VIDEO: ಪ್ರಧಾನಿ ಹುಟ್ಟುಹಬ್ಬಕ್ಕೆ ಶಿವಮೊಗ್ಗದ ಯುವಕರಿಂದ ಹೀಗೊಂದು ಶುಭಾಶಯ: ಶ್ಲಾಘನೆಗಳ ಮಹಾಪೂರ

modi
Published on

ಶಿವಮೊಗ್ಗ: ಎರಡು ದಿನಗಳ ಹಿಂದೆ ಅಂದರೆ ಸೆ.17ರಂದು ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬವನ್ನು ಇಡೀ ದೇಶಾದ್ಯಂತ ಅವರ ಅಭಿಮಾನಿಗಳು ಸಡಗರದಿಂದ ಆಚರಿಸಿದರು. ಅವರ ಕೋಟ್ಯಂತರ ಅಭಿಮಾನಿಗಳು ತಮ್ಮದೇ ಆದ ರೀತಿಯಲ್ಲಿ ತಮ್ಮ ನೆಚ್ಚಿನ ನಾಯಕನಿಗೆ ಶುಭಾಶಯ ಕೋರಿದರು.

ದೇಶ ಮಾತ್ರವಲ್ಲದೇ ವಿದೇಶದ ಅನೇಕ ಗಣ್ಯರೂ ಪ್ರಧಾನಿ ಮೋದಿ ಅವರಿಗೆ ಶುಭಾಶಯ ಕೋರಿದ್ದಾರೆ. ಇವೆಲ್ಲರಿಗಿಂತಲೂ ಭಿನ್ನವಾದ ಶುಭಾಶಯ ಕೋರಿದವರು ಶಿವಮೊಗ್ಗದ ಯುವಕರು. ಇವರು ಶುಭಾಶಯ ಕೋರಿರುವ ರೀತಿ ಅಪಾರ ಮೆಚ್ಚುಗೆಗೆ ಪಾತ್ರವಾಗಿದ್ದು, ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

ಈ ಯುವಕರು ತಮ್ಮ ನೆಚ್ಚಿನ ನಾಯಕನಿಗೆ ಭೂಮಿಯ ಮೇಲಿನಿಂದ ಅಲ್ಲದೇ ಅಡಕೆ ಮರವನ್ನು ಏರುವ ಮೂಲಕ ಅಲ್ಲಿಂದ ಶುಭಾಶಯ ಕೋರಿದ್ದಾರೆ. ಅಡಕೆ ಮರದ ಮೇಲೆ ಹತ್ತಿ, ಫ್ಲೆಕ್ಸ್ ಹಿಡಿದು ವಿಶಿಷ್ಟ ರೀತಿಯಲ್ಲಿ ಪ್ರಧಾನಿಗೆ ಶುಭ ಹಾರೈಸಿದ್ದಾರೆ.

ಶಿವಮೊಗ್ಗದ ಇಂಜಿನಿಯರಿಂಗ್ ಸಲ್ಯೂಶನ್ಸ್ ವತಿಯಿಂದ ಈ ಇಬ್ಬರು ಯುವಕರು ಬ್ಯಾನರ್​ ಹಿಡಿದು ಅಡಕೆ ಮರ ಏರಿದ್ದಾರೆ. ಮೊದಲಿಗೆ ಯಂತ್ರವೊಂದನ್ನು ಬಳಸಿ ಏಕಕಾಲಕ್ಕೆ ಇಬ್ಬರೂ ಮರ ಏರಿದ್ದಾರೆ. ಬಳಿಕ ಪ್ರಧಾನಿ ನರೇಂದ್ರ ಮೋದಿಯವರಿಗೆ ಹುಟ್ಟುಹಬ್ಬದ ಶುಭಾಶಯಗಳು ಎಂಬ ಬ್ಯಾನರ್ ಹಿಡಿದು, ಪ್ರದರ್ಶಿಸಿದ್ದಾರೆ. ಅದನ್ನು ಮರದ ಮೇಲಿಂದ ಇಳಿಯ ಬಿಟ್ಟಿದ್ದು, ಇದರ ವಿಡಿಯೋ ವೈರಲ್​ ಆಗಿದೆ. (ಏಜೆನ್ಸೀಸ್)

ನೀವೂ ನೋಡಿ ಈ ಅಪರೂಪದ ವಿಡಿಯೋ:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net