

ಐಟಿಐ ಲಿಮಿಟೆಡ್ 1948ರಲ್ಲಿ ದೂರಸಂಪರ್ಕ ಮತ್ತು ತಂತ್ರಜ್ಞಾನ ಇಲಾಖೆಯಡಿಯಲ್ಲಿ ಸ್ಥಾಪನೆಯಾದ ಸಾರ್ವಜನಿಕ ವಲಯ ಉದ್ಯಮವಾಗಿದೆ. ಬೆಂಗಳೂರು, ನೈನಿ, ರಾಯ್ಬರೇಲಿ, ಮಂಕಾಪುರ ಮತ್ತು ಪಾಲಕ್ಕಾಡ್ನಲ್ಲಿ ಉತ್ಪಾದನಾ ಘಟಕಗಳನ್ನು ಹೊಂದಿದ್ದು, ದೂರಸಂಪರ್ಕಕ್ಕೆ ಸಂಬಂಧಿಸಿದ ಸಮಸ್ಯೆಗೆ ಪರಿಹಾರ ಪೂರೈಸುವ ಹಾಗೂ ಹೊಸ ಪೀಳಿಗೆಯ ಟೆಲಿಕಾಂ ಉತ್ಪನ್ನಗಳ ತಯಾರಿಕೆಯಲ್ಲಿ ತೊಡಗಿಕೊಂಡಿದೆ. ಪ್ರಸ್ತುತ ಬೆಂಗಳೂರಿನ ಕಚೇರಿಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳು ಕನಿಷ್ಠ 5 ವರ್ಷದ ಅವಧಿಗೆ ಒಳಪಟ್ಟಿದೆ.
ಹುದ್ದೆ ವಿವರ
* ಅಸಿಸ್ಟೆಂಟ್ ಎಕ್ಸಿಕ್ಯೂಟೀವ್ ಇಂಜಿನಿಯರ್ (ಎಇಇ-ಗ್ರೇಡ್ 2)- 12
* ಡೆಪ್ಯುಟಿ ಮ್ಯಾನೇಜರ್/ ಮ್ಯಾನೇಜರ್ (ಗ್ರೇಡ್ 4/5) - 8
ಕೆಲಸದ ವಿವರ/ ಇತರ ಅರ್ಹತೆಗಳು
* ಮೊಬೈಲ್ ನೆಟ್ವರ್ಕ್ ನಿಯೋಜನೆಯಲ್ಲಿ ಅನುಭವ- ಮುಖ್ಯವಾಗಿ 4ಜಿ ತಂತ್ರಜ್ಞಾನ ಮತ್ತು ಆರ್ಎಫ್ನಲ್ಲಿ ಜ್ಞಾನ ಹೊಂದಿರಬೇಕು.
* ಎಸ್ಎಸಿಎಫ್ಎ ಹಾಗೂ ಡಬ್ಲ್ಯುಪಿಸಿ ಜ್ಞಾನ
* ಟೆಲಿಕಾಂ ಇಂಡಸ್ಟ್ರಿಯಲ್ಲಿ ಪರಿಣಿತಿ
* ಸಿಗ್ನಲ್ ಸಿಸ್ಟಮ್್ಸ ಮತ್ತು ತಂತ್ರಜ್ಞಾನದ ಕಾರ್ಯಾಚರಣೆಯ ಜ್ಞಾನ
* ಫೈಬರ್ ಆಪ್ಟಿಕ್ ಮತ್ತು ಎಸಿಸಿಇಎಸ್ಎಸ್ ನೆಟ್ವರ್ಕ್ಗಳ ಜ್ಞಾನ
* ಎಂಎಂಇ, ಇಪಿಸಿ, ಎಚ್ಎಸ್ಎಸ್, ಎಸ್ಜಿಡಬ್ಲ್ಯು ನಂತಹ ಅಂಶಗಳೊಂದಿಗೆ ಕೋರ್ ನೆಟ್ವರ್ಕ್ನ ಜ್ಞಾನ
* ಆರ್ಎಎನ್ ಮತ್ತು ಟಿಎಕ್ಸ್ ನೋಡ್ನ ಏಕೀಕರಣ ಮತ್ತು ಕಾರ್ಯಾರಂಭ
* ಆರ್ಎಎನ್ ಮತ್ತು ಮೈಕ್ರೋವೇವ್ನ ವಿನ್ಯಾಸ ಮತ್ತು ಅನುಷ್ಠಾನವನ್ನು ವಿತರಿಸುವುದು.
