ಹೃದಯದಲ್ಲಿ ತೊಂದರೆ, ಜ್ವರ: ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ್​ ಆಸ್ಪತ್ರೆಗೆ ದಾಖಲು

telanganaCM
Published on

ಹೈದರಾಬಾದ್​: ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್​ ರಾವ್​ ಅವರಿಗೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ತೀವ್ರವಾದ ಜ್ವರ, ಹಾಗೂ ಹೃದಯದಲ್ಲಿ ಸ್ವಲ್ಪ ಸಮಸ್ಯೆ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಮೂಲಗಳು ಹೇಳಿವೆ. ಹೈದರಾಬಾದ್​ನ ಯಶೋದಾ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ವೈದ್ಯರು ಆಂಜಿಯೋಗ್ರಾಂ ಪರೀಕ್ಷೆ ನಡೆಸಿದ್ದಾಗಿ ವರದಿಯಾಗಿದೆ.

ಕೆಸಿಆರ್​ ಹೃದಯದಲ್ಲಿ ಯಾವುದೇ ಬ್ಲಾಕ್​ಗಳು ಕಂಡು ಬಂದಿಲ್ಲ. ಇನ್ನು ಕೆಲವೇ ಹೊತ್ತಲ್ಲಿ ಸಿಟಿ ಸ್ಕ್ಯಾನ್​ ಮತ್ತು ಎಂಆರ್​ಐ ಸ್ಕ್ಯಾನ್​ಗಳನ್ನೂ ಮಾಡಲಾಗುವುದು ಎಂದು ವೈದ್ಯ ಎಂ.ವಿ.ರಾವ್ ಮಾಹಿತಿ ನೀಡಿದ್ದಾರೆ.

ಪ್ರತಿವರ್ಷ ಫೆಬ್ರವರಿಯಲ್ಲಿ ಚಂದ್ರಶೇಖರ್​ ರಾವ್​ ಅವರಿಗೆ ನಾವು ಎಲ್ಲ ರೀತಿಯ ಆರೋಗ್ಯ ತಪಾಸಣೆಯನ್ನೂ ಮಾಡುತ್ತೇವೆ. ಇದೀಗ ಸ್ವಲ್ಪ ಜ್ವರ, ಹೃದಯದಲ್ಲಿ ನೋವು ಕಾಣಿಸಿಕೊಂಡಿದ್ದರಿಂದ ಚಿಕಿತ್ಸೆ ಮಾಡಲಾಗುತ್ತಿದೆ. ವರದಿ ಬಂದ ಬಳಿಕ ಅದನ್ನು ಆಧರಿಸಿ ಚಿಕಿತ್ಸೆ ಶುರು ಮಾಡುತ್ತೇವೆ ಎಂದು ವೈದ್ಯರು ತಿಳಿಸಿದ್ದಾರೆ. ಚಂದ್ರಶೇಖರ್​ ಅವರ ಮಗಳು ಶೋಭಾ ರಾವ್​ ಮತ್ತು ಮಗಳು ಕೆ.ಕವಿತಾ ಅವರು ಆಸ್ಪತ್ರೆಗೆ ದೌಡಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net