

ದುಬೈ: ಡ್ರಗ್ಸ್ ಕೇಸ್‌ನಲ್ಲಿ ಮಗ ಆರ್ಯನ್ ಖಾನ್ ಸಿಲುಕಿದ ಮೇಲೆ ಅನೇಕ ರೀತಿಯ ಯಾತನೆ ಅನುಭವಿಸಿರುವ ನಟ ಶಾರುಖ್ ಖಾನ್‌ಗೆ ಈ ಬಾರಿಯ ಹುಟ್ಟುಹಬ್ಬದಲ್ಲಿ (ನವೆಂಬರ್ 2) ಅಷ್ಟೇನೂ ಆಸಕ್ತಿ ಇದ್ದಂತಿಲ್ಲ. ಪ್ರತಿವರ್ಷವೂ ಭರ್ಜರಿಯಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದ ಈ ನಟ ಈ ಬಾರಿ ಅಷ್ಟೇನೂ ಉತ್ಸಾಹ ತೋರಲಿಲ್ಲ, ಅಭಿಮಾನಿಗಳ ಸಂಖ್ಯೆಯಲ್ಲಿ ಕೂಡ ಭಾರಿ ಇಳಿತ ಕಂಡ ಹಿನ್ನೆಲೆಯಲ್ಲಿ 56ನೇ ಹುಟ್ಟುಹಬ್ಬ ಶಾರುಖ್ ಪಾಲಿಗೆ ಸ್ವಲ್ಪ ನಿರಾಸೆಯನ್ನೇ ಮೂಡಿಸಿತ್ತು.
ಆದರೆ ಶಾರುಖ್ ಖಾನ್‌ಗೆ ದುಬೈನಲ್ಲಿ ಭಾರಿ ಅಭಿಮಾನಿಗಳಿದ್ದು, ಅವರ ಅಭಿಮಾನದಲ್ಲಿ ಕಿಂಚಿತ್ ಕೂಡ ಕಡಿಮೆಯಾಗಿಲ್ಲ. ಆದ್ದರಿಂದ ಶಾರುಖ್ ಅವರ ಹುಟ್ಟುಹಬ್ಬವನ್ನು ಭರ್ಜರಿಯಿಂದ ದುಬೈ ಆಚರಿಸಿದೆ. ವಿಶ್ವದ ಅತ್ಯಂತ ಎತ್ತರದ ಕಟ್ಟಡ ಬುರ್ಜ್ ಖಲೀಫಾ ಮೇಲೆ ಮಂಗಳವಾರ ರಾತ್ರಿ ವರ್ಣರಂಜಿತ ದೀಪಾಲಂಕಾರದೊಂದಿಗೆ ಖಾನ್‌ಗೆ ಶುಭಾಶಯ ಹೇಳಲಾಗಿದೆ.
ಶಾರುಖ್ ಅವರ ಸಿನಿಮಾದ ಹಾಡು ಹಿನ್ನೆಲೆಯಲ್ಲಿ ಹಾಕಿ, ಅವರ ಫೋಟೋ ಜತೆ ‘ಹ್ಯಾಪ್ಪಿ ಬರ್ತ್‌ಡೇ ಶಾರುಖ್ ಖಾನ್.. ವಿ ಲವ್ ಯು” ಎಂಬ ಸಾಲುಗಳು ಬುರ್ಜ್ ಖಲೀಫಾ ಕಟ್ಟಡ ಮೇಲೆ ವರ್ಣ ರಂಜಿತವಾಗಿ ರಾರಾಜಿಸಿದವು.
ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಭಾರತದಲ್ಲಿ ಅಲ್ಲದಿದ್ದರೂ ಅರಬ್ ದೇಶದಲ್ಲಿ ಖಾನ್ ಅವರು ಇನ್ನೂ ಗೌರವ ಉಳಿಸಿಕೊಂಡಿರುದ್ದಾರೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಅಂದಹಾಗೆ ಕಳೆದ ವರ್ಷವೂ ಇದೇ ರೀತಿ ದುಬೈನಲ್ಲಿ ಇವರ ಹುಟ್ಟುಹಬ್ಬಕ್ಕೆ ವಿಷ್ ಮಾಡಲಾಗಿತ್ತು.
ಇಲ್ಲಿದೆ ನೋಡಿ ವಿಡಿಯೋ: