ಇಂಜಿನಿಯರಿಂಗ್‌ ಪದವೀಧರರಿಗೆ ಭರ್ಜರಿ ಅವಕಾಶ: 51 ಹುದ್ದೆಗಳಿಗೆ ಆಹ್ವಾನ

udyoga-mumbai
Published on

ಮುಂಬೈನಲ್ಲಿರುವ ಸೆಂಟರ್​ ಫಾರ್​ ಡೆವಲಪ್​ಮೆಂಟ್​ ಆಫ್‌​ ಅಡ್ವಾನ್ಸಡ್​ ಕಂಪ್ಯೂಟಿಂಗ್​ನಲ್ಲಿ (ಸಿ-ಡಾಕ್​) ಖಾಲಿ ಇರುವ ಪ್ರಾಜೆಕ್ಟ್​ ಇಂಜಿನಿಯರ್ಸ್​ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಒಟ್ಟು ಹುದ್ದೆಗಳು: 51

ಸಿ-ಡಾಕ್​ನಲ್ಲಿರುವ ಹುದ್ದೆಗಳು ಒಂದು ವರ್ಷದ ಒಪ್ಪಂದಕ್ಕೆ ಒಳಪಟ್ಟಿದ್ದು, ಅಭ್ಯಥಿರ್ಯ ಕಾರ್ಯಕ್ಷಮತೆ ಹಾಗೂ ಸಂಸ್ಥೆಯ ಯೋಜನೆಯ ಅವಶ್ಯಕತೆ ಆಧಾರದ ಮೇಲೆ 3 ವರ್ಷ ವಿಸ್ತರಿಸಲಾಗುವುದು. ನೇಮಕ ಮಾಡಿಕೊಳ್ಳಲಾಗುವ ಅಭ್ಯರ್ಥಿಗಳನ್ನು ಒಂದು ಯೋಜನೆಯಿಂದ ಇನ್ನೊಂದು ಯೋಜನೆಗೆ ವರ್ಗಾಯಿಸಬಹುದು. ಆನ್​ಲೈನ್​ ಅರ್ಜಿಗಳಿಗೆ ಮಾತ್ರ ಮಾನ್ಯತೆ. ಸಾಮಾನ್ಯವರ್ಗದ ಅಭ್ಯರ್ಥಿಗಳಿಗೆ 23 ಸ್ಥಾನ, ಎಸ್ಸಿಗೆ 7, ಎಸ್ಟಿಗೆ 3, ಇತರ ಹಿಂದುಳಿದ ವರ್ಗದ ಅಭ್ಯರ್ಥಿಗೆ 13, ಆಥಿರ್ಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗೆ 5 ಸ್ಥಾನ ಮೀಸಲಿರಿಸಲಾಗಿದೆ.

ಹುದ್ದೆ ವಿವರ
* ಪ್ರಾಜೆಕ್ಟ್​ ಇಂಜಿನಿಯರ್​
- ಸೀನಿಯರ್​ ಇಂಜಿನಿಯರ್​ - 1
- ಸೀನಿಯರ್​ ಜಾವಾ ಡೆವಲಪರ್​ - 10
- ಸೀನಿಯರ್​ ಟೆಸ್ಟ್​ ಇಂಜಿನಿಯರ್​ - 2
- ಸೀನಿಯರ್​ ಡೇಟಾ ಬೇಸ್​ ಇಂಜಿನಿಯರ್​ - 2
- ಸೀನಿಯರ್​ ಡೆವಲಪ್​ಮೆಂಟ್​ ಆ್ಯಂಡ್​ ಆಪರೇಷನ್ಸ್​ ಇಂಜಿನಿಯರ್​ - 2
- ಇಂಜಿನಿಯರ್​ - 1
- ಡೇಟಾಬೇಸ್​ ಇಂಜಿನಿಯರ್​ - 2
- ಸಾಫ್ಟ್‌ವೇರ್​ ಡಿಸೈನ್​ ಆ್ಯಂಡ್​ ಡೆವಲಪ್​ಮೆಂಟ್​ ಇಂಜಿನಿಯರ್​ - 3
- ಟೆಸ್ಟ್​ ಇಂಜಿನಿಯರ್​ - 4
- ಜಾವಾ ಡೆವಲಪರ್​ - 25
- ಡೆವಲಪ್​ಮೆಂಟ್​ ಆ್ಯಂಡ್​ ಆಪರೇಷನ್ಸ್​ ಇಂಜಿನಿಯರ್​ - 3

