ರಿಕಲ್​, ಫಿಟ್ಟರ್​ ಕೆಮಿಕಲ್​ ಪ್ಲಾಂಟ್​ ಆಪರೇಟರ್​ ವಿಭಾಗಗಳಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದೆ.

ವಿದ್ಯಾರ್ಹತೆ: ಎಲೆಕ್ಟ್ರಾನಿಕ್ಸ್​ ಆಫ್‌ ಯಂಡ್​ ಕಮ್ಯುನಿಕೇಷನ್​/ ಎಲೆಕ್ಟ್ರಿಷಿಯನ್​/ ಫಿಟ್ಟರ್​/ ಪವರ್​ ಎಲೆಕ್ಟ್ರಾನಿಕ್ಸ್​/ ಇಂಡಸ್ಟ್ರಿಯಲ್​ ಎಲೆಕ್ಟ್ರಾನಿಕ್ಸ್​/ ಇನ್​ಸ್ಟ್ರುಮೆಂಟೇಷನ್​/ ಪ್ರೋಸೆಸ್​ ಇನ್​ಸ್ಟ್ರುಮೆಂಟೇಷನ್​/ ಮೆಕ್ಯಾನಿಕಲ್​(ಫಿಟ್ಟರ್​/ ಡೀಸೆಲ್​ ಮೆಕ್ಯಾನಿಕ್​)ನಲ್ಲಿ 2 ವರ್ಷದ ಐಟಿಐ ಮಾಡಿರಬೇಕು. ಕೆಮಿಷ್ಟ್ರಿಯಲ್ಲಿ ಬಿಎಸ್ಸಿ/ 3 ವರ್ಷದ ಡಿಪ್ಲೊಮಾ ಮಾಡಿದ್ದು, ಕನಿಷ್ಠ ಶೇ.60 ಅಂಕ ಪಡೆದಿರಬೇಕು.

ವಯೋಮಿತಿ: ಎಲ್ಲ ಹುದ್ದೆಗಳಿಗೂ ಗರಿಷ್ಠ 25 ವರ್ಷ ನಿಗದಿಪಡಿಸಲಾಗಿದೆ. ಮೀಸಲಾತಿ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮದನ್ವಯ ವಯೋ ಸಡಿಲಿಕೆ ಇದೆ.

ವೇತನ: ಸೈಂಟಿಫಿಕ್​ ಅಸಿಸ್ಟೆಂಟ್​ ಹುದ್ದೆಗೆ ಮಾಸಿಕ 20,984 ರೂ. ವೇತನ ಇದೆ. ಜೂನಿಯರ್​ ಆಟಿರ್ಸನ್​ಗೆ 19,064 ರೂ. ವೇತನ ನಿಗದಿಪಡಿಸಲಾಗಿದೆ. ಯೂನಿಾಮ್​ರ್ ಹೊಲಿಗೆ ಹಾಗೂ ವಾಷಿಂಗ್​ ವೆಚ್ಚ, ಪಿಪಿಎ್​, ಪ್ರಯಾಣ ಭತ್ಯೆ, ಇಎಸ್​ಐ ಜತೆ ವಿಮಾ ಪರಿಹಾರ ನೀಡಲಾಗುವುದು.

ಮೀಸಲಾತಿ: ಸಾಮಾನ್ಯವರ್ಗದ ಅಭ್ಯರ್ಥಿಗಳಿಗೆ 21 ಸ್ಥಾನ, ಆಥಿರ್ಕವಾಗಿ ದುರ್ಬಲವಾಗಿರುವವರಿಗೆ 2, ಇತರ ಹಿಂದುಳಿದ ವರ್ಗದವರಿಗೆ 12, ಎಸ್ಸಿಗೆ 7, ಎಸ್ಟಿಗೆ 3 ಸ್ಥಾನಗಳನ್ನು ಮೀಸಲಿರಿಸಲಾಗಿದೆ. ಇದರಲ್ಲಿ 4 ಸ್ಥಾನಗಳನ್ನು ಅಂಗವಿಕಲ ಅಭ್ಯರ್ಥಿಗಳಿಗೆ ಕಾಯ್ದಿರಿಸಲಾಗಿದೆ.

ಆಯ್ಕೆ ಪ್ರಕ್ರಿಯೆ:

ಅಭ್ಯರ್ಥಿಗಳ ಶೈಕ್ಷಣಿಕ ಅಂಕ ಆಧರಿಸಿ ಶಾರ್ಟ್​ಲಿಸ್ಟ್​ ಮಾಡಲಾದ ಅಭ್ಯರ್ಥಿಗಳನ್ನು ಲಿಖಿತ ಹಾಗೂ ಟ್ರೇಡ್​ ಪರೀಕ್ಷೆಗೆ ಆಹ್ವಾನಿಸಲಾಗುವುದು. ನಂತರ ದಾಖಲೆ ಪರಿಶೀಲನೆ ನಡೆಸಿ ಸಂದರ್ಶನ ನಡೆಸಿ ಅಂತಿಮ ಪಟ್ಟಿ ಪ್ರಕಟಿಸಲಾಗುವುದು.

ಸಂದರ್ಶನ ನಡೆಯುವ ದಿನಾಂಕ: ಜೂನ್​ 15 ರಂದು ಬೆಳಗ್ಗೆ 10 ಗಂಟೆಗೆ.

ಸಂದರ್ಶನ ನಡೆಯುವ ಸ್ಥಳ: Atomic Energy Central School, RMP Yelwal Colony, Hunsur Road, Yelwal Post, Mysore - 571130

ಅಧಿಸೂಚನೆಗೆ: https://bit.ly/34AELwp

ಮಾಹಿತಿಗೆ: www.ecil.co.in

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net