ಮತ್ತೆ ಸಮಾಜಸೇವೆಯಲ್ಲಿ ನಟಿ ಸನ್ನಿ ಲಿಯೋನ್‌- ಒಂದು ಸಾವಿರ ಕಾರ್ಮಿಕರಿಗೆ ಊಟ

sunny
Published on

ನವದೆಹಲಿ: ನಟಿ ಸನ್ನಿ ಲಿಯೋನ್‌ ಎಂದಾಕ್ಷಣ ಎಲ್ಲರ ಕಣ್ಣಮುಂದೆ ಬರುವುದು ಇವರೊಬ್ಬ ನೀಲಿತಾರೆ ಎಂದು. ಆದರೆ ಇದರ ಹೊರತಾಗಿಯೂ ಅವರು ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿರುವುದಕ್ಕೆ ಲೆಕ್ಕವೇ ಇಲ್ಲ. ಇದಾಗಲೇ ಹಲವಾರು ಸಂದರ್ಭಗಳಲ್ಲಿ ಬಡ ಜನರಿಗೆ, ಅಗತ್ಯ ಇರುವವರಿಗೆ ಸೇವೆ ಮಾಡುವ ಮೂಲಕ ಸಮಾಜ ಸೇವಕಿ ಎನಿಸಿಕೊಂಡಿದ್ದಾರೆ.

ಇದೀಗ ಕರೊಆನಿಂದಾಗಿ ಅನೇಕ ವಲಸೆ ಕಾರ್ಮಿಕರು ತುತ್ತು ಅನ್ನಕ್ಕಾಗಿ ಪರದಾಡುವ ಸ್ಥಿತಿ ಬಂದಿದೆ. ಅಂಥವರಿಗೆ ನೆರವಾಗುತ್ತಿದ್ದಾರೆ ಸನ್ನಿ. ‘ಪೇಟಾ’ದ (People for the Ethical Treatment of Animals) ಜತೆ ಕೈ ಜೋಡಿಸಿರುವ ಸನ್ನಿ, ಸುಮಾರು 10 ಸಾವಿರ ಮಂದಿಗೆ ಅನ್ನ ನೀಡುವ ಕೆಲಸ ಮಾಡಿದ್ದಾರೆ. ‌

ಸದ್ಯ ನಾವು ಬಿಕ್ಕಟ್ಟನ್ನು ಎದುರಿಸುತ್ತಿದ್ದೇವೆ. ಇಂಥ ಸಂದರ್ಭದಲ್ಲಿ ಹಲವಾರು ಮಂದಿ ತುತ್ತು ಅನ್ನಕ್ಕೂ ಪರದಾಡುವಂತಾಗಿದೆ. ಅಂಥವರಿಗೆ ನಮ್ಮಿಂದಾಗುವ ಸಹಾಯ ಮಾಡೋಣ ಎಂದಿದ್ದಾರೆ. ತಮಗೆ ಇಂಥವರ ಸಹಾಯ ಮಾಡಲು ಸಂತೋಷವಾಗುತ್ತದೆ ಎಂದು ಅವರು ಹೇಳಿದ್ದಾರೆ.

ಅಂದಹಾಗೆ ಸನ್ನಿ ಲಿಯೋನ್‌, ಕಳೆದ ವರ್ಷದ ಲಾಕ್ ಡೌನ್ ಸಂದರ್ಭದಲ್ಲಿ ಅನೇಕ ಮಂದಿ ಕಾರ್ಮಿಕರಿಗೆ ಆಹಾರ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net