

ದೇಶದ ಪ್ರಮುಖ ಟೆಲಿಕಾಂ ಕಂಪೆನಿ ಮತ್ತು ಬಹು ಘಟಕಗಳನ್ನು ಹೊಂದಿರುವ ಕೇಂದ್ರ ಸರ್ಕಾರಿ ಸ್ವಾಮ್ಯದ ಸಾರ್ವಜನಿಕ ವಲಯದ ಉದ್ಯಮವಾಗಿರುವ ಐಟಿಐ ಲಿಮಿಟೆಡ್ ಐಟಿ ಮತ್ತು ಟೆಲಿಕಾಂ ಅನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ಕೆಲಸ ಮಾಡುತ್ತಿದೆ. ರಕ್ಷಣಾ ಮತ್ತು ರೈಲ್ವೇ ಕ್ಷೇತ್ರಗಳಲ್ಲಿ ವೈವಿಧ್ಯಮಯ ಉತ್ಪನ್ನಗಳ ತಯಾರಿಕೆ ಮತ್ತು ಸೌರ ಉಪಕರಣಗಳು, ಎನ್ಜಿಎನ್ ಉತ್ಪನ್ನಗಳು, ಜಿಪಿಒಎನ್, ಎಲ್ಇಡಿ ಲೈಟಿಂಗ್, ಎಚ್ಡಿಪಿಇ, ಒಎ್ಸಿ, ಹಾಗೂ ಇನ್ನಿತರ ವಸ್ತುಗಳ ತಯಾರಿಕೆಯಲ್ಲಿ ಐಟಿಐ ಹೆಚ್ಚು ಗಮನ ಹರಿಸುತ್ತಿದ್ದು, ಇಂಜಿನಿಯರಿಂಗ್ ಡಿಪ್ಲೊಮಾ ಪದವೀಧರನ್ನು ನೇಮಕ ಮಾಡಿಕೊಳ್ಳಲು ಉತ್ತರ ಪ್ರದೇಶ ಟಕದಿಂದ ಅಜಿರ್ ಆಹ್ವಾನಿಸಲಾಗಿದೆ.
ಒಟ್ಟು ಹುದ್ದೆಗಳು: 40
40 ಹುದ್ದೆಗಳಲ್ಲಿ ಸಾಮಾನ್ಯವರ್ಗದ ಅಭ್ಯಥಿರ್ಗಳಿಗೆ 17 ಸ್ಥಾನ, ಆಥಿರ್ಕವಾಗಿ ದುರ್ಬಲವಾಗಿರುವ ಅಭ್ಯಥಿರ್ಗಳಿಗೆ 4, ಇತರ ಹಿಂದುಳಿದ ವರ್ಗಕ್ಕೆ 11, ಎಸ್ಸಿಗೆ 6, ಎಸ್ಟಿಗೆ 2 ಸ್ಥಾನಗಳನ್ನು ಮೀಸಲಿರಿಸಿದೆ.
ಹುದ್ದೆ ವಿವರ
* ಮೆಕ್ಯಾನಿಕಲ್ - 29
* ಎಲೆಕ್ಟ್ರಿಕಲ್ - 7
* ಎಲೆಕ್ಟ್ರಾನಿಕ್ಸ್ - 4
ಶೈಕ್ಷಣಿಕ ಅರ್ಹತೆ: ಪ್ರೌಢ ಶಿಕ್ಷಣ/ ತತ್ಸಮಾನ ಶಿಕ್ಷಣ, ಮೆಕ್ಯಾನಿಕ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್ನಲ್ಲಿ 3 ವರ್ಷದ ಡಿಪ್ಲೊಮಾ ಕೋರ್ಸ್ ಮಾಡಿದ್ದು, ಕನಿಷ್ಠ ಶೇ.60 ಅಂಕ (ಮೀಸಲಾತಿ ಅಭ್ಯಥಿರ್ಗಳು ಶೇ.55 ಅಂಕ) ಪಡೆದಿರಬೇಕು.
ವಯೋಮಿತಿ: ಗರಿಷ್ಠ 30 ವರ್ಷ. ಮೀಸಲಾತಿ ಅಭ್ಯಥಿರ್ಗಳಿಗೆ ಸರ್ಕಾರದ ನಿಯಮದನ್ವಯ ವಯೋ ಸಡಿಲಿಕೆ ಇದೆ.
ವೇತನ: ಮೂಲ ವೇತನ, ಡಿಎ ಮತ್ತು ಮನೆ ಬಾಡಿಗೆ ಭತ್ಯೆ ಸೇರಿ ಮಾಸಿಕ 19,029 ರೂ. ನೀಡಲಾಗುವುದು.
ಆಯ್ಕೆ ಪ್ರಕ್ರಿಯೆ: ಅಭ್ಯಥಿರ್ಗಳ ಶೈಕ್ಷಣಿಕ ಅಂಕ ಆಧರಿಸಿ ಶಾರ್ಟ್ಲಿಸ್ಟ್ ಮಾಡಲಾದ ಅಭ್ಯಥಿರ್ಗಳನ್ನು ಲಿಖಿತ ಪರೀೆಗೆ ಆಹ್ವಾನಿಸಲಾಗುವುದು. ಲಿಖಿತ ಪರೀಕ್ಷೆಯಲ್ಲಿನ ಅಂಕ ಆಧರಿಸಿ ಅಂತಿಮ ಪಟ್ಟಿಯ ಅಭ್ಯಥಿರ್ಗಳನ್ನು ವೈದ್ಯಕಿಯ ಪರೀೆಗೆ ಒಳಪಡಿಸಿ ಅದರಲ್ಲಿ ಉತ್ತೀರ್ಣರಾದವರನ್ನು ಆಯ್ಕೆ ಮಾಡಲಾಗುವುದು.
ಸೂಚನೆ: ಆನ್ಲೈನ್ನಲ್ಲಿ ಅಜಿರ್ ಸಲ್ಲಿಸಿದ ಬಳಿಕ ಅಜಿರ್ಯ ಪ್ರತಿ ಪಡೆದು, ಅಗತ್ಯ ದಾಖಲೆಗಳ ಪ್ರತಿಗಳ ಜತೆ ದಿ.21.5.2021ರ ಒಳಗಾಗಿ CM —HR & Legal, Recruitment Cell ITI LIMITED SULTANPUR ROAD, RAEBARELI, UTTAR PRADESH— 229010 ವಿಳಾಸಕ್ಕೆ ಪೋಸ್ಟ್ ಮಾಡಬೇಕು.
ಅರ್ಜಿ ಸಲ್ಲಿಸಲು ಕೊನೇ ದಿನ: 15.5.2021
ಅಧಿಸೂಚನೆಗೆ: https://bit.ly/3taDtSS
ಮಾಹಿತಿಗೆ: http://www.itiltd.in
ಹೆಚ್ಚಿನ ಉದ್ಯೋಗ ಸುದ್ದಿಗೆ ಕ್ಲಿಕ್ಕಿಸಿ:
https://www.vijayavani.net/category/%e0%b2%89%e0%b2%a6%e0%b3%8d%e0%b2%af%e0%b3%8b%e0%b2%97-%e0%b2%ae%e0%b2%bf%e0%b2%a4%e0%b3%8d%e0%b2%b0/