ಬಿಇ, ಬಿಟೆಕ್‌ ಪದವೀಧರರಾ? ಕರಾವಳಿ ರಕ್ಷಣಾ ಪಡೆಯಿಂದ 50 ಹುದ್ದೆಗಳಿಗೆ ಅರ್ಜಿ ಆಹ್ವಾನ

coastgurard
Published on

ಇಂಡಿಯನ್ ಕೋಸ್ಟ್ ಗಾರ್ಡ್​ನ (ಕರಾವಳಿ ರಕ್ಷಣಾ ಪಡೆ) ವಿವಿಧ ವಿಭಾಗಗಳಲ್ಲಿರುವ ವಿವಿಧ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭವಾಗಿದ್ದು, ಯುವ, ಪ್ರತಿಭಾವಂತ ಯುವಕ, ಯುವತಿಯರಿಂದ ಅರ್ಜಿ ಆಹ್ವಾನಿಸಲಾಗಿದೆ. ಆನ್​ಲೈನ್ ಅರ್ಜಿಗಳಿಗೆ ಮಾತ್ರ ಮಾನ್ಯತೆ ಎಂದು ತಿಳಿಸಲಾಗಿದೆ. ಮೀಸಲಾತಿ ಅಭ್ಯರ್ಥಿಗಳಿಗೆ ವಯೋಸಡಿಲಿಕೆ ಇದೆ. ಡಿ.6ರಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದ್ದು, ಅಂದಿನಿಂದ ವೆಬ್​ಸೈಟ್​ನಲ್ಲಿ ಅರ್ಜಿ ಲಭ್ಯವಾಗಲಿದೆ.

ಹುದ್ದೆ ವಿವರ

*ಜನರಲ್ ಡ್ಯೂಟಿ- 30

ಪಿಯುಸಿಯಲ್ಲಿ ಮ್ಯಾಥಮೆಟಿಕ್ಸ್, ಫಿಜಿಕ್ಸ್ ಅಧ್ಯಯನ ಮಾಡಿದ್ದು, ಬಿಇ, ಬಿಟೆಕ್ ಪದವಿಯಲ್ಲಿ ಕನಿಷ್ಠ ಶೇ.60 ಅಂಕ ಪಡೆದಿರಬೇಕು. 1997ರ ಜು.1 ರಿಂದ 2001ರ ಜೂ.30ರ ನಡುವೆ ಜನಿಸಿರುವ ಪುರುಷ ಅಭ್ಯರ್ಥಿಗಳಿಗೆ ಮಾತ್ರ ಅವಕಾಶವಿದೆ.

* ಕಮರ್ಷಿಯಲ್ ಫೈಲಟ್ ಎಂಟ್ರಿ- 10

ದ್ವಿತೀಯ ಪಿಯುಸಿ (ಫಿಜಿಕ್ಸ್, ಗಣಿತ) ಅಧ್ಯಯನ ಮಾಡಿದ್ದು, ಕನಿಷ್ಠ ಶೇ.60 ಅಂಕ ಪಡೆದಿರಬೇಕು. ಡೈರೆಕ್ಟರ್ ಜನರಲ್ ಆಫ್ ಸಿವಿಲ್ ಏವಿಯೇಷನ್​ನಿಂದ (ಡಿಜಿಸಿಎ) ಮಾನ್ಯತೆ ಪಡೆದಿರುವ ಕಮರ್ಷಿಯಲ್ ಫೈಲಟ್ ಲೈಸೆನ್ಸ್ ಹೊಂದಿರಬೇಕು. 1997ರ ಜು.1 ರಿಂದ 2003ರ ಜೂ.30ರ ನಡುವೆ ಜನಿಸಿರಬೇಕು. ಈ ಹುದ್ದೆಗೆ ಮಹಿಳಾ ಅಭ್ಯರ್ಥಿಗಳಿಗೂ ಅವಕಾಶ ಇದೆ.

