ಮಗುವನ್ನು ತೋರಿಸದೇ ಪತ್ನಿ ಪ್ರಾಣ ಬೆದರಿಕೆ ಹಾಕಿದ್ರೆ ಗಂಡನಿಗೆ ಕಾನೂನು ಹೇಗೆ ನೆರವಾಗಬಲ್ಲುದು?

nyayadevate
ಸಾಂದರ್ಭಿಕ ಚಿತ್ರ
Published on
ಮೇಡಂ ನನಗೆ ಮದುವೆ ಆಗಿ ಮೂರು ವರ್ಷದ ಹೆಣ್ಣು ಮಗು ಇದೆ. ನನ್ನ ಹೆಂಡತಿಗೆ ಅವರ ಊರಿನಲ್ಲಿ ಒಬ್ಬ ಅನ್ಯ ಧರ್ಮದ ಯುವಕನ ಜತೆ ಅಕ್ರಮ ಸಂಬಂಧ ಇದೆ. ಆ ವಿಷಯ ನನಗೆ ಗೊತ್ತಾಗಿ ಅವರ ಮನೆಯವರನ್ನು ವಿಚಾರಿಸಿದಾಗ ಏನೋ ಚಿಕ್ಕ ಹುಡುಗಿ ಅಂತ ಹೇಳಿದ್ದಾರೆ.

ಸರಿ ಅಂತ ನಾನು ಸಂಸಾರ ನಿಭಾಯಿಸಿಕೊಂಡು ಹೋಗುತ್ತಿದ್ದೆ. ಆದರೆ ಅವರ ಮನೆಯವರು ಪದೇ ಪದೇ ಬಂದು ಅವಳನ್ನು ಊರಿಗೆ ಕರೆದುಕೊಂಡು ಹೋಗುತ್ತಿದ್ದರು. ನಾವು ಹೋಗಿ ನ್ಯಾಯ ಮಾಡಿ ಕರೆದುಕೊಂಡು ಬರುತ್ತಿದ್ದೆವು. ಆದರೆ ಮತ್ತೆ ಕರೆದುಕೊಂಡು ಹೋಗಿ ಆರು ತಿಂಗಳಾಗಿವೆ. ಫೋನ್ ಮಾಡಿದರೆ ನೀನು ಬಂದರೆ ನಿನ್ನನ್ನು ಸಾಯಿಸುತ್ತೀನಿ ಅಂತಿದ್ದಾರೆ. ಏನು ಮಾಡುವುದು ಗೊತ್ತಾಗುತ್ತಿಲ್ಲ. ನನಗೆ ಮಗು ಬೇಕು ಏನು ಮಾಡಬೇಕು?

ಉತ್ತರ: ʼನನ್ನ ಪತ್ನಿ ಯಾವುದೇ ಸಕಾರಣವಿಲ್ಲದೇ ನನ್ನನ್ನು ತೊರೆದು ಹೋಗಿದ್ದಾಳೆ. ಅವಳು ಬಂದು ನನ್ನ ಜತೆ ದಾಂಪತ್ಯ ಜೀವನ ನಡೆಸಬೇಕುʼ ಎಂದು ನೀವು ಪ್ರಕರಣ ದಾಖಲಿಸಬಹುದು. ನಿಮ್ಮ ಮಗುವಿನ ಕಸ್ಟಡಿ ನಿಮಗೇ ಕೊಡಬೇಕೆಂದೂ ಕೇಳಿಕೊಂಡು ಅದಕ್ಕೇ ಬೇರೆ ಪ್ರಕರಣವನ್ನೂ ದಾಖಲಿಸಬಹುದು.

ನಿಮ್ಮ ಪತ್ನಿಯಿಂದ ಅಥವಾ ಅವಳ ಕಡೆಯವರಿಂದ ನಿಮಗೆ ಪ್ರಾಣ ಬೆದರಿಕೆ ಇದ್ದರೆ ನೀವು ಪೊಲೀಸರಲ್ಲಿ ಕಂಪ್ಲೇಂಟ್‌ ಕೊಡಬಹುದು. ಆದರೆ, ಕೇಸು ಹಾಕುವ ಮೊದಲು, ನಿಮ್ಮ ಪತ್ನಿ ಇರುವ ತಾಲ್ಲೂಕಿನ ನ್ಯಾಯಾಲಯದಲ್ಲಿ ಇರುವ ಮಧ್ಯಸ್ಥಿಕೆ ಕೇಂದ್ರಕ್ಕೆ ಒಂದು ಅರ್ಜಿ ಕೊಡಿ. ನಿಮ್ಮಿಬ್ಬರ ಮಧ್ಯೆ ಇರುವ ಸಮಸ್ಯೆಯನ್ನು, 'ವ್ಯಾಜ್ಯ ಪೂರ್ವ ಮಧ್ಯಸ್ಥಿಕೆ'ಯ ಮೂಲಕ ಬಗೆಹರಿಸಿಕೊಡಿ ಎಂದು ಕೇಳಿಕೊಳ್ಳಿ. ಅವರು ನಿಮ್ಮಿಬ್ಬರನ್ನೂ ಕರೆಯಿಸಿ ಮಧ್ಯಸ್ಥಿಕೆ ನಡೆಸುತ್ತಾರೆ. ನಿಮ್ಮ ಸಮಸ್ಯೆ ಪರಿಹಾರ ಆಗದಿದ್ದರೆ, ಆಗ ಕೇಸು ದಾಖಲಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net