ಶೈಕ್ಷಣಿಕ ಅರ್ಹತೆ: ಹುದ್ದೆಗೆ ಅನುಗುಣವಾಗಿ ಐಟಿ, ಬಿಇ, ಬಿಟೆಕ್​, ಎಂಟೆಕ್​, ಎಂಸಿಎ, ಎಂಇ, ಎಂಎಸ್​ಸಿಯಲ್ಲಿ (ಕಂಪ್ಯೂಟರ್​ ಸೈನ್ಸ್​) ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರಬೇಕು. ವೃತ್ತಿ ಅನುಭವ ಅವಶ್ಯ

ವಯೋಮಿತಿ: 3.7.2021ಕ್ಕೆ ಅನ್ವಯವಾಗುವಂತೆ ಹುದ್ದೆಗಳಿಗೆ ಅನುಗುಣವಾಗಿ ಗರಿಷ್ಠ 30, 37 ವರ್ಷ ನಿಗದಿಪಡಿಸಲಾಗಿದ್ದು, ಮೀಸಲಾತಿ ಅಭ್ಯರ್ಥಿಗಳಿಗೆ ವಯೋ ಸಡಿಲಿಕೆ ಇದೆ.

ವೇತನ
ಪ್ರಾಜೆಕ್ಟ್​ ಇಂಜಿನಿಯರ್​ ಹುದ್ದೆಯ ವರ್ಗಗಳಿಗೆ ಅನುಗುಣವಾಗಿ ಮಾಸಿಕ 36,158 ರೂ.ನಿಂದ 57,378 ರೂ. ವೇತನ ಇದೆ.

ನೇಮಕಾತಿ ವಿಧಾನ
ಅಭ್ಯರ್ಥಿಗಳ ಶೈಕ್ಷಣಿಕ ಅಂಕ, ವೃತ್ತಿ ಅನುಭವ, ಲಿಖಿತ ಪರೀಕ್ಷೆ ಅಂಕ, ಸಂದರ್ಶನದಲ್ಲಿ ಪಾಲ್ಗೊಂಡ ಬಗೆಗಳನ್ನು ಆಧರಿಸಿ ನೇಮಕ ಮಾಡಿಕೊಳ್ಳಲಾಗುವುದು. ಆನ್​ಲೈನ್​ ಸಂದರ್ಶನದ ದಿನಾಂಕವನ್ನು ಇ-ಮೇಲ್​ ಮೂಲಕ ತಿಳಿಸಲಾಗುವುದು.

ಅರ್ಜಿ ಶುಲ್ಕ
ಎಸ್​ಸಿ, ಎಸ್ಟಿ, ಅಂಗವಿಕಲ, ಮಹಿಳಾ, ಆಥಿರ್ಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದ ಅಭ್ಯರ್ಥಿಗಳು 200 ರೂ. ಪಾವತಿಸಬೇಕು. ಒಂದಕ್ಕಿಂತ ಹೆಚ್ಚು ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪ್ರತಿ ಹುದ್ದೆಗೂ ಪ್ರತ್ಯೇಕ ಅರ್ಜಿ ಶುಲ್ಕ ಪಾವತಿಸಬೇಕು.

ಅರ್ಜಿ ಸಲ್ಲಿಸಲು ಕೊನೇ ದಿನ: 3.7.2021
ಅಧಿಸೂಚನೆಗೆ: https://bit.ly/3gLolZ4
ಮಾಹಿತಿಗೆ: https://cdac.in

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net