ಒಂದು ಹುಡುಗಿ ಸಿಗೋದೇ ಕಷ್ಟ- ತ್ರಿವಳಿಗಳ ಮನಸ್ಸು ನೋಯಿಸಲಾಗದೇ ಎಲ್ಲರನ್ನೂ ಒಟ್ಟಿಗೇ ಮದ್ವೆಯಾದ!

trivali
Published on

ಕಾಂಗೋ: ಒಂದು ಕಡೆ ಹುಡುಗಿನೇ ಸಿಗ್ತಿಲ್ಲ ಎಂದು ಯುವಕರು ಗೋಳೋ ಅಂತಿದ್ರೆ ಅದೇ ಇನ್ನೊಂದೆಡೆ ಯುವಕರು ಮೋಸದಿಂದಲೋ ಇಲ್ಲಾ ಗೊತ್ತಿದ್ದೋ ಒಂದಕ್ಕಿಂತ ಹೆಚ್ಚು ಮದುವೆಯಾಗುತ್ತಿರುವ ಬಗ್ಗೆ ವರದಿಗಳು ಆಗುತ್ತಲೇ ಇವೆ. ಅಂಥದ್ದೇ ಒಂದು ವರದಿ ಇದು. ಒಬ್ಬನೇ ಯುವಕ ಮೂರು ಮಂದಿಯನ್ನು ಮದುವೆಯಾಗಿದ್ದಾನೆ. ಹಾಗೆಂದು ಇದೇನು ಮೋಸದಿಂದ ಅಲ್ಲ, ಬದಲಿಗೆ ಯುವತಿಯರು ಖುಷಿಯಿಂದಲೇ ಮದುವೆಯಾಗಿದ್ದಾರೆ.

ಅಂದಹಾಗೆ ಇದು ನಡೆದಿರುವುದು ಕಾಂಗೋದಲ್ಲಿ. ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯದಲ್ಲಿ 32 ವರ್ಷ ವಯಸ್ಸಿನ ಲುವಿಜೋ ಎಂಬಾತ ಮೂವರನ್ನು ವರಿಸಿದ್ದಾನೆ. ಅವರ ಹೆಸರು ನಡೆಗೆ, ನತಾಶಾ ಮತ್ತು ನಟಾಲಿ. ಇವರು ತ್ರಿವಳಿಗಳು ಎನ್ನುವುದು ವಿಶೇಷ.

ಅಷ್ಟಕ್ಕೂ ಲುವಿಜೋ ಯಾವುದೇ ಕಾನೂನು ಮೀರಿಲ್ಲ. ಏಕೆಂದರೆ ಇಲ್ಲಿ ಬಹುಪತ್ನಿತ್ವಕ್ಕೆ ಅವಕಾಶವಿದೆ. ಅಷ್ಟೇ ಅಲ್ಲದೇ ಈ ಮೂವರು ಸಹೋದರಿಯರು ಒಬ್ಬನನ್ನೇ ಮದುವೆಯಾಗುವ ಹಂಬಲ ವ್ಯಕ್ತಪಡಿಸಿದ್ದರಿಂದ ಹಾಗೂ ಮೂವರೂ ಈತನಿಗೆ ಮನಸೋತ ಹಿನ್ನೆಲೆಯಲ್ಲಿ ಎಲ್ಲರನ್ನೂ ಮದುವೆಯಾಗಿದ್ದಾನೆ.

'ನನಗೆ ಮೂರು ಮದುವೆಯೇನೂ ಇಷ್ಟ ಇರಲಿಲ್ಲ. ಆದರೆ ಈ ತ್ರಿವಳಿ ಸಹೋದರಿಯರು ಬಂದು ಪ್ರಪೋಸ್​ ಮಾಡಿದಾಗ ಅವರ ಮನಸ್ಸನ್ನು ನೋಯಿಸಲು ಆಗಲಿಲ್ಲ. ಎಲ್ಲರೂ ಒಬ್ಬನನ್ನೇ ಮದುವೆಯಾಗುವ ಹಂಬಲ ವ್ಯಕ್ತಪಡಿಸಿದ್ದರಿಂದ ನಾನೂ ಒಪ್ಪಿಕೊಂಡೆ' ಎಂದಿದ್ದಾನೆ ಲುವಿಜೋ. ಮೊದಲು ನಟಾಲಿಯಾಳನ್ನು ಪ್ರೀತಿಸಿದೆ. ನಂತರ ಆಕೆ ತನ್ನ ಇಬ್ಬರು ಸಹೋದರಿಯರ ಬಗ್ಗೆ ಹೇಳಿದಾಗ ಅವರೂ ಒಪ್ಪಿದರು. ಅವರ ಈ ಪ್ರಪೋಸ್​ ಒಪ್ಪಿಕೊಂಡೆ ಎಂದಿದ್ದಾನೆ.

ಇಲ್ಲಿ ಮೂರು ಮದುವೆಯಾಗುವ ಅವಕಾಶ ಕಾನೂನಿನ ಅಡಿ ಇದ್ದರೂ ನಮ್ಮ ಮನೆಯಲ್ಲಿ ಇದಕ್ಕೆ ಮೊದಲು ಒಪ್ಪಿಗೆ ನೀಡಿರಲಿಲ್ಲ. ಅಷ್ಟೇ ಅಲ್ಲದೇ ವಿವಾಹಕ್ಕೂ ಸಿಟ್ಟುನಿಂದ ಯಾರೂ ಬರಲಿಲ್ಲ. ಎಲ್ಲರನ್ನೂ ಮನವೊಲಿಸುವ ಪ್ರಯತ್ನ ಮಾಡುತ್ತಿದ್ದೇನೆ ಎಂದಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net