VIDEO: ಎನ್​ಕೌಂಟರ್​ನಲ್ಲಿ ಸತ್ತ ಹಿಜ್ಬುಲ್ ಉಗ್ರನ ತಂದೆಯಿಂದ ಧ್ವಜಾರೋಹಣ: ಎಲ್ಲರೂ ಹಾಡಿದರು ಜನಗಣಮನ!

pulwama
Published on

ಪುಲ್ವಾಮಾ (ಜಮ್ಮು): ಎಲ್ಲೆಡೆ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸುತ್ತಿದ್ದು, ಗಣ್ಯರು ಧ್ವಜಾರೋಹಣ ನೆರವೇರಿಸಿದ್ದಾರೆ.

ಆದರೆ ಜಮ್ಮುವಿನ ಪುಲ್ವಾಮಾದಲ್ಲಿ ಮಾತ್ರ ಅತ್ಯಂತ ಕ್ರೂರಿ ಎನಿಸಿಕೊಂಡಿರುವ ಉಗ್ರ ಬುರ್ಹಾನ್ ವಾನಿಯ ತಂದೆ ಧ್ವಜಾರೋಹಣ ಮಾಡಿರುವುದು ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ. 2016ರಲ್ಲಿ ಭದ್ರತಾ ಪಡೆ ಬೇಟೆಯಾಡಿದ್ದ ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕ ಸಂಘಟನೆಯ ಬುರ್ಹಾನ್ ವಾನಿಯ ತಂದೆ ಇವರು.

ಪುಲ್ವಾಮಾದ ಸರ್ಕಾರಿ ಶಾಲೆಯೊಂದರಲ್ಲಿ ನಡೆದ ಸಮಾರಂಭದಲ್ಲಿ ಉಗ್ರನ ತಂದೆ ಮುಜಾಫರ್ ವಾನಿ ಧ್ವಜಾರೋಹಣ ಮಾಡಿದ್ದಾರೆ. ನಂತರ ಅಲ್ಲಿ ನೆರವೇರಿದವರೆಲ್ಲಾ ಜನಗಣಮನ ಹಾಡಿದ್ದಾರೆ. ಇವರು ಶಾಲೆಯ ಶಿಕ್ಷಕರು. 2016 ರ ಜುಲೈನಲ್ಲಿ ದಕ್ಷಿಣ ಕಾಶ್ಮೀರದಲ್ಲಿ ಭದ್ರತಾ ಪಡೆ ನಡೆಸಿದ ಎನ್​ಕೌಂಟರ್​ನಲ್ಲಿ ಭಾರತೀಯ ಸೇನೆ ಉಗ್ರ ಬುರ್ಹಾನ್ ವಾನಿಯನ್ನು ಹೊಡೆದುರುಳಿಸಿತ್ತು.

ಈತ ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕ ಸಂಘಟನೆಗೆ ಸೇರಿದವನಾಗಿದ್ದು, ಇವನ ಸಾವು ಕಾಶ್ಮೀರದಾದ್ಯಂತ ಐದು ತಿಂಗಳುಗಳ ಕಾಲ ಹಿಂಸಾಚಾರ ಭುಗಿಲೇಳಲು ಕಾರಣವಾಗಿತ್ತು. ಈ ಗಲಭೆಯಲ್ಲಿ ನೂರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಸಾವಿರಾರು ಜನರು ಗಾಯಗೊಂಡಿದ್ದರು.

ಇಲ್ಲಿದೆ ನೋಡಿ ವಿಡಿಯೋ: ಕೃಪೆ- 'ದಿ ಟ್ರಿಬ್ಯೂನ್​'

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net