ಮಾದರಿ ಗ್ರಾಮ ಪಂಚಾಯತಿ ಯೋಜನೆಗೆ ಬೇಕಾಗಿದ್ದಾರೆ 510 ಅರ್ಹ ಅಭ್ಯರ್ಥಿಗಳು

udyoga
Published on

ಗ್ರಾಮೀಣಾಭಿವೃದ್ಧಿ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುವ ಸ್ವಾಯತ್ತ ಸಂಸ್ಥೆಯಾದ ಹೈದರಾಬಾದ್‍ನ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆï ರೂರಲ್ ಡೆವಲಪ್‍ಮೆಂಟ್ ಆ್ಯಂಡ್ ಪಂಚಾಯತ್ ರಾಜ್ (ಎನ್‍ಐಆರ್‍ಡಿ ಆ್ಯಂಡ್ ಪಿಆರ್) ದೇಶಾದ್ಯಂತ ಗ್ರಾಮ ಪಂಚಾಯ್ತಿಗಳ ಸಬಲೀಕರಣಕ್ಕೆ ಯೋಜನೆ ಕೈಗೊಂಡಿದೆ. ಇದರನ್ವಯ ಕಾರ್ಯ ನಿರ್ವಹಿಸಲು ಸೂಕ್ತ ಅಭ್ಯರ್ಥಿಗಳಿಗಾಗಿ ಶೋಧ ನಡೆಸಿದೆ.

ಗ್ರಾಮಪಂಚಾಯಿತಿಗಳ ಸಾಂಸ್ಥಿಕ ಬಲವರ್ಧನೆ ಮತ್ತು ಭಾರತದಾದ್ಯಂತ ಗುಣಮಟ್ಟದ ಗ್ರಾಮಾಭಿವೃದ್ಧಿ ಯೋಜನೆಗಳನ್ನು ಸಕ್ರಿಯಗೊಳಿಸುವ ಮೂಲಕ `ಸಮಗ್ರ ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಸಾಧಿಸಲು ಮಾದರಿ ಗ್ರಾಮ ಪಂಚಾಯಿತಿಗಳ ಸಮೂಹಗಳನ್ನು ರಚನೆ' ಎಂಬ ರಾಷ್ಟ್ರಮಟ್ಟದ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಗ್ರಾಮ ಪಂಚಾಯ್ತಿ, ಕ್ಲಸ್ಟರ್ ಹಾಗೂ ರಾಜ್ಯಮಟ್ಟದಲ್ಲಿ ಕಾರ್ಯ ನಿರ್ವಹಿಸಬೇಕಿದೆ. ಎಲ್ಲ ರಾಜ್ಯ ಮತ್ತು ಗುರುತಿಸಲಾದ 250 ಕ್ಲಸ್ಟರ್‍ಗಳಲ್ಲಿ ಕೆಲಸ ಮಾಡಲು ಸಿದ್ಧರಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಕರ್ನಾಟಕದ ರಾಯಚೂರು ಮತ್ತು ಯಾದಗಿರಿ ಜಿಲ್ಲೆಯ ಗ್ರಾಮಪಂಚಾಯಿತಿಗಳನ್ನು ಯೋಜನೆಯಡಿ ಸೇರಿಸಿಕೊಳ್ಳಲಾಗಿದೆ. ಹುದ್ದೆಯು 1 ವರ್ಷದ ಅವಧಿ ಹೊಂದಿದ್ದು, ಯೋಜನೆಯ ಮುಂದುವರಿಕೆ ಮತ್ತು ಕಾರ್ಯಕ್ಷಮತೆ ಆಧರಿಸಿ ಅವಧಿ ವಿಸ್ತರಿಸಬಹುದು. 510 ಹುದ್ದೆಗಳಲ್ಲಿ ಸಾಮಾನ್ಯವರ್ಗಕ್ಕೆ 255 ಹುದ್ದೆ, ಎಸ್‍ಸಿಗೆ 77, ಎಸ್‍ಟಿಗೆ 39, ಇತರ ಹಿಂದುಳಿದ ವರ್ಗಕ್ಕೆ 139 ಹುದ್ದೆಗಳನ್ನು ಮೀಸಲಿರಿಸಲಾಗಿದೆ.

