ಇಸ್ರೋದಲ್ಲಿ ಕೆಲಸ ಮಾಡುವ ಇಚ್ಛೆಯೆ? 160 ಅಪ್ರೆಂಟೀಸ್​ಗಳ ನೇಮಕಾತಿಗೆ ಅರ್ಜಿ ಆಹ್ವಾನ

Isro
Published on

ಇಸ್ರೋ ಅಧೀನದ ಸಂಸ್ಥೆಯಾಗಿರುವ ತಿರುವನಂತಪುರದ ಲಿಕ್ವಿಡ್​ ಪ್ರೊಪಲ್​ಷನ್​ ಸಿಸ್ಟಂ ಸೆಂಟರ್​ (ಎಲ್​ಪಿಎಸ್​ಸಿ) ಇಂಜಿನಿಯರಿಂಗ್​ ಡಿಪ್ಲೊಮಾ ಹಾಗೂ ಪದವೀಧರರಿಂದ ಉದ್ಯೋಗ ತರಬೇತಿಗಾಗಿ ಅರ್ಜಿ ಆಹ್ವಾನಿಸಿದೆ. ಅಪ್ರೆಂಟೀಸ್​ ತರಬೇತಿಯು ಕೇರಳದ ಎಲ್​ಪಿಎಸ್​ಸಿಯಲ್ಲಿ 1 ವರ್ಷ ಇರಲಿದೆ. ಈ ಮೊದಲು ಅಪ್ರೆಂಟೀಸ್​ ತರಬೇತಿ ಪಡೆದವರಿಗೆ ಮತ್ತೆ ಅವಕಾಶ ಇರುವುದಿಲ್ಲ. ಅಪ್ರೆಂಟೀಸ್​ ನಿಯಮದ ಪ್ರಕಾರ ವಯೋಮಿತಿ ಇರಲಿದೆ. ಅಭ್ಯರ್ಥಿಗಳ ಶೈಕ್ಷಣಿಕ ಅಂಕ ಹಾಗೂ ಮೀಸಲಾತಿ ನಿಯಮಗಳ ಆಧಾರದ ಮೇಲೆ ಅಂತಿಮ ಆಯ್ಕೆ ಪ್ರಕ್ರಿಯೆ ಮಾಡಲಾಗುವುದು.

ಸ್ಥಾನಗಳ ವಿವರ
- ಗ್ರಾಜುಯೇಟ್​ ಅಪ್ರೆಂಟೀಸ್​ - 73
* ಮೆಕಾನಿಕಲ್​ ಇಂಜಿನಿಯರಿಂಗ್​ - 40
* ಎಲೆಕ್ಟ್ರಿಕಲ್​ ಆ್ಯಂಡ್​ ಎಲೆಕ್ಟ್ರಾನಿಕ್ಸ್​ - 7
* ಎಲೆಕ್ಟ್ರಾನಿಕ್ಸ್​ ಆ್ಯಂಡ್​ ಕಮ್ಯುನಿಕೇಷನ್​ - 8
* ಇನ್​ಸ್ಟ್ರುಮೆಂಟೇಷನ್​ ಇಂಜಿನಿಯರಿಂಗ್​ - 2
* ಕೆಮಿಕಲ್​ - 1
* ಕಂಪ್ಯೂಟರ್​ ಸೈನ್ಸ್​ ಆ್ಯಂಡ್​ ಇಂಜಿನಿಯರಿಂಗ್​ - 5
* ಸಿವಿಲ್​ - 4
* ಲೈಬ್ರರಿ ಸೈನ್ಸ್​ - 6

- ಡಿಪ್ಲೊಮಾ ಅಪ್ರೆಂಟೀಸ್​ - 87
* ಮೆಕ್ಯಾನಿಕಲ್​ - 53
* ಎಲೆಕ್ಟ್ರಿಕಲ್​ ಆ್ಯಂಡ್​ ಎಲೆಕ್ಟ್ರಾನಿಕ್ಸ್​ - 7
* ಎಲೆಕ್ಟ್ರಾನಿಕ್ಸ್​ ಆ್ಯಂಡ್​ ಕಮ್ಯುನಿಕೇಷನ್​ - 13
* ಸಿವಿಲ್​ - 6
* ಕಂಪ್ಯೂಟರ್​ ಸೈನ್ಸ್​ ಆ್ಯಂಡ್​ ಇಂಜಿನಿಯರಿಂಗ್​ - 5
* ಆಟೋ ಮೊಬೈಲ್​ - 2
* ಕೆಮಿಕಲ್​ - 1

ಶೈಕ್ಷಣಿಕ ಅರ್ಹತೆ: ಗ್ರಾಜುಯೇಟ್​ ಅಪ್ರೆಂಟೀಸ್​ಗೆ ಇಂಜಿನಿಯರಿಂಗ್​ನಲ್ಲಿ ಪ್ರಥಮ ದರ್ಜೆಯಲ್ಲಿ ಪದವಿ ಪಡೆದಿದ್ದು, ಶೇ.65ಕ್ಕಿಂತ ಕಡಿಮೆ ಇರಬಾರದು. ಡಿಪ್ಲೊಮಾ ಅಪ್ರೆಂಟೀಸ್​ಗೆ 3 ವರ್ಷದ ಡಿಪ್ಲೊಮಾ ಮಾಡಿದ್ದು, ಕನಿಷ್ಠ ಶೇ.60 ಅಂಕ ಪಡೆದಿರಬೇಕು.

ಸ್ಟೆ$ಪೆಂಡ್​ : ಗ್ರಾಜುಯೇಟ್​ ಅಪ್ರೆಂಟೀಸ್​ಗೆ ಮಾಸಿಕ 9,000 ರೂ., ಹಾಗೂ ಡಿಪ್ಲೊಮಾ ಅಪ್ರೆಂಟೀಸ್​ಗೆ ಮಾಸಿಕ 8,000 ರೂ. ಸ್ಟೆ$ಪೆಂಡ್​ ನೀಡಲಾಗುವುದು.

ಸೂಚನೆ: ನ್ಯಾಷನಲ್​ ಅಪ್ರೆಂಟೀಸ್​ ಟೆನಿಂಗ್​ ವೆಬ್​ಸೈಟ್​ನಲ್ಲಿ ದಿನಾಂಕ 20.7.2021ರ ಒಳಗಾಗಿ ಅಭ್ಯರ್ಥಿಗಳು ನೋಂದಾಯಿತರಾಗಬೇಕು. ಜು.26 ಅರ್ಜಿ ಸಲ್ಲಿಕೆಗೆ ಕೊನೇ ದಿನವಾಗಿದ್ದು, ಆ.2ರಂದು ಶಾರ್ಟ್​ಲಿಸ್ಟ್​ ಪ್ರಕಟಿಸಲಾಗುವುದು.

ಅರ್ಜಿ ಸಲ್ಲಿಸಲು ಕೊನೇ ದಿನ: 26.7.2021
ಅಧಿಸೂಚನೆಗೆ: https://bit.ly/3jzRAzQ
ನೋಂದಣಿಗೆ:http://portal.mhrdnats.gov.in/
ಮಾಹಿತಿಗೆ: https://www.lpsc.gov.in/

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net