ಪ್ರಧಾನಿಜೀ... ಪರೀಕ್ಷೆ ಕ್ಯಾನ್ಸಲ್‌ ಆದ್ರೂ ಅಡ್ಡಿಲ್ಲ, ನೇಹಾಳನ್ನು ಸೀರೆಯಲ್ಲಿ ನೋಡೋ ಆಸೆ ಈಡೇರಿಸಿ ಪ್ಲೀಸ್‌. ಪ್ಲೀಸ್‌...

student
ಸಾಂದರ್ಭಿಕ ಚಿತ್ರ
Published on

ನವದೆಹಲಿ: ಕರೊನಾದಿಂದಾಗಿ ಬಹುತೇಕ ಎಲ್ಲಾ ಪರೀಕ್ಷೆಗಳೂ ರದ್ದುಗೊಂಡಿವೆ. ಇದರಿಂದ ವಿದ್ಯಾರ್ಥಿಗಳಿಗಂತೂ ಖುಷಿಯೋ ಖುಷಿ. ಆದರೆ ಕೆಲವು 10 ಮತ್ತು 12ನೇ ತರಗತಿಯ ವಿದ್ಯಾರ್ಥಿಗಳಿಗೆ ಅದರಲ್ಲಿಯೂ ವಿದ್ಯಾರ್ಥಿನಿಯರಿಗೆ ಬಹಳ ದುಃಖವಾಗಿದೆ. ಇದಕ್ಕೆ ಕಾರಣ ಪರೀಕ್ಷೆ ಕ್ಯಾನ್ಸಲ್‌ ಆಗಿದೆ ಅಥವಾ ಕ್ಯಾನ್ಸಲ್‌ ಮಾಡುವ ನಿರ್ಧಾರ ತೆಗೆದುಕೊಳ್ಳಬಹುದು ಎಂಬ ಕಾರಣಕ್ಕೆ ಅಲ್ಲ. ಬದಲಿಗೆ ಶಾಲೆ- ಕಾಲೇಜುಗಳಿಂದ ಅಂತಿಮವಾಗಿ ಸಿಗುವ ಫೇರ್‌ವೆಲ್‌ ಫಂಕ್ಷನ್‌ ಮಿಸ್‌ ಆಗಿ ಹೋಯಿತಲ್ಲ ಎಂಬ ದುಃಖ.

ಫೇರ್‌ವೆಲ್‌ನಲ್ಲಿ ಚೆಂದ ಚೆಂದದ ಸೀರೆ ಉಡುತ್ತಾ, ಸುಂದರವಾಗಿ ಡ್ರೆಸ್‌ ಮಾಡಿಕೊಂಡು ಶಾಲೆ-ಕಾಲೇಜಿಗೆ ಹೋಗುವುದು ಎಂದರೆ ಬಾಲಕಿಯರಿಗಂತೂ ಸಕತ್‌ ಖುಷಿ. ಅದಕ್ಕಾಗಿಯೇ ಈ ಕಾರ್ಯಕ್ರಮ ಮಿಸ್‌ ಆಗಿದೆ ಎಂಬ ಬೇಸರವಿದೆ. ಇದು ವಿದ್ಯಾರ್ಥಿನಿಯರ ಬೇಸರವಾದರೆ, ತಮ್ಮ ಇಷ್ಟದ ಹುಡುಗಿಯನ್ನು ಸೀರೆಯಲ್ಲಿ ನೋಡಬೇಕೆಂಬ ಹಂಬಲ ವಿದ್ಯಾರ್ಥಿನಿಯರಿಗೆ. ಅದು ಮಿಸ್‌ ಆಗಿ ಹೋಗಿದೆ ಎಂಬ ಬೇಸರ ಕೆಲವರಿಗೆ.

ಆದ್ದರಿಂದ ಇದೇ ರೀತಿ ಬೇಸರ ಪಟ್ಟುಕೊಂಡಿರುವ ವಿದ್ಯಾರ್ಥಿಯೊಬ್ಬ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾನೆ. ದೇಶದಲ್ಲಿ ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‍ಇ) 12ನೇ ತರಗತಿ ಪರೀಕ್ಷೆಗಳನ್ನು ಕೇಂದ್ರ ಸರ್ಕಾರ ರದ್ದು ಮಾಡಿದೆ. ಈ ಕುರಿತು ಪ್ರಧಾನಿ ವಿಷಯವನ್ನು ತಿಳಿಸುತ್ತಿದ್ದಂತೆ, 12ನೇ ತರಗತಿ ವಿದ್ಯಾರ್ಥಿಯೊಬ್ಬ ಪರೀಕ್ಷೆ ಕ್ಯಾನ್ಸಲ್‌ ಆದ್ರೂ ಪರವಾಗಿಲ್ಲ. ತನ್ನ ಕ್ಲಾಸ್‌ಮೇಟ್‌ ನೇಹಾಳನ್ನು ಸೀರೆಯಲ್ಲಿ ನೋಡಬೇಕು ಎಂಬ ಆಸೆಯಿದೆ. ಅದಕ್ಕೆ ಫೇರ್‌ವೆಲ್‌ಗೆ ಅವಕಾಶ ಕೊಡಿ ಎಂದು ಮನವಿ ಮಾಡಿಕೊಂಡಿದ್ದಾನೆ!

ಕುಕಿ ಅಗರ್‌ವಾಲ್‌ ಎಂಬ ವಿದ್ಯಾರ್ಥಿಯ ಟ್ವಿಟರ್‌ ಪತ್ರ ಸಾಮಾಜಿಕ ಜಾಲತಾಣದಲ್ಲಿ ಸಕತ್‌ ವೈರಲ್‌ ಆಗಿದ್ದು, ನೋಡಿದರನ್ನು ನಗೆಗಡಲಿನಲ್ಲಿ ತೇಲಿಸುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net