

ಉತ್ತಮ ಸ್ಟೈಪೆಂಡ್ನೊಂದಿಗೆ ಉದ್ಯೋಗ ತರಬೇತಿಯನ್ನು ನೀಡಲು ಕೇಂದ್ರ ಸರ್ಕಾರದ ಮಿನಿರತ್ನ ಕಂಪನಿಗಳಲ್ಲಿ ಒಂದಾಗಿರುವ ರೈಲ್ಟೆಲ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್ ಮುಂದಾಗಿದೆ. ಬೆಂಗಳೂರು ಸೇರಿ ದೇಶದ ವಿವಿಧ ಭಾಗಗಳಲ್ಲಿರುವ ಸರ್ಕಾರಿ ಕಚೇರಿಗಳಲ್ಲಿ ಈ ತರಬೇತಿಯನ್ನು ಹಮ್ಮಿಕೊಳ್ಳಲಿದೆ. ಆಸಕ್ತರು ಅರ್ಜಿ ಸಲ್ಲಿಸಬಹುದು.
ಶೈಕ್ಷಣಿಕ ಅಂಕಗಳ ಆಧಾರದಲ್ಲಿ ಬೆಂಗಳೂರು, ಚೆನ್ನೈ, ದೆಹಲಿ, ಜೈಪುರ್, ಕೋಲ್ಕತ್ತ, ಪಟನಾ, ಲಖನೌ, ರಾಂಚಿ, ಮುಂಬೈ, ಭೋಪಾಲ್ ಹಾಗೂ ಇತರ ಪ್ರದೇಶಗಳಲ್ಲಿರುವ ವಿವಿಧ ಸರ್ಕಾರಿ ಕಚೇರಿಗಳಲ್ಲಿ ನೇಮಕ ಮಾಡಿಕೊಳ್ಳಲಾಗುತ್ತದೆ. ಈ ತರಬೇತಿಯು ಒಂದು ವರ್ಷದ ಅವಧಿಯದ್ದಾಗಿದೆ. ಈಗಾಗಲೇ ಶಿಶಿಕ್ಷು ತರಬೇತಿ ಪಡೆದಿರುವ ಅಭ್ಯರ್ಥಿಗಳಿಗೆ ಅವಕಾಶ ಇರುವುದಿಲ್ಲ. ಒಟ್ಟು ಸ್ಥಾನಗಳು 68 ಇವೆ.
ಸ್ಥಾನಗಳ ವಿವರ
-ಗ್ರಾಜುಯೇಟ್/ ಡಿಪ್ಲೋಮಾ ಇಂಜಿನಿಯರ್ಸ್
- ಎಲೆಕ್ಟ್ರಾನಿಕ್ಸ್ ಆ್ಯಂಡ್ ಟೆಲಿಕಮ್ಯುನಿಕೇಷನ್
- ಕಂಪ್ಯೂಟರ್ ಸೈನ್ಸ್
- ಸಿವಿಲ್ ಇಂಜಿನಿಯರಿಂಗ್
- ಎಲೆಕ್ಟ್ರಿಕಲ್ ಆ್ಯಂಡ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್
ವಿದ್ಯಾರ್ಹತೆ:
ಹುದ್ದೆಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ನಾಲ್ಕು ವರ್ಷಗಳ ರೆಗ್ಯುಲರ್ ಇಂಜಿನಿಯರಿಂಗ್, 3 ವರ್ಷಗಳ ರೆಗ್ಯುಲರ್ ಡಿಪ್ಲೋಮಾ ಇಂಜಿನಿಯರಿಂಗ್ ಪದವಿ ಪಡೆದಿದ್ದು, ಪದವಿಯಲ್ಲಿ ಕನಿಷ್ಠ ಶೇ.60 ಅಂಕ ಪಡೆದಿರಬೇಕು.
ವಯೋಮಿತಿ:
30.11.2020ಕ್ಕೆ ಅನುಗುಣವಾಗಿ ಕನಿಷ್ಠ 18 ವರ್ಷ, ಗರಿಷ್ಠ 27 ವರ್ಷ. ಮೀಸಲಾತಿ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮದನ್ವಯ ವಯೋಸಡಿಲಿಕೆ ಇದೆ.
ಸ್ಟೈಪೆಂಡ್:
ಗ್ರಾಜುಯೇಟ್ ಇಂಜಿನಿಯರ್ಸ್ಗೆ ಮಾಸಿಕ 14,000 ರೂ., ಡಿಪ್ಲೋಮಾ ಇಂಜಿನಿಯರ್ಸ್ಗೆ ಮಾಸಿಕ 12,000 ರೂ. ಸ್ಟೈಪೆಂಡ್ ನೀಡಲಾಗುವುದು.
ನೋಂದಾಯಿತರಾಗಿರಬೇಕು:
ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ನ್ಯಾಷನಲ್ ಅಪ್ರೆಂಟೀಸ್ಷಿಪ್ ಟ್ರೈನಿಂಗ್ ಸ್ಕೀಮ್ನಲ್ಲಿ (ಎನ್ಎಟಿಎಸ್) ನೋಂದಾಯಿತರಾಗಿದ್ದು, ವೆಬ್ಸೈಟ್ http://www.mhrdnats.gov.in ಮೂಲಕವೇ ಅರ್ಜಿ ಸಲ್ಲಿಸಬೇಕು. ಬೋರ್ಡ್ ಆಫ್ ಅಪ್ರೆಂಟೀಸ್ ಟ್ರೈನಿಂಗ್ನಲ್ಲಿ (ಬಿಒಎಟಿ) ನೋಂದಾಯಿತರಾಗಿರಬೇಕು.
ಆಯ್ಕೆ ಪ್ರಕ್ರಿಯೆ: ಶೈಕ್ಷಣಿಕ ಅಂಕ, ಅಪ್ರೆಂಟೀಸ್ ಅಗತ್ಯ ಇರುವ ಸರ್ಕಾರದ ಕಚೇರಿಗಳ ರಾಜ್ಯ, ಪ್ರಾದೇಶಿಕ ಸ್ಥಳಗಳ ಆಧಾರದಲ್ಲಿ ಮೆರಿಟ್ ಲಿಸ್ಟ್ ಸಿದ್ಧಪಡಿಸಲಾಗುವುದು. ಮೆರಿಟ್ ಲಿಸ್ಟ್ನಲ್ಲಿರುವ ಅಭ್ಯರ್ಥಿಗಳಿಗೆ ಸಂದರ್ಶನ ನಡೆಸಿ ಆಯ್ಕೆ ಮಾಡಲಾಗುವುದು. ಅಪ್ರೆಂಟೀಸ್ಷಿಪ್ಗೆ ಈ ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದು, ಯಾವುದೇ ಅಭ್ಯರ್ಥಿಯು ಹುದ್ದೆಯನ್ನು ಪರ್ಮನೆಂಟ್ ಮಾಡಬೇಕೆಂದು ಕೇಳುವಂತಿಲ್ಲ.
ಅರ್ಜಿ ಸಲ್ಲಿಸಲು ಕೊನೇ ದಿನ: 11.1.2021
ಅಧಿಸೂಚನೆಗೆ: https://bit.ly/3aCXr2L
ಮಾಹಿತಿಗೆ: https://www.railtelindia.com
ಹೆಚ್ಚಿನ ಉದ್ಯೋಗದ ಮಾಹಿತಿ ಈ ಲಿಂಕ್ ಕ್ಲಿಕ್ಕಿಸಿ