ಶಿಗ್ಗಾವಿಯಲ್ಲಿ ನಾದಿನಿಯಿಂದ ಅತ್ತಿಗೆಯ ಮರ್ಡರ್‌! ‘ಪೊಲೀಸರೇ ಬಾಗಿಲು ಮುರಿದು ಒಳಗೆ ಬನ್ನಿ’ ಎಂದು ಫಲಕ!

police
ಸಾಂದರ್ಭಿಕ ಚಿತ್ರ
Published on

ಹಾವೇರಿ: ಅತ್ತಿಗೆ ಮತ್ತು ನಾದಿನಿಯರ ಕಚ್ಚಾಟ ಇಬ್ಬರ ಸಾವಿಗೆ ಕಾರಣವಾದ ಭಯಾನಕ ಘಟನೆ ಹಾವೇರಿ ಜಿಲ್ಲೆಯ ಶಿಗ್ಗಾವಿಯ ರಾಚನಕಟ್ಟಿಯಲ್ಲಿ ನಡೆದಿದೆ.

ಅತ್ತಿಗೆಯನ್ನು ಕೊಲೆ ಮಾಡಿದ ನಾದಿನಿ, ಕೊನೆಗೆ ತಾನೂ ನೇಣಿಗೆ ಶರಣಾಗಿದ್ದಾಳೆ. ಮಂಜುಳಾ ಪಾಟೀಲ್ (48) ಅತ್ತಿಗೆ ಜಯಮ್ಮ (50) ಅವರನ್ನು ಆಯುಧದಿಂದ ಹೊಡೆದು ಕೊಲೆ ಮಾಡಿದ್ದು, ಕೊನೆಗೆ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ನಾಲ್ಕು ಜನ ಪೋಲಿಸರು ಬಾಗಿಲು ಮುರಿದು ಒಳಗೆ ಬನ್ನಿ ಎಂದು ಮನೆ ಎದುರು ಬೋರ್ಡ್‌ ನೇತು ಹಾಕಿ, ಮನೆಯೊಳಕ್ಕೆ ಬರುವಂತೆ ಪೋಲಿಸರಿಗೆ ಸಂದೇಶ ನೀಡಲಾಗಿದೆ. ಇದನ್ನು ನೋಡಿದ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದಾರೆ.

ಪೊಲೀಸರು ಬಾಗಿಲು ಒಡೆದು ನೋಡಿದಾಗ ನಾದಿನಿ ಹಾಗೂ ಅತ್ತಿಗೆ ಹೆಣವಾಗಿದ್ದರು. ರಾತ್ರಿ ವೇಳೆ ಇಬ್ಬರ ನಡುವೆ ಜಗಳ ಆಗಿರುವ ಶಂಕೆ ವ್ಯಕ್ತವಾಗಿದ್ದು, ತನಿಖೆ ನಡೆಯುತ್ತಿದೆ. ಈ ವೇಳೆ ಡೆತ್ ನೋಟ್ ಕೂಡ ಪೋಲಿಸರಿಗೆ ಪತ್ತೆಯಾಗಿದ್ದು, ಅದರಲ್ಲಿ ಏನಿದೆ ಎನ್ನುವುದು ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ. ಶಿಗ್ಗಾವಿಯ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net