ನಿಯಂತ್ರಣದ ತಪ್ಪಿ ಗುಡಿಸಲುಗಳಿಗೆ ನುಗ್ಗಿದ ಟ್ರಕ್‌: ಸವಿನಿದ್ದೆಯಲ್ಲಿದ್ದ ಎಂಟು ಮಂದಿ ದುರ್ಮರಣ

accident
Published on

ಅಮ್ರೇಲಿ : ಗುಜರಾತ್‌ನ ಅಮ್ರೇಲಿ ಜಿಲ್ಲೆಯ ಸವರ್ಕುಂಡ್ಲಾದ ಬರ್ಹಾಡಾ ಗ್ರಾಮದ ಬಳಿ ಭೀಕರ ಅಪಘಾತವೊಂದು ನಡೆದಿದೆ. ಟ್ರಕ್‌ ಚಾಲಕನ ನಿಯಂತ್ರಣ ತಪ್ಪಿ, ಟ್ರಕ್ ಕೆಲವು ಗುಡಿಸಿಲುಗಳಿಗೆ ನುಗ್ಗಿದೆ. ಇದರ ಪರಿಣಾಮವಾಗಿ ನಿದ್ದೆಯಲ್ಲಿದ್ದ ಎಂಟು ಜನರ ಸ್ಥಳದಲ್ಲಿಯೇ ಮೃತಪಟ್ಟಿದ್ದು ಹಲವರಿಗೆ ಗಂಭೀರ ಗಾಯಗಳಾಗಿವೆ.

ಬೆಳಗಿನ ಜಾವ 3 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಟ್ರಕ್ ನಿಯಂತ್ರಣ ತಪ್ಪಿ ಗುಡಿಸಲಿಗೆ ನುಗ್ಗಿ ಹೊಂಡಕ್ಕೆ ಉರುಳಿದ ಪರಿಣಾಮ ಈ ಘಟನೆ ಸಂಭವಿಸಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಸಾವರಕುಂಡ್ಲಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಘಟನೆಯ ನಂತರ, ಮುಖ್ಯಮಂತ್ರಿ ವಿಜಯ್ ರೂಪಾನಿ ಅವರು ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸುವುದಾಗಿ ಟ್ವೀಟ್ ಮಾಡಿದ್ದಾರೆ ಮತ್ತು ಮೃತರ ಕುಟುಂಬಗಳಿಗೆ 4ಲಕ್ಷ ರೂ.ಗಳ ಸಹಾಯವನ್ನು ಘೋಷಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net