

ಮುಂಬೈನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (ಎಸ್‍ಬಿಐ) ಸ್ಪೆಷಲಿಸ್ಟ್ ಕೇಡರ್ ಆಫೀಸರ್ ವಿಭಾಗದಲ್ಲಿ 16 ಫೈರ್ ಇಂಜಿನಿಯರ್ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಜೂನಿಯರ್ ಮ್ಯಾನೇಜ್‍ಮೆಂಟ್ ಗ್ರೇಡ್ ಸ್ಕೇಲ್- ಐರ ಅಧೀನದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಸಾಮಾನ್ಯ ವರ್ಗಕ್ಕೆ 8, ಎಸ್‍ಸಿಗೆ 2, ಎಸ್ಟಿಗೆ 1, ಇತರ ಹಿಂದುಳಿದ ವರ್ಗಕ್ಕೆ 4, ಆರ್ಥಿಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗಳಿಗೆ 1 ಸ್ಥಾನ ಮೀಸಲಿರಿಸಲಾಗಿದೆ.
ಏನು ಓದಿರಬೇಕು?: ನ್ಯಾಷನಲ್ ಫೈರ್ ಸರ್ವಿಸ್ ಕಾಲೇಜ್‍ನಿಂದ ಫೈರ್‍ನಲ್ಲಿ ಬಿ.ಇ ಪದವಿ, ಡಿವಿಷನಲ್ ಆಫೀಸರ್ ಕೋರ್ಸ್, ಸೇಫ್ಟಿ ಆ್ಯಂಡ್ ಫೈರ್, ಫೈರ್ ಟೆಕ್ನಾಲಜಿ ಆ್ಯಂಡ್ ಸೇಫ್ಟಿ ಇಂಜಿನಿಯರಿಂಗ್‍ನಲ್ಲಿ ಬಿ.ಟೆಕ್, ಫೈರ್‍ನಲ್ಲಿ ಬಿಎಸ್ಸಿ, ಭಾರತ/ ಯುಕೆಯ ಇನ್‍ಸ್ಟಿಟ್ಯೂಟ್ ಆಫ್ ಫೈರ್ ಇಂಜಿನಿಯರಿಂಗ್‍ನಲ್ಲಿ ಪದವಿ.
ವಯಸ್ಸೆಷ್ಟು?: 31.12.2020ಕ್ಕೆ ಗರಿಷ್ಠ 40 ವರ್ಷ.
ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳ ಶೈಕ್ಷಣಿಕ ಅಂಕ, ವೃತ್ತಿ ಅನುಭವ ಆಧರಿಸಿ ಶಾರ್ಟ್ ಲಿಸ್ಟ್ ಸಿದ್ಧಪಡಿಸಿ, ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು.
ಅರ್ಜಿ ಶುಲ್ಕ: ಎಸ್ಸಿ, ಎಸ್ಟಿ ಅಭ್ಯರ್ಥಿಗಳನ್ನು ಹೊರತು ಪಡಿಸಿ ಉಳಿದ ಅಭ್ಯರ್ಥಿಗಳು 750 ರೂ. ಪಾವತಿಸಬೇಕು.
ಅರ್ಜಿ ಸಲ್ಲಿಸಲು ಕೊನೆಯ ದಿನ: 11.1.2021
ಅಧಿಸೂಚನೆಗೆ: https://bit.ly/2M2RemE
ಮಾಹಿತಿಗೆ: https://bank.sbi/web/careers
ಇನ್ನೂ ಹೆಚ್ಚಿನ ಉದ್ಯೋಗಗಳ ಮಾಹಿತಿಗೆ https://www.vijayavani.net/ ವಿಭಾಗದ ಅಂಕಣ ಕಾಲಂನಲ್ಲಿ ಉದ್ಯೋಗಮಿತ್ರ ಕ್ಲಿಕ್ಕಿಸಿ.