ಡಿಜಿಟಲ್ ಶಿಕ್ಷಣ ಸಂಸ್ಥೆಯಲ್ಲಿ 433 ಹುದ್ದೆಗಳು ಖಾಲಿ- ಎಸ್​ಎಸ್​ಎಲ್​ಸಿಯಾದವರಿಗೂ ಅವಕಾಶ

udyoga
Published on

ಡಿಜಿಟಲ್ ಎಜುಕೇಷನ್ ಆ್ಯಂಡ್ ಎಂಪ್ಲಾಯ್‍ಮೆಂಟ್ ಡೆವಲಪ್‍ಮೆಂಟ್‍ನಲ್ಲಿ (ಐಡಿಇಇಡಿ) ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿ ಅಧಿಸೂಚನೆ ಹೊರಡಿಸಲಾಗಿದೆ. ಒಟ್ಟು ಸ್ಥಾನಗಳು: 433

ಒಬ್ಬ ಅಭ್ಯರ್ಥಿ ಒಂದಕ್ಕಿಂತ ಹೆಚ್ಚು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು, 433 ಹುದ್ದೆಗಳಲ್ಲಿ ಸಾಮಾನ್ಯವರ್ಗದ ಅಭ್ಯರ್ಥಿಗೆ 217 ಸ್ಥಾನ, ಆರ್ಥಿಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗಳಿಗೆ 39, ಎಸ್ಸಿಗೆ 46, ಎಸ್ಟಿಗೆ 20 ಇತರ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 111 ಸ್ಥಾನಗಳನ್ನು ಮೀಸಲಿರಿಸಲಾಗಿದೆ. ಅಭ್ಯರ್ಥಿಗಳು ಸಂಸ್ಥೆಯೊಂದಿಗೆ ಅಪ್ರೆಂಟಿಸ್ ಅಗ್ರಿಮೆಂಟ್‍ಗೆ ಸಹಿ ಹಾಕಬೇಕಿದೆ.

ಹುದ್ದೆ, ಸಂಖ್ಯೆ ವಿವರ

* ಡೇಟಾ ಎಂಟ್ರಿ ಆಪರೇಟರ್ - 168

* ವೆಬ್ ಡಿಸೈನರ್ - 15

* ಕಂಟೆಂಟ್ ರೈಟರ್ - 83

* ಕಂಪ್ಯೂಟರ್ ನೆಟ್‍ವರ್ಕಿಂಗ್ ಟೆಕ್ನಿಷಿಯನ್ - 46

* ಆಫೀಸ್ ಅಸಿಸ್ಟೆಂಟ್ - 39

ವಿದ್ಯಾರ್ಹತೆ: ಎಸ್ಸೆಸ್ಸೆಲ್ಸಿ, ಕಂಪ್ಯೂಟರ್ ಸೈನ್ಸ್/ ಕಂಪ್ಯೂಟರ್ ಇಂಜಿನಿಯರಿಂಗ್/ ಎಲೆಕ್ಟ್ರಾನಿಕ್ಸ್‍ನಲ್ಲಿ ಪದವಿ/ಸ್ನಾತಕೋತ್ತರ ಪದವಿ, ಕಂಪ್ಯೂಟರ್ ಕೋರ್ಸ್‍ನಲ್ಲಿ ಡಿಪ್ಲೋಮಾ

ವಯೋಮಿತಿ: 20.2.2021ಕ್ಕೆ ಅನ್ವಯಿಸುವಂತೆ ಕನಿಷ್ಠ 18 ವರ್ಷ, ಗರಿಷ್ಠ 35 ವರ್ಷ. ಮೀಸಲಾತಿ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮದನ್ವಯ ವಯೋ ಸಡಿಲಿಕೆ ಇದೆ.

ಸ್ಟೈಪೆಂಡ್: ಅಪ್ರೆಂಟಿಸ್ ನಿಯಮದ ಪ್ರಕಾರ ಮಾಸಿಕ 11,500- 19,200 ರೂ. ನೀಡಲಾಗುವುದು.

ಅರ್ಜಿ ಶುಲ್ಕ: ಸಾಮಾನ್ಯವರ್ಗ, ಇತರ ಹಿಂದುಳಿದ ವರ್ಗ, ಆರ್ಥಿಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗಳು 550 ರೂ., ಎಸ್ಸಿ, ಎಸ್ಟಿ, ಅಂಗವಿಕಲ ಅಭ್ಯರ್ಥಿಗಳಿಗೆ 400 ರೂ. ಅರ್ಜಿ ಶುಲ್ಕ ನಿಗದಿಪಡಿಸಲಾಗಿದ್ದು, ಆನ್‍ಲೈನ್ ಮೂಲಕ ಪಾವತಿಸತಕ್ಕದ್ದು.

ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳ ಶೈಕ್ಷಣಿಕ ಅಂಕ ಆಧರಿಸಿ ಶಾರ್ಟ್‍ಲಿಸ್ಟ್ ಮಾಡಲಾದ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆಗೆ ಆಹ್ವಾನಿಸಲಾಗುವುದು. ಜನರಲ್ ಸ್ಟಡೀಸ್ ಆ್ಯಂಡ್ ರೀಸನಿಂಗ್, ಜನರಲ್ ಸೈನ್ಸ್, ಜನರಲ್ ಮ್ಯಾಥ್ಸ ಮತ್ತು ಇಂಗ್ಲಿಷ್ ಕುರಿತ ಪ್ರಶ್ನೆಗಳಿರುತ್ತವೆ. ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಅಭ್ಯರ್ಥಿಗಳು ವೈದ್ಯಕೀಯವಾಗಿಯೂ ಫಿಟ್ ಇರತಕ್ಕದ್ದು.

ಅರ್ಜಿ ಸಲ್ಲಿಸಲು ಕೊನೇ ದಿನ: 20.2.2021

ಅಧಿಸೂಚನೆಗೆ:https://bit.ly/3pRAI8a

ಮಾಹಿತಿಗೆ: http://www.dsrvsindia.ac.in

ಹೆಚ್ಚಿನ ಉದ್ಯೋಗ ಸುದ್ದಿಗೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net