

ಅಬುದಾಬಿ: ಗಂಟೆಗೆ ಸುಮಾರು 70 ಕಿ.ಮೀ ವೇಗದಲ್ಲಿ ಓಡುವ, ವಿಶ್ವದ ಅತ್ಯಂತ ವೇಗವಾಗಿ ಓಡುವ ಪಕ್ಷಿ ಎಂದು ಹೆಸರಾಗಿರುವುದ ಆಸ್ಟ್ರಿಚ್. ಇದಕ್ಕೆ ಉಷ್ಟ್ರಪಕ್ಷಿ ಎಂದೂ ಕರೆಯಲಾಗುತ್ತದೆ.
ಈ ಪಕ್ಷಿಯ ಜತೆ ಸೌದಿ ರಾಜಕುಮಾರ ಶೇಖ್ ಹಮ್ದನ್ ಬಿನ್ ಮುಹಮ್ಮದ ರಶೀದ್ ಅಲ್ ಮುಕ್ತಮ್ ಸೈಕಲ್ ರೇಸ್ ಮಾಡಿದ್ದಾರೆ. ನೀ ಮುಂದೋ... ನಾ ಮುಂದೋ ಎಂದು ಕೇಳುವಂತೆ ಸೈಕಲ್ ರೇಸ್ ನಡೆದಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
ಸಾಮಾಜಿಕ ಜಾಲತಾಣದಲ್ಲಿ ಸದಾ ಬಿಜಿಯಾಗಿರುವ ರಾಜಕುಮಾರ, ತಮ್ಮ ಈ ರೇಸ್ ಅನ್ನು ಇನ್‌ಸ್ಟಗ್ರಾಮ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಅತ್ತ ಇತ್ತ ಆಸ್ಟ್ರೀಚ್‌ಗಳು ಓಡಾಡುತಲಿದ್ದು, ರಾಜಕುಮಾರ ನಡುವೆ ಸೈಕಲ್ ಸವಾರಿ ಮಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.
ಸೈಕಲ್‌ಗಿಂತಲೂ ಪಕ್ಷಿಯೇ ಹಲವು ಸಂದರ್ಭಗಳಲ್ಲಿ ಮುಂದೆ ಇದೆ. ಆದರೆ ರಾಜಕುಮಾರ ಜಿದ್ದಿಗೆ ಬಿದ್ದವರಂತೆ ಅದನ್ನು ಹಿಂದಿಕ್ಕುವ ಪ್ರಯತ್ನ ಮಾಡಿದ್ದಾರೆ. ಈ ರೇಸ್‌ಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ನೀವೂ ನೋಡಿ ಈ ವಿಡಿಯೋ. ಕೆಳಗಿನ ಲಿಂಕ್ ಕ್ಲಿಕ್ಕಿಸಿ...