ಅಸ್ಸಾಂ ಗಡಿಯಲ್ಲಿ ಗುಂಡಿನ ಕಾಳಗಳ ಏಳು ಮಂದಿ ಉಗ್ರರನ್ನು ಹೊಡೆದುರುಳಿಸಿದ ಸೇನೆ

terrorist
Published on

ದಿಸ್ಪುರ್: ಅಸ್ಸಾಂ ನಾಗಲ್ಯಾಂಡ್ ಗಡಿಯ ವೆಸ್ಟ್ ಕರ್ಬಿ ಆಂಗ್ಲಾಂಗ್ ಜಿಲ್ಲೆಯಲ್ಲಿ ಭದ್ರತಾ ಸಿಬ್ಬಂದಿ ಹಾಗೂ ಉಗ್ರರ ನಡುವೆ ನಡೆದ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ ಏಳು ಮಂದಿ ಉಗ್ರರನ್ನು ಭದ್ರತಾ ಸಿಬ್ಬಂದಿ ಹೊಡೆದುರುಳಿಸಿದ್ದಾರೆ. ಈ ಉಗ್ರರು ನ್ಯಾಷನಲ್ ಲಿಬರ್ಟಿ ಆರ್ಮಿ(ಡಿಎನ್‍ಎಲ್‍ಎ) ಸೇರಿದವರಾಗಿದ್ದಾರೆ.

ಉಗ್ರರಿಂದ ಎಕೆ-47 ಸೇರಿದಂತೆ ಬೃಹತ್ ಪ್ರಮಾಣದ ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇಬ್ಬರು ಉಗ್ರರ ನಾಯಕರು ಗಾಯಗೊಂಡಿರುವ ಶಂಖೆ ಇದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಾಂತ ಬಿಸ್ವಾ ಶರ್ಮಾ ತಿಳಿಸಿದ್ದಾರೆ.

ಈ ಭಾಗದಲ್ಲಿ ಉಗ್ರರ ಹಾವಳಿ ಹೆಚ್ಚಾಗಿದೆ. ಮೇ 14ರಂದು ಅಸ್ಸಾಂನ ತಿನ್ಸೂಕಿಯಾ ಪ್ರದೇಶದಲ್ಲಿ ನಡೆದ ಗ್ರನೇಡ್ ದಾಳಿ ವೇಳೆ ಇಬ್ಬರು ನಾಗರಿಕರು ಮೃತಪಟ್ಟಿದ್ದರು. ಗುಪ್ತಚರ ದಳದ ಮಾಹಿತಿ ಮೇರೆಗೆ ವೆಸ್ಟ್ ಕರ್ಬಿ ಆಂಗ್ಲಾಂಗ್ ಎಎಸ್‍ಪಿ ಪ್ರಕಾಶ್ ಸೋನುವಾಲ್ ಅವರ ನೇತೃತ್ವದಲ್ಲಿ ಅಸ್ಸಾಂ ರೈಫಲ್ಸ್ ಪರ್ಸನಲ್‌ ಹಾಗೂ ಪೊಲೀಸರ ತಂಡ ಜಿಲ್ಲೆಯಲ್ಲಿ ಜಂಟಿ ಕಾರ್ಯಾಚರಣೆ ನಡೆಸಿವೆ ಎಂದು ಮೂಲಗಳು ಹೇಳಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net