ಕೇಂದ್ರ ಸರ್ಕಾರದಲ್ಲಿ ಖಾಲಿ ಇವೆ ಹುದ್ದೆಗಳು: ಪದವೀಧರರಿಗೂ ಸಿಗಲಿದೆ ಅವಕಾಶ

udyoga-upsc
Published on

ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಗೃಹ ಇಲಾಖೆಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‍ಸಿ) ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಅಹ್ವಾನಿಸಿ ಅಧಿಸೂಚನೆ ಹೊರಡಿಸಿದೆ.

ಪದವಿ ಪಡೆದ ಅಭ್ಯರ್ಥಿಗಳಿಗೂ ಉದ್ಯೋಗಾವಕಾಶವಿದೆ. ಹೆಚ್ಚಿನ ಸಂಖ್ಯೆಯಲ್ಲಿ ಎಂಬಿಬಿಎಸ್ ಮಾಡಿದ ಅಭ್ಯರ್ಥಿಗಳಿಗೆ ಅವಕಾಶವಿದೆ. ಆಯ್ಕೆಯಾದ ಅಭ್ಯರ್ಥಿಗಳನ್ನು ದೇಶದ ಯಾವ ಭಾಗದಲ್ಲಿ ಬೇಕಾದರೂ ನೇಮಕ ಮಾಡಬಹುದು.ಒಟ್ಟು ಹುದ್ದೆಗಳು: 56

ಹುದ್ದೆ, ಸಂಖ್ಯೆ ವಿವರ

* ಅಸಿಸ್ಟೆಂಟ್ ಡೈರೆಕ್ಟರ್ (ಶಿಪ್ಪಿಂಗ್)- 1

* ಅಸಿಸ್ಟೆಂಟ್ ಪ್ರೊಫೆಸರ್ (ಚರ್ಮರೋಗ, ಕುಷ್ಠರೋಗ, ವೆನೆರಿಯಾಲಜಿ, ವೈದ್ಯಕೀಯ ಗ್ಯಾಸ್ಟ್ರೋಎಂಟರಾಲಜಿ, ನೇತ್ರಶಾಸ, ಅಬ್ಸೆರೆಟ್ರಿಕ್ಸ್ ಮತ್ತು ಸೀರೋಗಶಾಸ, ಪೀಡಿಯಾಟ್ರಿಕ್ ಕಾರ್ಡಿಯಾಲಜಿ, ಮಕ್ಕಳ ಶಸಚಿಕಿತ್ಸೆ, ಪ್ಲಾಸ್ಟಿಕ್ ಮತ್ತು ಪುನರ್‍ನಿರ್ಮಾಣ ಶಸಚಿಕಿತ್ಸೆ) (ಸ್ಪೆಷಲಿಸ್ಟ್ ಗ್ರೇಡ್ 3) - 54

* ಅಸಿಸ್ಟೆಂಟ್ ಡೈರೆಕ್ಟರ್ - 1

ಶೈಕ್ಷಣಿಕ ಅರ್ಹತೆ: ಯಾವುದೇ ಪದವಿ, ಎಂಬಿಬಿಎಸ್.

ವಯೋಮಿತಿ: ಅಸಿಸ್ಟೆಂಟ್ ಡೈರೆಕ್ಟರ್ (ಶಿಪ್ಪಿಂಗ್)ಗೆ 35 ವರ್ಷ, ಉಳಿದ ಹುದ್ದೆಗಳಿಗೆ ಗರಿಷ್ಠ 40 ವರ್ಷ.

ಅರ್ಜಿ ಶುಲ್ಕ: ಎಸ್ಸಿ, ಎಸ್ಟಿ, ಅಂಗವಿಕಲ, ಮಹಿಳಾ ಅಭ್ಯರ್ಥಿಗಳನ್ನು ಹೊರತು ಪಡಿಸಿ ಉಳಿದ ಅಭ್ಯರ್ಥಿಗಳಿಗೆ 25 ರೂ.

ಅರ್ಜಿ ಸಲ್ಲಿಸಲು ಕೊನೇ ದಿನ: 28.1.2021

ಅಧಿಸೂಚನೆಗೆ: https://bit.ly/39qJdjA

ಮಾಹಿತಿಗೆ: http://www.upsconline.nic.in

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net