ವಿವಿಧ ಇಂಜಿನಿಯರಿಂಗ್‌ ಪದವೀಧರರಿಗೆ ಸೆರಾಮಿಕ್‌ ಸಂಸ್ಥೆಯಿಂದ ಅರ್ಜಿ ಆಹ್ವಾನ

jobs1
Published on

ಕೌನ್ಸಿಲ್​ ಆಫ್​ ಸೈಂಟಿಫಿಕ್​ ಆ್ಯಂಡ್​ ಇಂಡಸ್ಟ್ರಿಯಲ್​ ರಿಸರ್ಚ್​ (ಸಿಎಸ್​ಐಆರ್​) ಅಧೀನದಲ್ಲಿ ಕಾರ್ಯನಿರ್ವಹಿಸುವ ಕೋಲ್ಕತಾದ ಸೆಂಟ್ರಲ್​ ಗ್ಲಾಸ್​ ಆ್ಯಂಡ್​ ಸೆರಾಮಿಕ್​ ರಿಸರ್ಚ್​ ಇನ್​ಸ್ಟಿಟ್ಯೂಟ್​ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಒಟ್ಟು ಹುದ್ದೆಗಳು: 16

ಸಿಜಿಸಿಐಆರ್​ನಲ್ಲಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ತಮ್ಮ ವಿವರಗಳನ್ನು ಟೈಪ್​ ಮಾಡಿ ಕಳುಹಿಸಬೇಕು. ಕೈಬರಹದ ಸ್ವವಿವರಗಳಿಗೆ ಮಾನ್ಯತೆ ಇಲ್ಲ. ಅಭ್ಯರ್ಥಿಗಳು ಮೇಲ್​ ಐಡಿ project.staff@cgcri.res.in ಗೆ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.

ಈ ಹುದ್ದೆಗಳು ಪ್ರಾಜೆಕ್ಟ್​ ಆಧಾರಿತವಾಗಿದ್ದು, ಯೋಜನೆಗಳು ಮುಗಿಯುವವರೆಗೆ ನಿಯೋಜನೆ ಮಾಡಿಕೊಳ್ಳಲಾಗುವುದು. ಬೇರೆ ಬೇರೆ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಪ್ರತ್ಯೇಕ ಅರ್ಜಿ ಸಲ್ಲಿಸಬೇಕು. ಅಭ್ಯರ್ಥಿಗಳ ಶೈಕ್ಷಣಿಕ ಅಂಕ, ಅರ್ಹತೆಗಳನ್ನು ಆಧರಿಸಿ ಶಾರ್ಟ್​ಲಿಸ್ಟ್​ ಮಾಡಲಾಗುವ ಅಭ್ಯರ್ಥಿಗಳನ್ನು ಮುಂದಿನ ಆಯ್ಕೆ ಪ್ರಕ್ರಿಯೆಗೆ ಆಹ್ವಾನಿಸಲಾಗುವುದು.

ಹುದ್ದೆ ವಿವರ
* ಪ್ರಾಜೆಕ್ಟ್​ ಅಸೋಸಿಯೇಟ್​ -ಐ - 7
* ಪ್ರಾಜೆಕ್ಟ್​ ಅಸೋಸಿಯೇಟ್​-ಐಐ - 2
* ಪ್ರಾಜೆಕ್ಟ್​ ಅಸಿಸ್ಟೆಂಟ್​ - 3
* ಪ್ರಾಜೆಕ್ಟ್​ ಸೈಂಟಿಸ್ಟ್​-ಐ - 1
* ರಿಸರ್ಚ್​ ಅಸೋಸಿಯೇಟ್​-ಐಐಐ - 1
* ಜೂನಿಯರ್​ ರಿಸರ್ಚ್​ ಫೆಲೋ - 2

ವಿದ್ಯಾರ್ಹತೆ: ಮೆಕ್ಯಾನಿಕಲ್​, ಎಲೆಕ್ಟ್ರಾನಿಕ್ಸ್​/ ಎಲೆಕ್ಟ್ರಾನಿಕ್ಸ್​ ಆ್ಯಂಡ್​ ಇನ್​ಸ್ಟ್ರುಮೆಂಟೇಷನ್​, ಸೆರಾಮಿಕ್​ ಇಂಜಿನಿಯರಿಂಗ್​ನಲ್ಲಿ 3 ವರ್ಷದ ಡಿಪ್ಲೊಮಾ, ಸೆರಾಮಿಕ್​ ಟೆಕ್ನಾಲಜಿ, ಫೋಟೋನಿಕ್ಸ್​/ ಆಪ್ಟಿಕ್ಸ್​ ಆ್ಯಡ್​ ಆಪ್ಟೋ-ಎಲೆಕ್ಟ್ರಾನಿಕ್ಸ್​/ಎಲೆಕ್ಟ್ರಾನಿಕ್ಸ್​ ಆ್ಯಂಡ್​ ಕಮ್ಯುನಿಕೇಷನ್​, ಕೆಮಿಕಲ್​ ಇಂಜಿನಿಯರಿಂಗ್​/ ಕೆಮಿಕಲ್​ ಟೆಕ್ನಾಲಜಿ, ಮೆಟಿರಿಯಲ್​ ಸೈನ್ಸ್​ನಲ್ಲಿ ಬಿಇ/ಬಿ.ಟೆಕ್​, ಎಂಎ, ಎಂಟೆಕ್​, ಕೆಮಿಸ್ಟ್ರಿ/ ಫಿಜಿಕ್ಸ್​/ ೋಟೋನಿಕ್ಸ್​, ಇನ್​ಆರ್ಗ್ಯಾನಿಕ್​/ ಅನಾಲಿಟಿಕಲ್​,, ಮೈಕ್ರೋಬಯಾಲಜಿಯಲ್ಲಿ ಬಿಎಸ್ಸಿ, ಎಂಎಸ್ಸಿ ಮಾಡಿರಬೇಕು.

ವಯೋಮಿತಿ: ಹುದ್ದೆಗಳಿಗೆ ಅನುಗುಣವಾಗಿ ಗರಿಷ್ಠ 28, 35, 50ವರ್ಷ ನಿಗದಿಪಡಿಸಲಾಗಿದೆ. ಮೀಸಲಾತಿ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮದನ್ವಯ ವಯೋಸಡಿಲಿಕೆ ಇದೆ.

ವೇತನ: ಹುದ್ದೆಗಳಿಗೆ ಅನುಗುಣವಾಗಿ ಮಾಸಿಕ 20,000ರೂ. ದಿಂದ 56,000 ರೂ, ವೇತನ ನಿಗದಿಯಾಗಿದೆ. ವೇತನ ಜತೆ ಮನೆ ಬಾಡಿಗೆ ಭತ್ಯೆ ನೀಡಲಾಗುವುದು.

ಅರ್ಜಿ ಸಲ್ಲಿಸಲು ಕೊನೇದಿನ: 2.6.2021 ರಿಂದ 3.6.2021ರ ವರೆಗೆ.
ಅಧಿಸೂಚನೆಗೆ: https://bit.ly/3bwX9Kv
ಮಾಹಿತಿಗೆ: https://www.cgcri.res.in

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net