ಐಟಿಐ ಪಾಸಾಗಿದ್ದೀರಾ? ಹಾಗಿದ್ದರೆ ಇಲ್ಲಿದೆ ನಿಮಗೆ ಉದ್ಯೋಗಾವಕಾಶ

udyogamitra-ITI
Published on

ಕೌನ್ಸಿಲ್ ಆಫ್​ ಸೈಂಟಿಫಿಕ್ ಆ್ಯಂಡ್ ಇಂಡಸ್ಟ್ರಿಯಲ್ ರಿಸರ್ಚ್ (ಸಿಎಸ್‍ಐಆರ್) ಅಧೀನದಲ್ಲಿ ಕಾರ್ಯ ನಿರ್ವಹಿಸುವ ನಾರ್ಥ್‍ಈಸ್ಟ್ ಇನ್‍ಸ್ಟಿಟ್ಯೂಟ್ ಆಫ್​ ಸೈನ್ಸ್ ಆ್ಯಂಡ್ ಟೆಕ್ನಾಲಜಿಯಲ್ಲಿ ವಿವಿಧ ಹುದ್ದೆಗಳು ಖಾಲಿ ಇದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿ ಅಧಿಸೂಚನೆ ಹೊರಡಿಸಲಾಗಿದೆ.

ಹುದ್ದೆಗಳಲ್ಲಿ ಮೀಸಲಾತಿ ನಿಗದಿಯಾಗಿದ್ದು, ಸಾಮಾನ್ಯವರ್ಗಕ್ಕೆ 21 ಸ್ಥಾನ, ಎಸ್‍ಟಿಗೆ 5, ಎಸ್‍ಸಿಗೆ 2, ಅಂಗವಿಕಲರಿಗೆ-2, ಆರ್ಥಿಕವಾಗಿ ಹಿಂದುಳಿದ ವರ್ಗ -3, ಇತರ ಹಿಂದುಳಿದ ವರ್ಗಕ್ಕೆ -2 ಸ್ಥಾನಗಳನ್ನು ಮೀಸಲಿರಿಸಲಾಗಿದೆ. ಮಾಸಿಕ 19,900 ರೂ. ವೇತನ ನಿಗದಿಯಾಗಿದೆ.

ಹುದ್ದೆ, ಸಂಖ್ಯೆ ವಿವರ

* ಎಲೆಕ್ಟ್ರಿಷಿಯನ್ - 2

* ಮೆಕ್ಯಾನಿಕ್ (ಮೆಷಿನ್ ಟೂಲ್ ಮೈಂಟೇನೆನ್ಸ್) - 3

* ಕಾರ್ಪೆಂಟರ್ - 1

* ಸಿವಿಲ್ ಇಂಜಿನಿಯರ್ ಅಸಿಸ್ಟೆಂಟ್ - 2

* ಆಗ್ರೋ ಪ್ರೊಸೆಸಿಂಗ್ - 4

* ಇನ್‍ಸ್ಟ್ರುಮೆಂಟ್ ಮೆಕ್ಯಾನಿಕ್ - 2

* ಪ್ಲಂಬರ್ - 2

* ವೆಲ್ಡರ್ (ಫ್ಯಾಬ್ರಿಕೇಷನ್ ಆ್ಯಂಡ್‍ಫಿಟ್ಟಿಂಗ್ ) - 2

* ಮೆಕ್ಯಾನಿಕ್ (ರೆಫ್ರಿಜರೇಟರ್ ಆ್ಯಂಡ್ ಏರ್ ಕಂಡಿಷನಿಂಗ್)- 2

* ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್ - 2

* ಕಂಪ್ಯೂಟರ್ ಹಾರ್ಡ್‍ವೇರ್ ಆ್ಯಂಡ್ ನೆಟ್‍ವರ್ಕ್ ಮೈಂಟೇನೆನ್ಸ್ - 2

* ಕಂಪ್ಯೂಟರ್ ಆಪರೇಟರ್ ಆ್ಯಂಡ್ ಪ್ರೋಗ್ರಾಮಿಂಗ್ ಅಸಿಸ್ಟೆಂಟ್ - 4

* ಮೆಡಿಕಲ್ ಲ್ಯಾಬ್ ಟೆಕ್ನೀಷಿಯನ್ (ಕ್ಲಿನಿಕಲ್ ಪಾಥೋಲಜಿ) - 2

* ಲ್ಯಾಬೊರೇಟರಿ ಅಸಿಸ್ಟೆಂಟ್ (ಕೆಮಿಕಲ್ ಪ್ಲಾಂಟ್) - 5

ಶೈಕ್ಷಣಿಕ ಅರ್ಹತೆ:

