ವಿವಿಧ ಪದವೀಧರರಿಗೆ ಡಿಜಿಟಲ್​ ಇಂಡಿಯಾದಲ್ಲಿದೆ ಉದ್ಯೋಗಾವಕಾಶ: 39 ಹುದ್ದೆಗಳಿಗೆ ಆಹ್ವಾನ

job digital india
Published on

ಈ ಮೊದಲು ಮೀಡಿಯಾ ಲ್ಯಾಬ್​ ಏಷ್ಯಾ ಎಂದು ಕರೆಯಲಾಗುತ್ತಿದ್ದ ಕಂಪನಿಯನ್ನು ಈಗ ಡಿಜಿಟಲ್​ ಇಂಡಿಯಾ ಕಾರ್ಪೋರೇಷನ್‌ ಎಂದು ಮಾರ್ಪಡಿಸಲಾಗಿದೆ. ಇದು ಎಲೆಕ್ಟ್ರಾನಿಕ್ಸ್​ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಧೀನದ ಲಾಭರಹಿತ ಕಂಪನಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಡಿಜಿಟಲ್​ ಕ್ಷೇತ್ರದಲ್ಲಿ ಮೂಲಸೌಕರ್ಯ ಅಭಿವೃದ್ಧಿ, ಇ-ಗವರ್ನೆನ್ಸ್​ಗೆ ಸಂಬಂಧಿಸಿದಂತೆ ವಿವಿಧ ಸಚಿವಾಲಯ, ಇಲಾಖೆಗಳಿಗೆ ವ್ಯೂಹಾತ್ಮಕ ನೆರವು ಒದಗಿಸುತ್ತಿದೆ. ಸಂಸ್ಥೆಯಲ್ಲಿ ವಿವಿಧ ಹುದ್ದೆಗಳಿಗೆ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದೆ. ಹುದ್ದೆಗಳಿಗೆ ಅನುಗುಣವಾಗಿ ವೃತ್ತಿ ಅನುಭವ, ಶೈಕ್ಷಣಿಕ ಅಂಕ, ಕೌಶಲ ಆಧರಿಸಿ ವೇತನ ನಿಗದಿಪಡಿಸಲಾಗುವುದು. ಶಾರ್ಟ್​ಲಿಸ್ಟ್​ ಮಾಡಲಾದ ಅಭ್ಯಥಿರ್ಗಳಿಗೆ ಸಂದರ್ಶನದ ಮಾಹಿತಿಯನ್ನು ಕಳುಹಿಸಲಾಗುವುದು.

ಹುದ್ದೆ ವಿವರ

- ಉಮಂಗ್​ ಯೋಜನೆ - 34

* ಡೆವಲಪರ್​/ ಸೀನಿಯರ್​ ಡೆವಲಪರ್​ (ಬ್ಯಾಕ್​ಎಂಡ್​-ಕೋರ್​- 2, ುಲ್​ ಸ್ಟಾಕ್​- 2, ಬಿಜಿನೆಸ್​ ಇಂಟೆಲಿಜೆನ್ಸ್​- 1, ಎಪಿಐ-3, ಡಬ್ಲುಎಸ್​ಒ2 - 1)- 9 *ಲೀಡ್​ (ಬಿಜಿನೆಸ್​ ಇಂಟೆಲಿಜೆನ್ಸ್​)-1 *ಟೆಕ್ನಿಕಲ್​ ಆಕಿರ್ಟೆಕ್ಟ್​- 1 *ಸಿಸ್ಟಂ ಸೆಕ್ಯುರಿಟಿ ಕನ್ಸಲ್ಟಂಟ್​-1 *ಟೆಕ್ನಿಕಲ್​ ಸಪೋರ್ಟ್​ (ಲೀಡ್​- 1, ಅನಾಲಿಸ್ಟ್​-3) - 3 *ಕ್ವಾಲಿಟಿ ಅನಾಲಿಸ್ಟ್​- 4 *ಕ್ವಾಲಿಟಿ ಅನಾಲಿಸ್ಟ್​ ಲೀಡ್​- 1 *ಪ್ರಾಡಕ್ಟ್​ ಮ್ಯಾನೇಜರ್​ - 1 *ಯುಎಕ್ಸ್​ ಡಿಸೈನರ್​ - 1 *ಯುಐ ಡಿಸೈನರ್​ - 1 *ಕನ್ಸಲ್ಟಂಟ್​/ ಲೀಡ್​ ಬಿಜಿನೆಸ್​ ಅನಾಲಿಸ್ಟ್​ - 1 *ಬಿಜಿನೆಸ್​ ಅನಾಲಿಸ್ಟ್​ - 3 *ಡಾಟಾಬೇಸ್​ ಅಡ್ಮಿನಿಸ್ಟ್ರೆಟರ್​ - 1 *ಡೆವಲಪರ್​ -ಡಾಟಾಬೇಸ್​ - 1 *ಡೆವಲಪ್​ಮೆಂಟ್​ ಲೀಡ್​-ಬ್ಯಾಕ್​ಎಂಡ್​ - 1 *ಸಿಸ್ಟಂ ಅಡ್ಮಿನಿಸ್ಟ್ರೆಟರ್​ - 1 *ಅಸಿಸ್ಟೆಂಟ್​ ಮ್ಯಾನೇಜರ್​- ಎಐ ಕನ್ವೇಷನಲ್​ - 1 *ಡೆವಲಪರ್​- ಆರ್​ಎಎಸ್​ - 1

