

ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಅಧೀನದಲ್ಲಿ ಕಾರ್ಯ ನಿರ್ವಹಿಸುವ ಕಾಮಿರ್ಕರ ರಾಜ್ಯ ವಿಮಾ ನಿಗಮದಲ್ಲಿರುವ 151 ಉಪನಿರ್ದೇಶಕ (ಡೆಪ್ಯುಟಿ ಡೈರೆಕ್ಟರ್) ಹುದ್ದೆಗೆ ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ಅರ್ಜಿ ಆಹ್ವಾನಿಸಿ ಅಧಿಸೂಚನೆ ಹೊರಡಿಸಿದೆ.
ಒಟ್ಟಾರೆ ನೇಮಕಾತಿಯ 151 ಹುದ್ದೆಗಳಲ್ಲಿ ಎಸ್ಸಿಗೆ 23 ಸ್ಥಾನ, ಎಸ್ಟಿಗೆ 9, ಇತರ ಹಿಂದುಳಿದ ವರ್ಗಕ್ಕೆ 38, ಆಥಿರ್ಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗೆ 15, ಸಾಮಾನ್ಯವರ್ಗದ ಅಭ್ಯರ್ಥಿಗೆ 66 ಸ್ಥಾನ ಮೀಸಲಿರಿಸಲಾಗಿದೆ. ಇದರಲ್ಲಿ 4 ಸ್ಥಾನವನ್ನು ಅಂಗವಿಕಲ ಅಭ್ಯರ್ಥಿಗಳಿಗೆ ಕಾಯ್ದಿರಿಸಲಾಗಿದೆ.
ಆಯ್ಕೆಯಾದ ಅಭ್ಯರ್ಥಿಗಳನ್ನು ದೆಹಲಿಯಲ್ಲಿರುವ ಇಎಸ್ಐ ಕಾಪೋರ್ರೇಷನ್ನ ಮುಖ್ಯ ಕಚೇರಿ ಅಥವಾ ದೇಶದ ಯಾವುದೇ ಭಾಗಕ್ಕೆ ಬೇಕಾದರೂ ನೇಮಕ ಮಾಡಬಹುದಾಗಿದೆ. ಆನ್ಲೈನ್ನಲ್ಲಿ ಸಲ್ಲಿಕೆಯಾದ ಅರ್ಜಿಯ ಪ್ರತಿ ಪಡೆಯಲು ಸೆ.3 ಕೊನೇ ದಿನ ಎಂದು ತಿಳಿಸಲಾಗಿದೆ. ಎಸ್ಸಿ, ಎಸ್ಟಿ, ಅಂಗವಿಕಲ, ಮಹಿಳಾ ಅಭ್ಯರ್ಥಿಗಳನ್ನು ಹೊರತು ಪಡಿಸಿ ಉಳಿದ ಅಭ್ಯರ್ಥಿಗಳಿಗೆ 25 ರೂ. ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ.
*ವೃತ್ತಿ ಅನುಭವ
ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು. ಅಡ್ಮಿನಿಸ್ಟ್ರೆಷನ್/ ಅಕೌಂಟ್ಸ್/ ಮಾರ್ಕೆಟಿಂಗ್/ ಪಬ್ಲಿಕ್ ರಿಲೇಷನ್/ ಇನ್ಶುರೆನ್ಸ್/ ಆದಾಯ/ ತೆರಿಗೆ ಸಂಬಂಧಿತ ವಿಷಯಗಳಲ್ಲಿ ಸರ್ಕಾರ ಅಥವಾ ಸಾರ್ವಜನಿಕ ವಲಯ/ ಸ್ವಾಯತ್ತ ಸಂಸ್ಥೆಯಲ್ಲಿ ಕನಿಷ್ಠ 3 ವರ್ಷದ ವೃತ್ತಿ ಅನುಭವ ಹೊಂದಿರಬೇಕು. ಸಬ್ಆಡಿರ್ನೇಟ್ ಅಕೌಂಟ್ಸ್ ಸವಿರ್ಸ್/ ಕಾಸ್ಟ್ ಆ್ಯಂಡ್ ವರ್ಕ್ಸ್ ಅಕೌಂಟ್ಸ್ನಲ್ಲಿ ಉತ್ತೀರ್ಣತೆ/ ಎಂಬಿಎ (ೈನಾನ್ಸ್)/ ಕಾನೂನು ಪದವಿ ಪಡೆದಿರುವ ಹಾಗೂ ಸಾಮಾಜಿಕ ವಿಮೆ/ ಕಾಮಿರ್ಕ ಕಾನೂನುಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ವೃತ್ತಿ ಅನುಭವ ಹೊಂದಿರುವವರಿಗೆ ಅವಕಾಶ ನೀಡಲಾಗುವುದು.
ಗರಿಷ್ಠ 35 ವರ್ಷ ವಯೋಮಿತಿ ನಿಗದಿಪಡಿಸಿದ್ದು, ಮೀಸಲಾತಿ ಅಭ್ಯರ್ಥಿಗಳಿಗೆ ವಯೋಸಡಿಲಿಕೆ ಇದೆ. 7ನೇ ವೇತನ ಶ್ರೇಣಿಯ ಗ್ರೂಪ್ ಎ ಅನ್ವಯ 10ನೇ ಹಂತದ ವೇತನ ನೀಡಲಾಗುವುದು.
ಹುದ್ದೆಯ ಜವಾಬ್ದಾರಿ
* ಆಯಾ ಪ್ರದೇಶದಲ್ಲಿ ನೇಮಿಸಿದಾಗ ಅಲ್ಲಿನ ಪ್ರಾದೇಶಿಕ ನಿರ್ದೇಶಕರ ಕರ್ತವ್ಯಗಳಲ್ಲಿ ಸಹಾಯ ಮಾಡುವುದು. * ಮುಖ್ಯ ಕಚೇರಿಯಲ್ಲಿ ಜಂಟಿ ನಿರ್ದೇಶಕರಿಗೆ ಅವರ ಕರ್ತವ್ಯಗಳಲ್ಲಿ ಸಹಾಯ ಮಾಡುವುದು.
ಆಯ್ಕೆ ಪ್ರಕ್ರಿಯೆ: ಕಂಪ್ಯೂಟರ್ ಆಧಾರಿತ ನೇಮಕಾತಿ ಪರೀೆ/ ನೇಮಕಾತಿ ಪರೀೆ ನಡೆಸಿ ಶಾರ್ಟ್ಲಿಸ್ಟ್ ಮಾಡಲಾದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಹ್ವಾನಿಸಲಾಗುವುದು. ಇದರ ದಿನಾಂಕವನ್ನು ಶಾರ್ಟ್ಲಿಸ್ಟ್ ಮಾಡಲಾದ ಅಭ್ಯರ್ಥಿಗಳಿಗೆ ತಿಳಿಸಲಾಗುವುದು.
ಅರ್ಜಿ ಸಲ್ಲಿಸಲು ಕೊನೇ ದಿನ: 2.9.2021
ಅಧಿಸೂಚನೆಗೆ: https://bit.ly/3Dhsg99
ಮಾಹಿತಿಗೆ: www.upsc.gov.inhttps://www.vijayavani.net/s-anganawadi-udyogavarte/