ಒಹೋ ಹವಾಯಿ ಚಪ್ಪಲ್ಲಾ ಎಂದು ಕಾಲೆಳೆದವನಿಗೆ ಸ್ಮೃತಿ ಇರಾನಿ ಏನಂದ್ರು ಗೊತ್ತಾ?

smruthi irani
Published on

ನವದೆಹಲಿ: ಕೇಂದ್ರ ಜವಳಿ ಖಾತೆ ಸಚಿವೆ ಸ್ಮೃತಿ ಇರಾನಿ ಸಾಮಾಜಿಕ ಜಾಲತಾಣದಲ್ಲಿ ಸದಾ ಆ್ಯಕ್ಟೀವ್​ ಆಗಿರುತ್ತಾರೆ. ದಿನವೂ ಒಂದೊಂದು ಫೋಟೋ ಹಾಕುವ ಮೂಲಕ ನೆಟ್ಟಿಗರ ಪ್ರೀತಿಯ ಸಚಿವೆ ಕೂಡ ಆಗಿದ್ದಾರೆ. ಇದಕ್ಕೆ ಕಾರಣ, ಅವರು ಮಾಡುವ ತಮಾಷೆ ಹಾಗೂ ಕಮೆಂಟಿಗರಿಗೂ ತಮಾಷೆ ರೂಪದಲ್ಲಿ ಉತ್ತರ ಕೊಡುವುದು ಅಸಂಖ್ಯ ನೆಟ್ಟಿಗರ ಮನಸ್ಸನ್ನು ಗೆದ್ದಿದೆ.

ಅದೇ ರೀತಿ ಇಂದು ಅವರು ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಾಕಿರುವ ಫೋಟೋ ಕೂಡ ಭಾರಿ ಸುದ್ದಿ ಮಾಡುತ್ತಿದೆ. ಇದಕ್ಕೆ ಕಾರಣ, ಅವರು ಲ್ಯಾಪ್​ಟಾಪ್​ನಲ್ಲಿ ಕೆಲಸ ಮಾಡುತ್ತಿರುವ ಫೋಟೋ ಒಂದನ್ನು ಅಪ್​ಲೋಡ್​ ಮಾಡಿದ್ದಾರೆ. ಗಾರ್ಡನ್ ಏರಿಯಾದಲ್ಲಿ ಟೇಬಲ್ ಮೇಲೆ ಲ್ಯಾಪ್‍ಟಾಪ್ ಇಟ್ಟುಕೊಂಡು ಕೆಲಸ ಮಾಡುತ್ತಿರುವ ಫೋಟೋ ಇನ್‍ಸ್ಟಾದಲ್ಲಿ ಶೇರ್ ಮಾಡಿಕೊಂಡು ‘ಪ್ಯಾನ್‍ಡಮಿಕ್ ಮಾರ್ನಿಂಗ್’ ಅಂತ ಬರೆದುಕೊಂಡಿದ್ದಾರೆ.

ಅದಕ್ಕೆ ಅನೇಕ ಮಂದಿ ಅನೇಕ ರೀತಿಯಲ್ಲಿ ಪ್ರಶ್ನಿಸಿದ್ದಾರೆ. ಅನೇಕ ಮಂದಿ ಥಹರೇವಾರಿ ಕಮೆಂಟ್​ ಮಾಡಿದ್ದು ತುಂಬಾ ಮಂದಿ ಸಚಿವೆಯ ಸರಳತನಕ್ಕೆ ಮೆಚ್ಚಿಕೊಂಡು ಕಮೆಂಟ್​ ಮಾಡಿದ್ದಾರೆ.

ಒಬ್ಬಾತ ಮಾತ್ರ ಸಚಿವೆಯ ಕಾಲೆಳೆದು ಒಹೋ ಹವಾಯಿ ಚಪ್ಪಲಿ ಎಂದು ಕಮೆಂಟ್​ ಮಾಡಿದ್ದಾನೆ. ಅದಕ್ಕೆ ಅಷ್ಟೇ ತಮಾಷೆಯಾಗಿ ಪ್ರತಿಕ್ರಿಯೆ ನೀಡಿರುವ ಸಚಿವೆ ಸ್ಮೃತಿ, ಹೌದು ಬ್ರದರ್ ಇದು ಹವಾಯಿ ಚಪ್ಪಲಿಯೇ. ಇದರ ಬೆಲೆ ಕೇಳುವುದಾದರೆ 200 ರೂಪಾಯಿ. ಹಾಗಂತೆ ಇದು ಯಾವ ಬ್ರ್ಯಾಂಡ್ ಎಂದು ಮಾತ್ರ ಕೇಳಬೇಡಿ. ಏಕೆಂದರೆ ಇದು ಲೋಕಲ್ ಇದೆ ಚಟಾಕಿ ಹಾರಿಸಿದ್ದಾರೆ.

ಈ ಪ್ರತಿಕ್ರಿಯೆಯೂ ಅನೇಕ ಮಂದಿ ಮೆಚ್ಚಿಕೊಂಡಿದ್ದು ವೋಕಲ್ ಫಾರ್ ಲೋಕಲ್ ಎಂದು ಕಮೆಂಟ್ ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net