ಇಂಜಿನಿಯರಿಂಗ್‌ ಪದವೀಧರರಿಗೆ ಇಲ್ಲಿದೆ ಅವಕಾಶ: ಬಿಇಎಲ್‌ನಿಂದ ಅರ್ಜಿ ಆಹ್ವಾನ

BEL
Published on

ರಕ್ಷಣಾ ಸಚಿವಾಲಯದ ಅಧೀನದಲ್ಲಿ ಕಾರ್ಯ ನಿರ್ವಹಿಸುವ ಭಾರತ್​ ಎಲೆಕ್ಟ್ರಾನಿಕ್ಸ್​ ಲಿಮಿಟೆಡ್​ (ಬಿಇಎಲ್​) ನವರತ್ನ ಸಂಸ್ಥೆಗಳಲ್ಲಿ ಒಂದಾಗಿದೆ. ಬಿಇಎಲ್​ನ ಬೆಂಗಳೂರಿನಲ್ಲಿರುವ ಮಿಲಿಟರಿ ಕಮ್ಯುನಿಕೇಷನ್​ ಸ್ಟ್ರಾಟಜಿಕ್​ ಬಿಜಿನೆಸ್​ ಯುನಿಟ್​ನಲ್ಲಿ (ಎಸ್​ಬಿಯು) ಆರಂಭಿಸುತ್ತಿರುವ ಯೋಜನೆಗೆ ಪ್ರಾಜೆಕ್ಟ್​ ಇಂಜಿನಿಯರ್ಸ್​ಗಳನ್ನು ನೇಮಕ ಮಾಡಿಕೊಳ್ಳಲು ಅಧಿಸೂಚನೆ ಹೊರಡಿಸಲಾಗಿದೆ.

ಬೆಂಗಳೂರು ಕೇಂದ್ರದಿಂದ ನೇಮಕ ಮಾಡಿಕೊಳ್ಳಲಾಗುತ್ತಿರುವ 7 ಪ್ರಾಜೆಕ್ಟ್​ ಇಂಜಿನಿಯರ್ಸ್​ ಹುದ್ದೆಗಳಲ್ಲಿ ಸಾಮಾನ್ಯವರ್ಗಕ್ಕೆ 5 ಸ್ಥಾನ, ಎಸ್ಟಿಗೆ 1, ಆಥಿರ್ಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗಳಿಗೆ 1 ಸ್ಥಾನಗಳನ್ನು ಮೀಸಲಿರಿಸಲಾಗಿದೆ. ಈ ಹುದ್ದೆಯು ಕನಿಷ್ಠ 2 ವರ್ಷದ ಒಪ್ಪಂದಕ್ಕೆ ಒಳಪಟ್ಟಿದ್ದು, ಅಭ್ರರ್ಥಿಯ ಕಾರ್ಯಕ್ಷಮತೆ ಆಧರಿಸಿ ಗರಿಷ್ಠ 4 ವರ್ಷಕ್ಕೆ ಅವಧಿ ವಿಸ್ತರಿಸಬಹುದಾಗಿದೆ.

