

ವಿಶಾಖಪಟ್ಟಣದಲ್ಲಿರುವ ಹಿಂದುಸ್ಥಾನ್ ಶಿಪ್ಯಾರ್ಡ್ ಲಿಮಿಟೆಡ್ನಲ್ಲಿ (ಎಚ್ಎಸ್ಎಲ್) ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ರಕ್ಷಣಾ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುವ ಎಚ್ಎಸ್ಎಲ್ನಲ್ಲಿ ಶಾಶ್ವತ ಆಧಾರ ಹಾಗೂ ಸ್ಥಿರ ಅವಧಿಯ ಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಎಚ್ಎಸ್ಎಲ್ ಮಾನದಂಡದಂತೆ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಕೆಯಾದರೆ ಅಭ್ಯರ್ಥಿಗಳ ಶೈಕ್ಷಣಿಕ ಅಂಕ, ಇತರ ಶೈಕ್ಷಣಿಕ ಅರ್ಹತೆ, ವೃತ್ತಿ ಅನುಭವ ಆಧರಿಸಿ ಶಾರ್ಟ್ಲಿಸ್ಟ್ ಮಾಡಿ ಆಯ್ಕೆ ಮಾಡಲಾಗುವುದು.
ಒಟ್ಟು ಹುದ್ದೆಗಳು: 53
ಹುದ್ದೆ ವಿವರ
- ಕಾಯಂ ಆಧಾರದ ಹುದ್ದೆಗಳು- 18
* ಜನರಲ್ ಮ್ಯಾನೇಜರ್ (ಎಚ್ಆರ್) - 1 * ಅಡಿಷನಲ್ ಜನರಲ್ ಮ್ಯಾನೇಜರ್ (ಎಚ್ಆರ್)- 1 * ಡೆಪ್ಯುಟಿ ಜನರಲ್ ಮ್ಯಾನೇಜರ್ (ಟೆಕ್ನಿಕಲ್-2, ೈನಾನ್ಸ್-2)- 4 * ಸೀನಿಯರ್ ಮ್ಯಾನೇಜರ್ (ಟೆಕ್ನಿಕಲ್)- 4 * ಮ್ಯಾನೇಜರ್ (ಟೆಕ್ನಿಕಲ್ - 7, ೈನಾನ್ಸ್-1) - 8
- ಸ್ಥಿರ ಅವಧಿಯ ಗುತ್ತಿಗೆ ಆಧಾರದ ಹುದ್ದೆಗಳು - 31
* ಡಿಪ್ಯುಟಿ ಚೀ್ ಪ್ರಾಜೆಕ್ಟ್ ಆಫೀಸರ್ (ಇನ್್ರಾಸ್ಟ್ರಕ್ಚರ್ ಆಗ್ಮೆಂಟೇಷನ್- 1, ಎಸ್ಎಪಿ ಬೇಸಿಸ್ ಕನ್ಸಲ್ಟಂಟ್ ವಿತ್ ಎಚ್ಎಎನ್ಎ-1) ಎ್ಟಿಸಿ - 2 *ಪ್ರಾಜೆಕ್ಟ್ ಮ್ಯಾನೇಜರ್ (ಎಸ್ಎಪಿ ಎಬಿಎಪಿ ಡೆವಲಪರ್ ಆನ್ ಎಚ್ಎಎನ್ಎ)- 1 * ಡೆಪ್ಯುಟಿ ಪ್ರಾಜೆಕ್ಟ್ ಆಫೀಸರ್ (ಶಿಪ್ವೈಟ್ ಟ್ರೇಡ್ - 6, ಸಬ್ಮೆರಿನ್ ಟೆಕ್ನಿಕಲ್- 14, ಇನ್ ಶಿಪ್ಸ್ ಟೆಕ್ನಿಕಲ್ - 8) - 28
- ಸ್ಥಿರ ಅವಧಿಯ ಗುತ್ತಿಗೆ ಆಧಾರದಲ್ಲಿ ಕನ್ಸಲ್ಟಂಟ್ ಹುದ್ದೆ - 4
* ಸಿನಿಯರ್ ಕನ್ಸಲ್ಟಂಟ್ (ಟೆಕ್ನಿಕಲ್ - 1, ಇನ್್ರಾಸ್ಟ್ರಕ್ಚರ್ ಆಗ್ಮೆಂಟೇಷನ್ - 1, ಇಕೆಎಂ ಪ್ಲಾನಿಂಗ್ ಆ್ಯಂಡ್ ಸಬ್ಮೆರಿನ್ ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ - 1)-3 * ಕನ್ಸಲ್ಟಂಟ್ (ಇಕೆಎಂ ಪ್ಲಾನಿಂಗ್ ಆ್ಯಂಡ್ ಸಬ್ಮೆರಿನ್ ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ )- 1
ಶೈಕ್ಷಣಿಕ ಅರ್ಹತೆ: ಯಾವುದೇ ಪದವಿ, ಮ್ಯಾನೇಜ್ಮೆಂಟ್ನಲ್ಲಿ ಡಿಪ್ಲೊಮಾ, ಮೆಕ್ಯಾನಿಕಲ್, ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಿಕಲ್, ಕಂಪ್ಯೂಟರ್/ ಐಟಿ, ಸಿವಿಲ್, ನಾವಲ್ ಆಕಿರ್ಟೆಕ್ಚರ್ ಇಂಜಿನಿಯರಿಂಗ್ ಪದವಿ/ ಸ್ನಾತಕೋತ್ತರ ಪದವಿ ಪಡೆದಿದ್ದು, ಕನಿಷ್ಠ ಶೇ.50 ಅಂಕ ಪಡೆದಿರಬೇಕು.
ವಯೋಮಿತಿ: ಹುದ್ದೆಗಳಿಗೆ ಅನುಗುಣವಾಗಿ ಗರಿಷ್ಠ 35, 40, 42, 45, 50, 57, 59 ವರ್ಷ ನಿಗದಿಪಡಿಸಲಾಗಿದೆ.
ವೇತನ: 50,000 ರೂ.ನಿಂದ 2,60,000 ರೂ.ವರೆಗೆ ವೇತನ ಇದೆ.
ಅರ್ಜಿ ಶುಲ್ಕ: ಎಸ್ಸಿ, ಎಸ್ಟಿ, ಅಂಗವಿಕಲ ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದ ಅಭ್ಯರ್ಥಿಗಳು 300 ರೂ. ಪಾವತಿಸಬೇಕು.
ಅರ್ಜಿ ಸಲ್ಲಿಸಲು ಕೊನೇ ದಿನ: ಖಾಯಂ ಹುದ್ದೆಗೆ 20.7.2021, ಸ್ಥಿರ ಅವಧಿಯ ಹುದ್ದೆಗೆ 10.8.2021, ಕನ್ಸ್ಲ್ಟಂಟ್ ಹುದ್ದೆಗೆ 30.8.2021
ಅಧಿಸೂಚನೆಗೆ: https://bit.ly/3ja7mB6
ಮಾಹಿತಿಗೆ: http://www.hslvizag.in
https://www.vijayavani.net/s-udyogamitra-c-dok-application/