* ಟೆಕ್ನಿಕಲ್ (ಇಂಜಿನಿಯರಿಂಗ್-6, ಎಲೆಕ್ಟ್ರಿಕಲ್-4) - 10

ದ್ವಿತೀಯ ಪಿಯುಸಿಯ ಫಿಜಿಕ್ಸ್, ಗಣಿತ ವಿಷಯದಲ್ಲಿ ಶೇ.60 ಅಂಕ ಪಡೆದಿರಬೇಕು/ 3 ವರ್ಷದ ಡಿಪ್ಲೊಮಾದಲ್ಲಿ ಶೇ.60 ಪಡೆದಿರಬೇಕು. ಇಂಜಿನಿಯರಿಂಗ್ ಪದವಿಯಲ್ಲಿ ಕನಿಷ್ಠ ಶೇ.60 ಅಂಕ ಪಡೆದಿದ್ದು, ಇನ್​ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ (ಇಂಡಿಯಾ) ನಡೆಸುವ ಸೆಕ್ಷನ್ ಎ ಮತ್ತು ಬಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಪುರುಷ ಅಭ್ಯರ್ಥಿಗಳಿಗೆ ಮಾತ್ರ ಅವಕಾಶ ಇದ್ದು, 1997ರ ಜು.1 ರಿಂದ 2001ರ ಜೂ.30ರ ನಡುವೆ ಜನಿಸಿರಬೇಕು. ಇಂಜಿನಿಯರಿಂಗ್ ವಿಭಾಗದ ಹುದ್ದೆಗೆ ನಾವಲ್ ಆರ್ಕಿಟೆಕ್ಚರ್/ ಮೆಕಾನಿಕಲ್/ ಮರೈನ್/ ಆಟೋಮೋಟೀವ್/ ಮೆಕೊ್ಟ್ರೕನಿಕ್ಸ್/ ಇಂಡಸ್ಟ್ರಿಯಲ್ ಆಂಡ್ ಪ್ರೊಡಕ್ಷನ್/ ಮೆಟಲರ್ಜಿ/ ಡಿಸೈನ್/ ಏರೋನಾಟಿಕಲ್/ ಏರೋಸ್ಪೇಸ್​ನಲ್ಲಿ ಇಂಜಿನಿಯರಿಂಗ್ ಮಾಡಿರಬೇಕು. ಎಲೆಕ್ಟ್ರಿಕಲ್ ವಿಭಾಗದ ಹುದ್ದೆಗೆ ಎಲೆಕ್ಟ್ರಿಕಲ್/ ಎಲೆಕ್ಟ್ರಾನಿಕ್ಸ್/ ಟೆಲಿಕಮ್ಯುನಿಕೇಷನ್/ ಇನ್​ಸ್ಟ್ರುಮೆಂಟೇಷನ್/ ಇನ್​ಸ್ಟ್ರುಮೆಂಟೇಷನ್ ಆಂಡ್ ಕಂಟ್ರೋಲ್/ ಎಲೆಕ್ಟ್ರಾನಿಕ್ಸ್ ಆಂಡ್ ಕಮ್ಯುನಿಕೇಷನ್/ ಪವರ್ ಇಂಜಿನಿಯರಿಂಗ್/ ಪವರ್ ಎಲೆಕ್ಟ್ರಾನಿಕ್ಸ್​ನಲ್ಲಿ ಪದವಿ ಪಡೆದಿರಬೇಕು.

ಆಯ್ಕೆ ಪ್ರಕ್ರಿಯೆ: ಶಾರ್ಟ್​ಲಿಸ್ಟ್ ಮಾಡಲಾದ ಅಭ್ಯರ್ಥಿಗಳನ್ನು ಗೋವಾ, ಚೆನ್ನೈ, ಕೋಲ್ಕತ್ತ, ನೋಯ್ಡಾದಲ್ಲಿ ನಡೆಯುವ ಪ್ರಿಲಿಮಿನರಿ ಪರೀಕ್ಷೆಗೆ ಆಹ್ವಾನಿಸಲಾಗುವುದು. ಅಭ್ಯರ್ಥಿಗಳು ಯಾವುದಾದರೊಂದು ಕೇಂದ್ರಕ್ಕೆ ಆದ್ಯತೆ ನೀಡಬೇಕು. 2022ರ ಏಪ್ರಿಲ್​ನಲ್ಲ ಅಂತಿಮ ಆಯ್ಕೆ ಪ್ರಕ್ರಿಯೆ ನಡೆಸಲಾಗುವುದು.

ದೈಹಿಕ ದೃಢತೆ: ಎತ್ತರ: 157-162 ಸೆಂ.ಮೀ., ಅಭ್ಯರ್ಥಿಗಳ ಎತ್ತರ, ವಯಸ್ಸನ್ನು ಆಧರಿಸಿ ನಿರ್ಧರಿಸಲಾಗುವುದು. ಎದೆಯ ಸುತ್ತಳತೆ ಉಬ್ಬಿಸಿದಾಗ 5ಸೆಂ.ಮೀ. ಹೆಚ್ಚಾಗಬೇಕು. ದೃಷ್ಟಿದೋಷ ಇರಬಾರದು. ದೇಹದ ಯಾವುದೇ ಭಾಗದಲ್ಲಿ ಟ್ಯಾಟು (ಹಚ್ಚೆ) ಇರಬಾರದು.

ಅರ್ಜಿ ಸಲ್ಲಿಸಲು ಕೊನೇ ದಿನ: 17.12.2021

ಅಧಿಸೂಚನೆಗೆ: -https://bit.ly/3rkfGST

ಮಾಹಿತಿಗೆ: http://oinindiancoastguard.gov.in/

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net