ಕೆಲವೇ ಹೊತ್ತಲ್ಲಿ ಸಿಬಿಎಸ್​ಇ 10ನೇ ತರಗತಿ ರಿಸಲ್ಟ್​: ಪರೀಕ್ಷೆ ಇಲ್ಲದೇ ಗಳಿಸಿರೋ ಅಂಕವೆಷ್ಟು? ಇಲ್ಲಿದೆ ಡಿಟೇಲ್ಸ್​

CBSE
Published on

ಬೆಂಗಳೂರು: ಕರೊನಾ ಹಿನ್ನೆಲೆಯಲ್ಲಿ ಈ ವರ್ಷದ ಸಿಬಿಎಸ್​ಇ 10ನೇ ತರಗತಿಯ ಪರೀಕ್ಷೆಯನ್ನು ರದ್ದು ಮಾಡಲಾಗಿತ್ತು. ಮೇ 4ರಿಂದ ಜೂನ್​ 7ರವರೆಗೆ ಪರೀಕ್ಷೆ ನಡೆಯಬೇಕಿತ್ತು. ಆದರೆ ಅದನ್ನು ರದ್ದು ಮಾಡಿರುವ ಹಿನ್ನೆಲೆಯಲ್ಲಿ ಆಂತರಿಕ ಮೌಲ್ಯಮಾಪನದ ಆಧಾರದ ಮೇಲೆ ವಿದ್ಯಾರ್ಥಿಗಳಿಗೆ ಅಂಕಗಗಳನ್ನು ನೀಡಲಾಗುತ್ತಿದೆ.

ಮಧ್ಯಾಹ್ನ 12 ಗಂಟೆಗೆ ಫಲಿತಾಂಶ ಹೊರಬೀಳಲಿದೆ. ಫಲಿತಾಂಶಕ್ಕಾಗಿ http://cbseresults.nic.in ಅಥವಾ http://cbse.nic.in ಗೆ ಭೇಟಿ ನೀಡಿ ನಿಮ್ಮ ಅಂಕಗಳನ್ನು ಪರಿಶೀಲಿಸಬಹುದು.

ಈ ಲಿಂಕ್​ ಕ್ಲಿಕ್​ ಮಾಡಿದ ನಂತರ, ರೋಲ್ ಸಂಖ್ಯೆ ಮತ್ತು ಹುಟ್ಟಿದ ದಿನಾಂಕವನ್ನು ನಮೂದಿಸಿದರೆ ಫಲಿತಾಂಶ ಕಾಣಿಸುತ್ತದೆ. ಇದನ್ನು ಡೌನ್‌ಲೋಡ್ ಮಾಡಿ ಮತ್ತು ಉಲ್ಲೇಖಕ್ಕಾಗಿ ಪ್ರಿಂಟ್ ತೆಗೆದುಕೊಳ್ಳಿ.

ವಿದ್ಯಾರ್ಥಿಗಳು ಮೊಬೈಲ್ ಮತ್ತು ಇಮೇಲ್ ಐಡಿಗಳಲ್ಲಿ ಎಸ್‌ಎಂಎಸ್ ಮೂಲಕವೂ ಫಲಿತಾಂಶವನ್ನು ಪಡೆದುಕೊಳ್ಳಲು ಸಿಬಿಎಸ್​ಇ ಅನುವು ಮಾಡಿಕೊಟ್ಟಿದೆ.

SMS ಮೂಲಕ ಹೇಗೆ ಪರಿಶೀಲಿಸುವುದು : cbse10<space>roll number<space>date of birth<space>school number<space>centre number and send it to 7738299899.

ದೂರವಾಣಿ ಮೂಲಕ: ದೆಹಲಿಗೆ: 24300699 ಇತರ ಭಾಗಗಳು: 011-24300699

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net