

ಬೆಂಗಳೂರು: ಪುಟ್ಟೇನಹಳ್ಳಿ ಡಬಲ್ ಮರ್ಡರ್ ಪ್ರಕರಣದ ಆರೋಪಿ ಕಾಲಿಗೆ ಗಡು ಹೊಡೆದ ಪುಟ್ಟೇನಹಳ್ಳಿ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಹಂತಕ ಮಂಜುನಾಥ್ ಅಲಿಯಾಸ್ ಅಂಬಾರಿಯೇ ಡಬಲ್ ಮರ್ಡರ್ ಮಾಡಿದ್ದ ಆರೋಪಿ.
ಆರೋಪಿಯು ನಿನ್ನೆ ಕೋಣನಕುಂಟೆ ಬಳಿ ತಲೆಮರೆಸಿಕೊಂಡಿದ್ದರ ಬಗ್ಗೆ ಮಾಹಿತಿ ತಿಳಿದ ಪುಟ್ಟೇನಹಳ್ಳಿ ಪೊಲೀಸರು, ಆತನನ್ನು ಬಂಧಿಸಲು ಹೋಗಿದ್ದರು. ಆಗ ಆರೋಪಿ ಮಂಜುನಾಥ್ ಪೊಲೀಸರ ಮೇಲೆಯೇ ಹಲ್ಲೆಗೆ ಮುಂದಾಗಿದ್ದ. ಆತ್ಮರಕ್ಷಣೆಗಾಗಿ ಪುಟ್ಟೇನಹಳ್ಳಿ ಇನ್ಸ್ಪೆಕ್ಟರ್ ಕಿಶೋರ್ ಆರೋಪಿ ಕಾಲಿಗೆ ಫೈರ್ ಮಾಡಿ ಸೆರೆಹಿಡಿದಿದ್ದಾರೆ.
ಏನಿದು ಪ್ರಕರಣ?
ಕಳೆದ ಏಪ್ರಿಲ್ 7ರ ತಡ ರಾತ್ರಿ ಜೆಪಿನಗರದ ನಿವಾಸಿ ಮಮತಾ ಬಸು ಮನೆಗೆ ನುಗ್ಗಿದ್ದ ಆರೋಪಿಯು ಮನೆಯಲ್ಲಿದ್ದ ದೇವಮೃತ ಮೆಹ್ರಾ ಹಾಗೂ ಮಮತಾ ಬಸು ಅವರನ್ನು ಚೂರಿಯಿಂದ ಇರಿದು ಕೊಲೆ ಮಾಡಿದ್ದ. ಆರೋಪಿ ಚಿನ್ನಾಭರಣ, ಹಣ ಹಾಗೂ ಇತರೇ ಬೆಲೆಬಾಳುವ ವಸ್ತು ಪಡೆಯಲು ಹತ್ಯೆ ಮಾಡಿದ್ದ. ಬಳಿಕ ತನ್ನ ಸುಳಿವು ಸಿಗಬಾರದು ಎಂಬ ಕಾರಣಕ್ಕೆ ಮನೆಯಲ್ಲಿದ್ದ ಸಿಸಿಟಿವಿ ಡಿವಿಆರ್ ಕದ್ದೊಯ್ದಿದ್ದ. ಈ ಬಗ್ಗೆ ಪುಟ್ಟೇನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವಿಚಾರಣೆ ವೇಳೆ ಆರೋಪಿ ಮಂಜುನಾಥ್ 10ಕ್ಕೂ ಅಧಿಕ ಪ್ರಕರಣಗಳಲ್ಲಿ ಭಾಗಿಯಾಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ.