

ಉತ್ತರಪ್ರದೇಶದಲ್ಲಿ ಅಕ್ರಮ ಮನೆಗಳನ್ನು ನೆಲಸಮ ಮಾಡುತ್ತಿರುವ ವಿರುದ್ಧ ಕೆಲವು ಮುಸ್ಲಿಂ ಸಂಘಟನೆಗಳು ಸಲ್ಲಿಸಿರುವ ಅರ್ಜಿಯ ವಿಚಾರಣೆ ವೇಳೆ ಕೋರ್ಟ್ ಮೌಖಿಕವಾಗಿ ಈ ರೀತಿ ಅಭಿಪ್ರಾಯ ವ್ಯಕ್ತಪಡಿಸಿದೆ. ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡು ಅಕ್ರಮ ಮನೆಗಳ ನೆಲಸಮ ಮಾಡಲಾಗುತ್ತಿದೆ ಎಂದು ಜಮೀಯತ್ ಉಲಮಾ - ಇ- ಹಿಂದ್ ಸೇರಿದಂತೆ ಕೆಲ ಸಂಘಟನೆಗಳು ಕೋರ್ಟ್ ಮೊರೆ ಹೋಗಿವೆ.
ವಿಚಾರಣೆ ವೇಳೆ ಸಂಘಟನೆ ಪರ ವಾದಿಸುತ್ತಿರುವ ಹಿರಿಯ ವಕೀಲ ದುಷ್ಯಂತ್ ದವೆ ಅವರು, ಕಾನೂನು ಮೀರಿ ಈ ರೀತಿ ಮನೆಗಳನ್ನು ನೆಲಸಮ ಮಾಡಲಾಗುತ್ತಿದೆ. ನಿರ್ದಿಷ್ಟ ಸಮುದಾಯದವರನ್ನು ಗುರಿಯಾಗಿಸಿಕೊಳ್ಳಗಿದೆ. ಬೇರೆ ಸಮುದಾಯದವರ ಮನೆಯನ್ನೂ ನಾಮ್ಕೇವಾಸ್ತೆ ಎನ್ನುವಂತೆ ನೆಲಸಮ ಮಾಡಲಾಗುತ್ತಿದೆ. ಆದ್ದರಿಂದ ಈ ಬಗ್ಗೆ ಸೂಕ್ತ ಕ್ರಮಕ್ಕೆ ಆದೇಶಿಸಿ, ಕಕ್ಷಿದಾರರಿಗೆ ನ್ಯಾಯ ಒದಗಿಸಬೇಕು ಎಂದು ಹೇಳಿದರು.
ನಿರ್ದಿಷ್ಟ ಸಮುದಾಯ ಎಂಬ ಮಾತು ಕೇಳಿದ ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಪಿ.ಎಸ್. ನರಸಿಂಹ ಅವರಿದ್ದ ಪೀಠ ವಕೀಲ ದವೆ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿತು. ಅದೇನದು ನಿರ್ದಿಷ್ಟ ಸಮುದಾಯ ಎನ್ನುವುದು? ಭಾರತದಲ್ಲಿ ಇರುವುದು ಭಾರತೀಯ ಸಮುದಾಯ ಮಾತ್ರ. ಬೇರೆ ಯಾವುದೇ ಸಮುದಾಯವಿಲ್ಲ. ಅನಾವಶ್ಯಕವಾಗಿ ಸಂವೇದನಾ ರಹಿತ ಹೇಳಿಕೆ ನೀಡಬೇಡಿ ಎಂದಿತು.
ನೀವು ಸಲ್ಲಿಸಿರುವ ಅರ್ಜಿಯನ್ನು ಆಲಿಸಲಾಗುವುದು. ಆದರೆ ಕಾನೂನಿನಲ್ಲಿರುವ ನಿಯಮವನ್ನು ಎಲ್ಲರೂ ಪಾಲಿಸಬೇಕು. ಅದರಲ್ಲಿ ಯಾರಿಗೂ ರಿಯಾಯಿತಿ ಇಲ್ಲ. ಬುಲ್ಡೋಜರ್ ಬದಲಾಗಿ ನಾವು ಓಮ್ನಿ ಬಸ್ ಮೂಲಕ ಕ್ರಮ ತೆಗೆದುಕೊಳ್ಳಿ ಎಂದು ಹೇಳಲು ಆಗದು ಎಂದ ಕೋರ್ಟ್ ವಿಚಾರಣೆಯನ್ನು ಮುಂದೂಡಿತು.
https://www.vijayavani.net/s-rana-duggubati-in-court-case/
https://www.vijayavani.net/s-iran-women-protest-hijab-islam-pictures-videos-removing-veils/
https://www.vijayavani.net/s-dri-accuses-oppo-india-of-evading-customs-duty/