ಎಸ್‍ಎಸ್‍ಸಿ, 10ನೇ ತರಗತಿ ವಿಜ್ಞಾನದಲ್ಲಿ ಕನಿಷ್ಠ ಶೇ.55 ಅಂಕ ಪಡೆದಿರಬೇಕು, ಹುದ್ದೆಗೆ ಅನುಗುಣವಾಗಿ ಐಟಿಐ, ವೃತ್ತಿ ಅನುಭವ ಅವಶ್ಯ.

ವಯೋಮಿತಿ:

1.1.2021ಕ್ಕೆ ಗರಿಷ್ಠ 28 ವರ್ಷ. ಮೀಸಲಾತಿ ಅಭ್ಯರ್ಥಿಗಳಿಗೆ ವಯೋ ಸಡಿಲಿಕೆ ಇದೆ.

ಆಯ್ಕೆ ಪ್ರಕ್ರಿಯೆ:

ಅಭ್ಯರ್ಥಿಗಳ ಶೈಕ್ಷಣಿಕ ಅಂಕ ಆಧರಿಸಿ ಮೊದಲ ಆಯ್ಕೆ ಪಟ್ಟಿ ಸಿದ್ಧಪಡಿಸಲಾಗುವುದು, ನಂತರ ಬಹು ಆಯ್ಕೆ ಮಾದರಿಯಲ್ಲಿ ಲಿಖಿತ ಪರೀಕ್ಷೆ ನಡೆಸಲಾಗುವುದು. ಮೆಂಟಲ್ ಎಬಿಲಿಟಿ, ಸಾಮಾನ್ಯ ಜ್ಞಾನ, ಇಂಗ್ಲಿಷ್ ಭಾಷೆ, ಹುದ್ದೆ ಸಂಬಂಧಿತ ವಿಷಯದ ಬಗ್ಗೆ ಪ್ರಶ್ನೆಗಳನ್ನು ಕೇಳಲಾಗುವುದು. ಪ್ರಶ್ನೆಪತ್ರಿಕೆಯು ಇಂಗ್ಲಿಷ್ ಮತ್ತು ಹಿಂದಿಯಲ್ಲಿರಲಿದೆ. ತಪ್ಪು ಉತ್ತರಗಳಿಗೆ ಋಣಾತ್ಮಕ ಅಂಕಗಳು ಇರುತ್ತವೆ.

ಅರ್ಜಿ ಶುಲ್ಕ:

ಎಸ್‍ಸಿ, ಎಸ್‍ಟಿ, ಅಂಗವಿಕಲ, ಮಹಿಳಾ, ಸಿಎಸ್‍ಐಆರ್ ಸಿಬ್ಬಂದಿ, ವಿದೇಶಿ ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದ ಅಭ್ಯರ್ಥಿಗಳು 100 ರೂ. ಪಾವತಿಸಬೇಕು.

ಅರ್ಜಿ ಸಲ್ಲಿಸಲು ಕೊನೇ ದಿನ: 1.1.2021

ಅಧಿಸೂಚನೆಗೆ ಇಲ್ಲಿ ಕ್ಲಿಕ್ಕಿಸಿ : https://bit.ly/3oxOfRc

ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ: http://www.neist.res.in

ಇನ್ನೂ ಹೆಚ್ಚಿನ ಉದ್ಯೋಗಗಳ ಮಾಹಿತಿಗೆ https://www.vijayavani.net/ ವಿಭಾಗದ ಅಂಕಣ ಕಾಲಂನಲ್ಲಿ ಉದ್ಯೋಗಮಿತ್ರ ಕ್ಲಿಕ್ಕಿಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net