ಶೈಕ್ಷಣಿಕ ಅರ್ಹತೆ:ಎಲೆಕ್ಟ್ರಾನಿಕ್ಸ್​/ ಎಲೆಕ್ಟ್ರಾನಿಕ್ಸ್​ ಆ್ಯಂಡ್​ ಕಮ್ಯುನಿಕೇಷನ್​/ ಎಲೆಕ್ಟ್ರಾನಿಕ್ಸ್​ ಆ್ಯಂಡ್​ ಟೆಲಿ ಕಮ್ಯುನಿಕೇಷನ್​ನಲ್ಲಿ ಪೂರ್ಣಾವಧಿಯ ಬಿಇ/ ಬಿ.ಟೆಕ್​ ಪದವಿಯನ್ನು ಸಾಮಾನ್ಯವರ್ಗ, ಒಬಿಸಿ ಅಭ್ಯರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರಬೇಕು, ಎಸ್ಸಿ, ಎಸ್ಟಿ ಅಭ್ಯರ್ಥಿಗಳು ಉತ್ತೀರ್ಣರಾಗಿದ್ದರೆ ಸಾಕು. ವ್ಯಾಸಂಗದ ಬಳಿಕ ಮಾಹಿತಿ ತಂತ್ರಜ್ಞಾನ/ ನೆಟ್​ವರ್ಕ್​ ಪ್ರಾಜೆಕ್ಟ್​ಗಳಲ್ಲಿ ಕನಿಷ್ಠ 2 ವರ್ಷದ ವೃತ್ತಿ ಅನುಭವ ಹೊಂದಿರಬೇಕು. ಈ ವಿಷಯಗಳಲ್ಲಿ ಪ್ರಮಾಣಪತ್ರ ಹೊಂದಿದ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುವುದು.

ವಯೋಮಿತಿ: 1.8.2021ಕ್ಕೆ ಅನ್ವಯವಾಗುವಂತೆ ಗರಿಷ್ಠ 28 ವರ್ಷ. ಮೀಸಲಾತಿ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮದನ್ವಯ 3 ರಿಂದ 10 ವರ್ಷ ವಯೋ ಸಡಿಲಿಕೆ ಇದೆ.

ವೇತನ: ಮೊದಲ ವರ್ಷ ಮಾಸಿಕ 35,000 ರೂ, 2ನೇ ವರ್ಷ 40,000 ರೂ., 3 ಮತ್ತು 4ನೇ ವರ್ಷಕ್ಕೆ ಕ್ರಮವಾಗಿ 45,000 ರೂ. ಹಾಗೂ 50,000 ರೂ. ವೇತನ ಇರುತ್ತದೆ. ವಾಷಿರ್ಕ 10,000 ರೂ. ಅನ್ನು ಸಮವಸ್ತ್ರ ಭತ್ಯೆ, ಹೊಲಿಗೆ ವೆಚ್ಚ, ಪಾದರೆ ಭತ್ಯೆ, ವೈದ್ಯಕಿಯ ವಿಮಾ ಕಂತು ನೀಡಲಾಗುವುದು.

ಅರ್ಜಿಶುಲ್ಕ: ಎಸ್ಸಿ, ಎಸ್ಟಿ, ಅಂಗವಿಕಲ ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದ ಅಭ್ಯರ್ಥಿಗಳಿಗೆ 500 ರೂ.

ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳ ಶೈಕ್ಷಣಿಕ ಅಂಕ, ವೃತ್ತಿ ಅನುಭವ ಆಧರಿಸಿ ಶಾರ್ಟ್​ಲಿಸ್ಟ್​ ಮಾಡಿ 1:5ರ ಅನುಪಾತದಲ್ಲಿ ಸಂದರ್ಶನಕ್ಕೆ ಆಹ್ವಾನಿಸಲಾಗುವುದು. ಆಯ್ಕೆಪಟ್ಟಿಯನ್ನು ಬಿಇಎಲ್​ ವೆಬ್​ಸೈಟ್​ನಲ್ಲಿ ಪ್ರಕಟಿಸಲಾಗುವುದು. ಅಭ್ಯರ್ಥಿಗಳು ತಮ್ಮ ಸಂದರ್ಶನದ ಆಹ್ವಾನಪತ್ರದ ಪ್ರತಿ ಪಡೆದು ಸಂದರ್ಶನದ ಸಮಯದಲ್ಲಿ ತರಲು ಸೂಚಿಸಲಾಗಿದೆ.

ಅರ್ಜಿಸಲ್ಲಿಸಲು ಕೊನೇ ದಿನ: 8.10.2021

ಅಧಿಸೂಚನೆಗೆ: https://bit.ly/3AUdmUC

ಮಾಹಿತಿಗೆ: http://www.bel-india.in

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net