ಫರ್ಟಿಲೈಸರ್ಸ್ ಸಂಸ್ಥೆಗೆ ಬೇಕಾಗಿದ್ದಾರೆ ಅಟೆಂಡೆಂಟ್ಸ್- ಎಸ್‌ಎಸ್‌ಎಲ್‌ಸಿ ಆದವರಿಗೂ ಇದೆ ಅವಕಾಶ

udyoga-fertiliser
Published on

ನ್ಯಾಷನಲ್ ಫರ್ಟಿಲೈಸರ್ಸ್ ಲಿಮಿಟೆಡ್ (ಎನ್‍ಎಫ್ಎಲ್), ಇಐಎಲ್, ಎïಸಿಐಎಲ್ ಅಧೀನದಲ್ಲಿ ಕಾರ್ಯನಿರ್ವಹಿಸುವ ತೆಲಂಗಾಣದಲ್ಲಿರುವ ರಾಮಗುಂದಂ ಫರ್ಟಿಲೈಸರ್ಸ್ ಆ್ಯಂಡ್ ಕೆಮಿಕಲ್ ಲಿಮಿಟೆಡ್ (ಆರ್‍ಎïಸಿಎಲ್)ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು ಹುದ್ದೆಗಳು: 31

ಆರ್‍ಎಫ್‌ಸಿಎಲ್‍ನಲ್ಲಿ ನೇಮಕ ಮಾಡಿಕೊಳ್ಳಲಾಗುವ ಅಭ್ಯರ್ಥಿಗಳನ್ನು ಆರಂಭದಲ್ಲಿ ರಾಮಗುಂದಂನಲ್ಲೇ ನೇಮಕ ಮಾಡಲಾಗುವುದು. ನಂತರ ಸಂಸ್ಥೆಯ ಅವಶ್ಯಕತೆಗೆ ತಕ್ಕಂತೆ ದೇಶದ ಎನ್‍ಎïಎಲ್‍ನ ಕಚೇರಿಗಳಿಗೆ ನೇಮಕ ಮಾಡಬಹುದಾಗಿದೆ. ಪ್ರಸ್ತುತ ಹುದ್ದೆಗಳಲ್ಲಿ ಸಾಮಾನ್ಯವರ್ಗದ ಅಭ್ಯರ್ಥಿಗಳಿಗೆ 19 ಸ್ಥಾನ, ಎಸ್ಸಿಗೆ 3, ಇತರ ಹಿಂದುಳಿದ ವರ್ಗಕ್ಕೆ 7, ಆರ್ಥಿಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗಳಿಗೆ 2, ಅಂಗವಿಕಲ ಅಭ್ಯರ್ಥಿಗೆ 2, ಮಾಜಿ ಸೈನಿಕರಿಗೆ 3 ಸ್ಥಾನಗಳನ್ನು ಮೀಸಲಿರಿಸಲಾಗಿದೆ.

ಹುದ್ದೆ, ಸಂಖ್ಯೆ ವಿವರ

- ಅಟೆಂಡೆಂಟ್ ಗ್ರೇಡ್1 (ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಇನ್‍ಸ್ಟ್ರುಮೆಂಟೇಷನ್)

* ಫಿಟ್ಟರ್ - 8

* ಡೀಸೆಲ್ ಮೆಕ್ಯಾನಿಕ್ - 2

* ಮೆಕ್ಯಾನಿಕ್ ರಿಪೈರ್ ಆ್ಯಂಡ್ ಮೇಂಟೇನೆನ್ಸ್ ಆï ಹೆವಿ ವೆಹಿಕಲ್ - 1

* ಎಲೆಕ್ಟ್ರಿಷಿಯನ್ - 12

* ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್ - 4

* ಇನ್‍ಸ್ಟ್ರುಮೆಂಟೇಷನ್ ಮೆಕ್ಯಾನಿಕ್ - 4

ಶೈಕ್ಷಣಿಕ ಅರ್ಹತೆ: ಎಸ್ಸೆಸ್ಸೆಲ್ಸಿ, ಹುದ್ದೆ ಸಂಬಂಧಿತ ವಿಷಯದಲ್ಲಿ ಐಟಿಐ. ಪಾರ್ಟ್‍ಟೈಂ, ಕರೆಸ್ಪಾಂಡೆನ್ಸ್, ಡಿಸ್ಟೆನ್ಸ್ ಎಜುಕೇಷನ್/ ಆನ್‍ಲೈನ್ ಶಿಕ್ಷಣಗಳಿಗೆ ಮಾನ್ಯತೆ ಇಲ್ಲ.

ವಯೋಮಿತಿ: 30.11.2020ಕ್ಕೆ ಕನಿಷ್ಠ 18 ವರ್ಷ, ಗರಿಷ್ಠ 30 ವರ್ಷ. ಮೀಸಲಾತಿ ಅಭ್ಯರ್ಥಿಗಳಿಗೆ ವಯೋಸಡಿಲಿಕೆ ಇದೆ.

ಅರ್ಜಿ ಶುಲ್ಕ: ಎಸ್ಸಿ, ಎಸ್ಟಿ, ಅಂಗವಿಕಲ, ಮಾಜಿ ಸೈನಿಕ ಅಭ್ಯರ್ಥಿಗಳನ್ನು ಹೊರತು ಪಡಿಸಿ ಉಳಿದ ಅಭ್ಯರ್ಥಿಗಳು 200 ರೂ. ಶುಲ್ಕ ಪಾವತಿಸಬೇಕು.

ವೇತನ: ಮಾಸಿಕ 21,500 ರೂ. ದಿಂದ 52,000 ರೂ.

ಆಯ್ಕೆ ಪ್ರಕ್ರಿಯೆ: ಶಾರ್ಟ್ ಲಿಸ್ಟ್ ಮಾಡಲಾದ ಅಭ್ಯರ್ಥಿಗಳನ್ನು ಆನ್‍ಲೈನ್ ಪರೀಕ್ಷೆಗೆ ಆಹ್ವಾನಿಸಲಾಗುವುದು. ಬೆಂಗಳೂರು ಸೇರಿ ಇತರ 15 ಸ್ಥಳಗಳಲ್ಲಿ ಪರೀಕ್ಷಾ ಕೇಂದ್ರ ಇರಲಿದೆ. ನಂತರ ಸ್ಕಿಲ್ (ಟ್ರೇಡ್) ಟೆಸ್ಟ್ ಇರಲಿದೆ.

ಅರ್ಜಿ ಸಲ್ಲಿಸಲು ಕೊನೇ ದಿನ: 12.1.2021

ಅಧಿಸೂಚನೆಗೆ: https://bit.ly/3oxUNiW

ಮಾಹಿತಿಗೆ: www.nationalfertilizers.com

ಇನ್ನೂ ಅನೇಕ ಉದ್ಯೋಗಾವಕಾಶಗಳ ಕುರಿತು  ಇಲ್ಲಿ ಕ್ಲಿಕ್‌ ಮಾಡಿ..

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net