ಏನು ಓದಿರಬೇಕು?

ಬಿಇ, ಬಿ.ಟೆಕ್​/ ಎಂಟೆಕ್​/ ಎಂ.ಎಸ್ಸಿ/ ಎಂಸಿಎ ಅಧ್ಯಯನ ಮಾಡಿದ್ದು, ವೆಬ್​ ಡೆವಲಪ್​ಮೆಂಟ್​, ಸ್ಟಾ್​ವೇರ್​ ಟೆಸ್ಟಿಂಗ್​ ಹಾಗೂ ಹುದ್ದೆ ಸಂಬಂಧಿತ ವಿಷಯಗಳಲ್ಲಿ ವೃತ್ತಿ ಅನುಭವ ಹೊಂದಿರಬೇಕು.

ಅರ್ಜಿ ಸಲ್ಲಿಸಲು ಕೊನೇ ದಿನ: ಮೊದಲು ಅರ್ಜಿ ಸಲ್ಲಿಸಿದವರಿಗೆ ಆದ್ಯತೆ ಮೇರೆಗೆ ಅವಕಾಶ

ಅಧಿಸೂಚನೆಗೆ: https://bit.ly/3iFmN3b

- ಎನ್​ಇಜಿಡಿ ವಿಭಾಗ - 5

* ಸಲಹೆಗಾರ- ಸಾಮಾಜಿಕ ಮಾಧ್ಯಮ ಮತ್ತು ವಿಷಯ ಬರಹಗಾರ - 3 * ವಿಡಿಯೋ ಎಡಿಟರ್​ ಮತ್ತು ಮೋಷನ್​ ಗ್ರಾಫಿಕ್ಸ್​ ಕಲಾವಿದ - 1 *ಗ್ರಾಫಿಕ್​ ಡಿಸೈನರ್​ - 1

ವಿದ್ಯಾರ್ಹತೆ: ಜರ್ನಲಿಸಂ/ ಮಾಸ್​ ಕಮ್ಯುನಿಕೇಷನ್​/ ತತ್ಸಮಾನ ವಿಷಯದಲ್ಲಿ ಸ್ನಾತಕೋತ್ತರ ಪದವಿ, ಗ್ರಾಫಿಕ್​ ಡಿಸೈನ್​/ ಮಲ್ಟಿ ಮೀಡಿಯಾ/ ವಿಡಿಯೋ ಕ್ರಿಯೇಷನ್​/ ಎಡಿಟಿಂಗ್​ನಲ್ಲಿ ಕೋರ್ಸ್​ ಮಾಡಿದ್ದು, ವೃತ್ತಿ ಅನುಭವ ಇರುವ ಅಭ್ಯಥಿರ್ಗಳು ಅರ್ಜಿಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಕೊನೇ ದಿನ: 13.10.2021

ಅಧಿಸೂಚನೆಗೆ: https://bit.ly/2ZURNFW

ಇತರ ಹುದ್ದೆ:

ಇತರ ಡೆಪ್ಯುಟೇಷನ್​ ಹುದ್ದೆಗಳಿಗೂ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಅಭ್ಯರ್ಥಿಗಳು  ಈ ಲಿಂಕ್​ ನೋಡಿ: https://bit.ly/3oG3Q4c

ಮಾಹಿತಿಗೆ: http://www.dic.gov.in

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net