* ಟೆಲಿಕಾಂ ಟವರ್ ಕಟ್ಟಡದ ತಾಂತ್ರಿಕ ಅಂಶಗಳನ್ನು ಅರ್ಥಮಾಡಿಕೊಳ್ಳುವುದು
* ಆಂಟೆನಾಗಳು, ಸಿಒಎಕ್ಸ್ ಮತ್ತು ಫೈಬರ್ ಆಪ್ಟಿಕ್ ಕೇಬಲ್ಗಳನ್ನು ಪರೀಕ್ಷಿಸುವುದು ಸೇರಿ ಇತರ ಜವಾಬ್ದಾರಿಗಳಿರುತ್ತದೆ.
ವಿದ್ಯಾರ್ಹತೆ: ಸಿವಿಲ್ ಇಂಜಿನಿಯರಿಂಗ್, ಎಲೆಕ್ಟ್ರಾನಿಕ್ಸ್ ಆಂಡ್ ಕಮ್ಯುನಿಕೇಷನ್/ ಎಲೆಕ್ಟ್ರಾನಿಕ್ಸ್/ ಟೆಲಿಕಮ್ಯುನಿಕೇಷನ್/ ಕಂಪ್ಯೂಟರ್ ಸೈನ್ಸ್/ ಇನ್ಫಮೇಷನ್ ಟೆಕ್ನಾಲಜಿ ಇಂಜಿನಿಯರಿಂಗ್ನಲ್ಲಿ ಬಿಇ/ ಬಿ.ಟೆಕ್ ಪದವಿ ಪಡೆದಿದ್ದು, ಸಾಮಾನ್ಯವರ್ಗ ಅಭ್ಯರ್ಥಿಗಳು ಶೇ.60, ಮೀಸಲಾತಿ ಆಭ್ಯರ್ಥಿಗಳು ಶೇ.58 ಅಂಕ ಪಡೆದಿರಬೇಕು. ಕನಿಷ್ಠ ವೃತ್ತಿ ಅನುಭವ ಕೇಳಲಾಗಿದೆ.
ವಯೋಮಿತಿ: ಎಇಇ ಹುದ್ದೆಗೆ ಗರಿಷ್ಠ 30 ವರ್ಷ, ಮ್ಯಾನೇಜರ್ ಹುದ್ದೆಗೆ ಗರಿಷ್ಠ 40 ವರ್ಷ ವಯೋಮಿತಿ ನಿಗದಿಪಡಿಸಲಾಗಿದ್ದು, ಮೀಸಲಾತಿ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮದನ್ವಯ ವಯೋಸಡಿಲಿಕೆ ಇದೆ.
ವೇತನ: ಮ್ಯಾನೇಜರ್ ಗ್ರೇಡ್4 ಹುದ್ದೆಗೆ ಮಾಸಿಕ 65,195 ರೂ., ಗ್ರೇಡ್ 5ಗೆ ಮಾಸಿಕ 72,717 ರೂ. ಹಾಗೂ ಎಇಇಗೆ ಮಾಸಿಕ 43,129 ರೂ. ವೇತನ ಜತೆ ಗ್ರಾಚುಟಿ, ಪಿಎಫ್, ವೈದ್ಯಕೀಯ ಸೌಲಭ್ಯ, ರಜೆ ಭತ್ಯೆ ಹಾಗೂ ಇತರ ಸೌಕರ್ಯ ಹಾಗೂ ಭತ್ಯೆ ನೀಡಲಾಗುವುದು.
ಆನ್ಲೈನ್ ಅರ್ಜಿ ಸಲ್ಲಿಸಲು ಕೊನೇ ದಿನ: 11.11.2021
ಅಂಚೆ ಮೂಲಕ ಅರ್ಜಿ ಸಲ್ಲಿಕೆಗೆ ಕೊನೆಯ ದಿನ: 15.11.2021
ಅಂಚೆ ವಿಳಾಸ: ENERAL MANAGER-HR ITI LIMITED, REGD & CORPORATE OFFICE ITI BHAVAN, DOORAVANI NAGAR, BENGALURU – 560016
ಅಧಿಸೂಚನೆಗೆ: https://bit.ly/2ZIxgVD
ಮಾಹಿತಿಗೆ: http://www.itiltd.in