ಹುದ್ದೆ, ಸಂಖ್ಯೆ ವಿವರ

* ಸ್ಟೇಟ್ ಪ್ರೋಗ್ರಾಮ್ ಕೋ-ಆರ್ಡಿನೇಟರ್ - 10

* ಯಂಗ್ ಫೆಲೋ - 250

* ಕ್ಲಸ್ಟರ್ ಲೆವೆಲ್ ರಿಸೋರ್ಸ್ ಪರ್ಸನ್ - 250

ವಿದ್ಯಾರ್ಹತೆ: ಪಿಯುಸಿ, ಸ್ನಾತಕೋತ್ತರ ಪದವಿ (ಸೋಷಿಯಲ್ ಸೈನ್ಸ್, ಅರ್ಥಶಾಸ್ತ್ರ/ ರೂರಲ್ ಡೆವೆಲಪ್‍ಮೆಂಟ್/ರೂರಲ್ ಮ್ಯಾನೇಜ್‍ಮೆಂಟ್/ ರಾಜ್ಯಶಾಸ್ತ್ರ/ ಸಮಾಜಶಾಸ್ತ್ರ/ ಅಂತ್ರೊಪಾಲಜಿ/ ಸಮಾಜಸೇವೆ/ ಡೆವಲಪ್‍ಮೆಂಟ್ ಸ್ಟಡೀಸ್/ ಇತಿಹಾಸ) 10ನೇ ತರಗತಿಯಲ್ಲಿ ಕನಿಷ್ಠ ಶೇ.60 ಅಂಕ, ಪಿಯುಸಿ, ಪದವಿ ಮತ್ತು ಸ್ನಾತಕೋತ್ತರ ಪದವಿಯಲ್ಲಿ ಶೇ.50 ಅಂಕ ಪಡೆದಿರಬೇಕು.

ವೇತನ:

ಹುದ್ದೆಗೆ ಅನುಗುಣವಾಗಿ ಮಾಸಿಕ 12,500 ರೂ. 35,000 ರೂ ಹಾಗೂ 55,000 ರೂ. ಜತೆಗೆ ಸಂಸ್ಥೆ ನಿಯಮದನ್ವಯ ಪ್ರವಾಸ ಭತ್ಯೆ ನೀಡಲಾಗುವುದು.

ವಯೋಮಿತಿ

1.11.2020ಕ್ಕೆ ಗರಿಷ್ಠ 21-50 ವರ್ಷ. ಎಸ್‍ಸಿ, ಎಸ್‍ಟಿ ಅಭ್ಯರ್ಥಿಗಳಿಗೆ 5 ವರ್ಷ, ಇತರ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 3 ವರ್ಷ ವಯೋಸಡಿಲಿಕೆ ಇದೆ.

ಅರ್ಜಿ ಸಲ್ಲಿಸಲು ಕೊನೇ ದಿನ: 29.12.2020

ಅಧಿಸೂಚನೆಗೆ ಇಲ್ಲಿ ಕ್ಲಿಕ್ಕಿಸಿ: https://bit.ly/3mjDpfT

ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ: http://nirdpr.org.in/

ಇನ್ನೂ ಹೆಚ್ಚಿನ ಉದ್ಯೋಗಗಳ ಮಾಹಿತಿಗೆ https://www.vijayavani.net/ ವಿಭಾಗದ ಅಂಕಣ ಕಾಲಂನಲ್ಲಿ ಉದ್ಯೋಗಮಿತ್ರ ಕ್ಲಿಕ್ಕಿಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net