10ನೇ ತರಗತಿ ಪಾಸ್​ ಆಗಿದ್ದೀರಾ? ಹಾಗಿದ್ದರೆ ನರೇಗಾ ಯೋಜನೆ ಅಡಿ ಕಾಯಕಮಿತ್ರ ಹುದ್ದೆಗಳಿಗೆ ಆಹ್ವಾನ

udyoga-2
Published on

ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿಯ ತಾಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ 25 ಗ್ರಾಮ ಪಂಚಾಯಿತಿಗಳಲ್ಲಿ ಖಾಲಿ ಇರುವ ಗ್ರಾಮ ಕಾಯಕಮಿತ್ರ ಹುದ್ದೆಗೆ ಅರ್ಜಿ ಆಹ್ವಾನಿಸಿ ಅಧಿಸೂಚನೆ ಹೊರಡಿಸಲಾಗಿದೆ. ಈ ಹುದ್ದೆಗೆ ಅರ್ಜಿ ಸಲ್ಲಿಸಲು ಮಹಿಳೆಯರಿಗೆ ಮಾತ್ರ ಅವಕಾಶವಿದೆ.

ಒಟ್ಟು ಹುದ್ದೆಗಳು: 25

ಅರ್ಜಿ ಸಲ್ಲಿಸಲು ಕೊನೇ ದಿನ: 10.4.2021

ಅರ್ಹತೆಗಳೇನು?

* ಕನಿಷ್ಠ 10ನೇ ತರಗತಿ ಉತ್ತೀರ್ಣರಾಗಿರಬೇಕು.

* ದಿನಾಂಕ 1.1.2021ಕ್ಕೆ ಅನ್ವಯಿಸುವಂತೆ ತಾವು ಅರ್ಜಿ ಸಲ್ಲಿಸುವ ಗ್ರಾಮ ಪಂಚಾಯಿತಿಯಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಕ್ರಿಯಾಶೀಲ ಜಾಬ್‍ಕಾರ್ಡ್ ಹೊಂದಿರಬೇಕು.

* ಅಭ್ಯರ್ಥಿಯು ಕಳೆದ 3 ವರ್ಷಗಳಲ್ಲಿ (2018-19, 2019-20, 2020-21) ಕನಿಷ್ಠ 2 ವರ್ಷ ಯೋಜನೆಯಡಿ ಅಕುಶಲ ಕೂಲಿಕಾರರಾಗಿ ಕೆಲಸ ನಿರ್ವಹಿಸಬೇಕು.

* ಗರಿಷ್ಠ 45 ವರ್ಷ ಮೀರಿರಬಾರದು.

* ಓದು- ಬರಹ ತಿಳಿದಿರಬೇಕು.

* ಆಯಾ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ವಾಸಿಸುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸತಕ್ಕದ್ದು.

* ಸಂವಹನ ಕೌಶಲ, ಉತ್ತಮ ನಾಯಕತ್ವ ಗುಣ ಹಾಗೂ ಸಮುದಾಯದೊಂದಿಗೆ ಸ್ಪಂದಿಸುವ ಗುಣ ಲಕ್ಷಣಗಳನ್ನು ಹೊಂದಿರಬೇಕು.

* ಗ್ರಾಮ ರೋಜ್‍ಗಾರ್ ಮಿತ್ರರು ಸಮುದಾಯ ಕಾರ್ಯನಿರ್ವಹಣೆ ಮಾಡಲು ನಿರ್ದಿಷ್ಟ ಸಮಯವನ್ನು ನೀಡಬೇಕಾಗಿದ್ದು, ಇದಕ್ಕೆ ಗ್ರಾಮ ರೋಜ್‍ಗಾರ್ ಮಿತ್ರರ ಕುಟುಂಬ ಮತ್ತು ಸಮಾಜ ಬೆಂಬಲವಾಗಿರಬೇಕು.

ಮಾಹಿತಿಗೆ: 080-29781057

ಗ್ರಾಮೀಣಾಭಿವೃದ್ಧಿ ಆಯುಕ್ತಾಲಯದಿಂದ ಇಂಟರ್ನ್‍ಗಳ ನೇಮಕ:

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಇಲಾಖೆಯಲ್ಲಿ ವಿವಿಧ ಜಿಲ್ಲಾ ಪಂಚಾಯಿತಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ ಮಹಾತ್ಮಗಾಂಧಿ ನರೇಗಾ ಯೋಜನೆಯ ಅನುಷ್ಠಾನದಲ್ಲಿ ಮತ್ತು ದಾಖಲೀಕರಣದಲ್ಲಿ ನೆರವು ನೀಡಲು 5 ಇಂಟರ್ನ್‍ಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ.

ಸಮಾಜವಿಜ್ಞಾನ/ ಸಿವಿಲ್ ಇಂಜಿನಿಯರಿಂಗ್‍ನಲ್ಲಿ ಪದವಿ/ ಸ್ನಾತಕೋತ್ತರ ಪದವಿ ಅಧ್ಯಯನ ಮಾಡಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಇಂಟರ್ನ್ ಅವಧಿಯು 3 ತಿಂಗಳದ್ದಾಗಿದ್ದು, ಅಗತ್ಯಕ್ಕೆ ಅನುಗುಣವಾಗಿ ಅವಧಿ ವಿಸ್ತರಿಸಲಾಗುವುದು. ಮಾಸಿಕ 15,000 ಗೌರವಧನ ಹಾಗೂ 2000 ರೂ. ಭತ್ಯೆ ನೀಡಲಾಗುವುದು.

ಇತರ ಅರ್ಹತೆಗಳು:

* ವಿದ್ಯಾರ್ಥಿಗಳು ನಿಯೋಜಿಸುವ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಪ್ರಯಾಣ ಮಾಡಲು ಹಾಗೂ ವಾಸ ಮಾಡಲು ಸಿದ್ಧರಿರಬೇಕು.

* ಇಂಟರ್ನ್‍ಶಿಪ್ ಕಾರ್ಯಕ್ರಮಗಳ ಅನುಭವ ಮತ್ತು ಕನ್ನಡ ಭಾಷೆ ಜ್ಞಾನ ಹೊಂದಿರುವ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುವುದು.

ಅರ್ಜಿ ಸಲ್ಲಿಸುವ ಮೇಲ್ ವಿಳಾಸ:rdc.internships@gmail.com

ಮಾಹಿತಿಗೆ: 080-22342163

ಹೆಚ್ಚಿನ ಉದ್ಯೋಗ ಸುದ್ದಿಗೆ ಕ್ಲಿಕ್ಕಿಸಿ:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net