

ಬೆಂಗಳೂರಿನ ನ್ಯಾಯ ವಿಜ್ಞಾನ ಪ್ರಯೋಗಾಲಯ ಮತ್ತು ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯ ಟಕಗಳಲ್ಲಿ ಖಾಲಿ ಇರುವ ಮಿಕ್ಕುಳಿದ ವೃಂದದ ವೈಜ್ಞಾನಿಕ ಅಧಿಕಾರಿ ಹುದ್ದೆಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ. ಒಬ್ಬ ಅಭ್ಯರ್ಥಿ 3 ವಿಭಾಗಗಳಿಗೆ ಅರ್ಜಿ ಸಲ್ಲಿಸಲು ಅರ್ಹನಾಗಿದ್ದು, ಪ್ರತಿ ವಿಭಾಗಕ್ಕೂ ಪ್ರತ್ಯೇಕ ಅರ್ಜಿ ಶುಲ್ಕ ಪಾವತಿಸಬೇಕು.
ಒಟ್ಟು ಹುದ್ದೆಗಳು: 84
ನೇಮಕ ಮಾಡಿಕೊಳ್ಳುವ ವಿಭಾಗಗಳ ವಿವರ
* ಜೀವಶಾಸ್ತ್ರ ವಿಭಾಗ - 12
* ರಸಾಯನಶಾಸ್ತ್ರ ವಿಭಾಗ - 8
* ನಾಕೋರ್ಟಿಕ್ಸ್ ವಿಭಾಗ - 2
* ಭೌತಶಾಸ್ತ್ರ ವಿಭಾಗ - 5
* ಡಿಎನ್ಎ ವಿಭಾಗ - 2
* ಪ್ರಶ್ನಿತ ದಾಸ್ತಾವೇಜು ವಿಭಾಗ - 10
* ಅಗ್ನಿ ಅಸ್ತ್ರ ವಿಭಾಗ - 6
* ಫೊರೆನ್ಸಿಕ್ ಮನೋವಿಜ್ಞಾನ - 1
* ಕಂಪ್ಯೂಟರ್ ಫೊರೆನ್ಸಿಕ್ ವಿಭಾಗ - 5
* ಮೊಬೈಲ್ ಫೊರೆನ್ಸಿಕ್ಸ್ ವಿಭಾಗ - 5
* ಆಡಿಯೋ ವಿಡಿಯೋ ವಿಭಾಗ - 5
* ವಿಷ ವಿಜ್ಞಾನ ವಿಭಾಗ - 21
* ೋಟೋಗ್ರಫಿ ವಿಭಾಗ - 2
ವಿದ್ಯಾರ್ಹತೆ: ವಿಜ್ಞಾನ, ಸಸ್ಯಶಾಸ್ತ್ರ/ ಪ್ರಾಣಿಶಾಸ್ತ್ರ/ ಜೀವ ರಸಾಯನ ಶಾಸ್ತ್ರ/ ಸೂಕ್ಷ$್ಮ ಜೀವ ವಿಜ್ಞಾನ/ ಜೀವ ವಿಜ್ಞಾನ/ ವಿಧಿ ವಿಜ್ಞಾನ, ಔಷಧಶಾಸ್ತ್ರ, ಮನಃಶಾಸ್ತ್ರ, ಗಣಕ ವಿಜ್ಞಾನ/ ವಿದ್ಯುನ್ಮಾನ/ ಭೌತಶಾಸ್ತ್ರ/ ಮಾಹಿತಿ ವಿಜ್ಞಾನ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕನಿಷ್ಠ ಶೇ.55 ಅಂಕ ಪಡೆದಿರಬೇಕು.
ವಯೋಮಿತಿ: ಸಾಮಾನ್ಯವರ್ಗಕ್ಕೆ 35 ವರ್ಷ, 2ಎ, 2ಬಿ, 3ಎ, 3ಬಿಗೆ ಗರಿಷ್ಠ 38 ವರ್ಷ, ಎಸ್ಸಿ, ಎಸ್ಟಿ, ಪ್ರವರ್ಗ 1ಕ್ಕೆ ಗರಿಷ್ಠ 40 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.
ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುವುದು. ಸಾಮಾನ್ಯ ಪತ್ರಿಕೆ, ನಿದಿರ್ಷ್ಟ ಪತ್ರಿಕೆಗಳಿರುತ್ತದೆ.
ಅರ್ಜಿ ಸಲ್ಲಿಕೆ ವಿಧಾನ: ಅಜಿರ್ಗಳನ್ನು ಇಲಾಖೆಯ ಅಧಿಕೃತ ವೆಬ್ಸೈಟ್ ಜಠಿಠಿಟಠ://್ಟಛ್ಚ್ಟ್ಠಿಜಿಠಿಞಛ್ಞಿಠಿ.ಠಟ.ಜಟಡ.ಜ್ಞಿ ನಲ್ಲಿ ಆನ್ಲೈನ್ ಮೂಲಕ ಸಲ್ಲಿಸಲು ಸೂಚಿಸಲಾಗಿದೆ. ಅಜಿರ್ಗಳನ್ನು ಖುದ್ದಾಗಿ ಅಥವಾ ಅಂಚೆ ಮೂಲಕ ಸಲ್ಲಿಸಲು ಅವಕಾಶ ಇರುವುದಿಲ್ಲ.
ಅರ್ಜಿ ಶುಲ್ಕ: ಸಾಮಾನ್ಯವರ್ಗ, ಪ್ರವರ್ಗ 2ಎ, 2ಬಿ, 3ಎ, 3ಬಿಗೆ ಸೇರಿದ ಅಭ್ಯರ್ಥಿಗಳಿಗೆ 250 ರೂ., ಎಸ್ಸಿ, ಎಸ್ಟಿ, ಪ್ರವರ್ಗ 1ಕ್ಕೆ ಸೇರಿದ ಅಭ್ಯರ್ಥಿಗಳಿಗೆ 100 ರೂ. ಶುಲ್ಕ ನಿಗದಿಪಡಿಸಲಾಗಿದೆ. ಶುಲ್ಕ ಪಾವತಿಸಲು 9.7.2021 ಕೊನೇ ದಿನ.
ವೇತನ: ಮಾಸಿಕ 40,900-78,200 ರೂ. ವೇತನ ಇದ್ದು, ಅಂಶದಾಯಿ ಪಿಂಚಣಿ ಸೌಲಭ್ಯ ಇದೆ.
ಅರ್ಜಿ ಸಲ್ಲಿಸಲು ಕೊನೇ ದಿನ: 7.7.2021
ಅಧಿಸೂಚನೆಗೆ: https://bit.ly/3ipXxib
ಮಾಹಿತಿಗೆ: https://recruitment.ksp.gov.in