

ವಾಷಿಂಗ್ಟನ್: ಡೊನಾಲ್ಡ್ ಟ್ರಂಪ್ ಅವರ ಮೇಲೆ ಸದಾ ಒಂದಿಲ್ಲೊಂದು ರೀತಿಯಲ್ಲಿ ಕೆಂಡ ಕಾರುತ್ತಿರುವ ನಟಿ ಡೆಬ್ರಾ ಮೆಸ್ಸಿಂಗ್ ಇದೀಗ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಜೋ ಬೈಡೆನ್ ಅವರೇ ಅಧ್ಯಕ್ಷರು ಎಂದು ಚುನಾವಣಾ ಆಯೋಗ ಘೋಷಣೆಯ ಬೆನ್ನಲ್ಲೇ ಇದೀಗ ಡೆಬ್ರಾ ಟ್ರಂಪ್ ವಿರುದ್ಧ ಅಸಮಾಧಾನವನ್ನು ಹೊರಹಾಕಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
"ಡೊನಾಲ್ಡ್ ಟ್ರಂಪ್ ಅಧಿಕಾರಾವಧಿ ಮುಕ್ತಾಯಗೊಂಡು ಶ್ವೇತಭವನದಿಂದ ಅವರು ನಿರ್ಗಮಿಸುತ್ತಿದ್ದಂತೆಯೇ ಅವರನ್ನು ಜೈಲಿನಲ್ಲಿ ಇರಿಸಬೇಕು. ಅಲ್ಲಿ ಎಲ್ಲ ಕೈದಿಗಳಿಗೆ ಇವರು ಬಾಯ್ಫ್ರೆಂಡ್ ಆಗಬೇಕು. ಎಲ್ಲರೂ ಸೇರಿ ಟ್ರಂಪ್ ಅವರನ್ನು ರೇಪ್ ಮಾಡಬೇಕು" ಎಂದು ಡೆಬ್ರಾ ಮೆಸ್ಸಿಂಗ್ ಟ್ವೀಟ್ ಮಾಡಿದ್ದಾರೆ.
ಈ ಟ್ವೀಟ್ ಅನ್ನು ಖುದ್ದು ಟ್ರಂಪ್ ಅವರಿಗೂ ಟ್ಯಾಗ್ ಮಾಡಿದ್ದಾರೆ ನಟಿ ಡೆಬ್ರಾ. ಅದರ ಜತೆಗೆ ಕ್ಯಾಪ್ಷನ್ ಬರೆದಿರುವ ಈಕೆ, ನೀವು ದುರ್ಬಲ, ಪ್ರತೀಕಾರಕ್ಕೆ ಬಯಸುವ ವ್ಯಕ್ತಿ, ಕ್ರಿಮಿನಲ್, ಅಸಮರ್ಥ, ಅವಿವೇಕಿ ಮಾತ್ರವಲ್ಲದೇ ಭಯಭೀತಗೊಂಡಿರುವ ವ್ಯಕ್ತಿ ಎಂದು ನಿಂದಿಸಿದ್ದಾರೆ.
ನಿಮ್ಮನ್ನು ಜೈಲಿನಲ್ಲಿ ಇಡುತ್ತಾರೆ. ಅಲ್ಲಿರುವ ಕೈದಿಗಳಿಗೆ ನೀವು ಬಾಯ್ಫ್ರೆಂಡ್ ಆಗುತ್ತೀರಿ. ಎಲ್ಲರೂ ಸೇರಿ ನಿಮ್ಮನ್ನು ರೇಪ್ ಮಾಡಬೇಕು ಎಂದು ಬರೆದಿದ್ದಾರೆ. ಈ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ನಂತರ ಈಗ ಆಕೆಯ ಟ್ವೀಟ್ ಡಿಲೀಟ್ ಮಾಡಲಾಗಿದೆ. ಆದರೆ ಅದರ ಸ್ಕ್ರೀನ್ಷಾಟ್ ಎಲ್ಲೆಡೆ ಹರಿದಾಡುತ್ತಿದೆ.