VIDEO: ಹಾರಿ ಹಾರಿ ಜಿರಲೆ ಹಿಂದೆ ಹೋದ ನಟಿ ಸನ್ನಿ ಲಿಯೋನ್​- ವಿಡಿಯೋ ವೈರಲ್​

cockroach
Published on

ಮುಂಬೈ: ಸದಾ ಒಂದಿಲ್ಲೊಂದು ವಿಡಿಯೋವನ್ನು ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳುವ ಬಾಲಿವುಡ್​ ನಟಿ ಸನ್ನಿ ಲಿಯೋನ್​ ಇದೀಗ ಇನ್ನೊಂದು ವಿಡಿಯೋ ಶೇರ್​ ಮಾಡಿಕೊಂಡಿದ್ದಾರೆ. ಇದರಲ್ಲಿ ಸನ್ನಿ ಲಿಯೋನ್​ ಮತ್ತು ಪತಿ ಡೇನಿಯಲ್​ ಅವರು ಹಾರಿ ಹಾರಿ ಏನನ್ನೋ ಹಿಡಿಯಲು ಪ್ರಯತ್ನಿಸುವುದನ್ನು ನೋಡಬೇಕು.

ಅಸಲಿಗೆ ಈ ದಂಪತಿ ಹಿಡಿಯುತ್ತಿರುವುದು ಜಿರಳೆಯನ್ನು. ತಮ್ಮ ಮನೆಯಲ್ಲಿ ಜಿರಳೆ ಕಾಟ. ಆದ್ದರಿಂದ ಇದನ್ನು ಹೊರಕ್ಕೆ ಹಾಕಲು ತಾವು ಪ್ರಯತ್ನಿಸುತ್ತಿರುವುದಾಗಿ ಹೇಳಿದ್ದಾರೆ. ಇದಕ್ಕೆ ಅವರು, ವುಮೆನ್ vs ವೈಲ್ಡ್ ಎಂದು ಶೀರ್ಷಿಕೆ ನೀಡಿದ್ದಾರೆ.

ಇದೇ ವೇಳೆ ಜಿರಳೆಯ ಚುರುಕುತನವನ್ನೂ ಸನ್ನಿ ಹಾಡಿ ಹೊಗಳಿದ್ದಾರೆ. ಅದು ನಮಗಿಂತ ಬಹಳ ಚುರುಕಾಗಿತ್ತು. ಬಹುಶಃ ಅದಕ್ಕೇ ಜಿರಳೆ ನಮಗೆ ಸಿಗಲಿಲ್ಲ ಎಂದಿದ್ದಾರೆ. ಈ ವೀಡಿಯೊ ಈಗ ಭಾರಿ ವೈರಲ್ ಆಗಿದೆ. ಹಲವಾರು ಕಮೆಂಟಿಗರು ಹಲವಾರು ತೆರನಾಗಿ ಇದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ಸನ್ನಿಯವರಿಂದ ಸಾಧ್ಯವಾಗದ ಈ ಕೆಲಸಕ್ಕೆ ಅವರ ಪತಿ ಡೇನಿಯಲ್ ಸಹಾಯ ಮಾಡಿದ್ದಾರೆ. ಆದರೆ ಜಿರಲೆ ಮಾತ್ರ ತಪ್ಪಿಸಿಕೊಂಡು ಹೋಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net