ಸೀತೆಯ ಕುರಿತು ಅಶ್ಲೀಲವಾಗಿ ಮಾತನಾಡಿ ಗಲಭೆ ಸೃಷ್ಟಿಸಲು ಹೋದಾಕೆ ಕೊನೆಗೂ ಸಿಕ್ಕಿಬಿದ್ದಳು

heerkhan
Published on

ಪ್ರಯಾಗ್‌ರಾಜ್‌ (ಉತ್ತರಪ್ರದೇಶ): ಹಿಂದೂ ದೇವತೆಯ ಕುರಿತು ಕೆಟ್ಟ ಭಾಷೆಗಳನ್ನು ಪ್ರಯೋಗಿಸಿ ಮಾಡಿರುವ ಪೋಸ್ಟ್‌ ಒಂದಕ್ಕೆ ಪೈಗಂಬರ್‌ ವಿರುದ್ಧ ಕಮೆಂಟ್‌ ಹಾಕಿದ್ದನ್ನೇ ನೆಪ ಮಾಡಿಕೊಂಡು ಬೆಂಗಳೂರಿನ ಪುಂಡರು ದಾಳಿ ನಡೆಸಿರುವ ಘಟನೆಯ ಕಿಚ್ಚು ಇನ್ನೂ ಆರಿಲ್ಲ. ಇದೇ ಹೊತ್ತಿನಲ್ಲಿ ಅತ್ತ ಉತ್ತರ ಪ್ರದೇಶದಲ್ಲಿ ಹೀರ್ ಖಾನ್ ಎಂಬಾಕೆ ಸೀತಾಮಾತೆಯ ಕುರಿತು ಕೆಟ್ಟಿದ್ದಾಗಿ ವಿಡಿಯೋ ಮೂಲಕ ಹೇಳಿಕೆ ನೀಡಿ ಭಾರಿ ಕೋಲಾಹಲ ಸೃಷ್ಟಿಸಿರುವ ಘಟನೆ ನಡೆದಿದೆ.

ಈಕೆ ಮಾಡಿರುವ ಪ್ರಚೋದನಾತ್ಮಕ ಹೇಳಿಕೆಯಿಂದ ಬೆಂಗಳೂರಿನಂತೆ ಅಲ್ಲಿಯೂ ಗಲಭೆ ಸೃಷ್ಟಿಯಾಗದಿರುವುದೇ ಪುಣ್ಯ ಎನ್ನಲಾಗಿದೆ.

ಸೀತಾದೇವಿಯ ಬಗ್ಗೆ ಅತ್ಯಂತ ಅಶ್ಲೀಲವಾಗಿ ಪದಪ್ರಯೋಗ ಮಾಡಿ ವಿಡಿಯೋ ಪೋಸ್ಟ್‌ ಮಾಡಿದ್ದಾಕೆ ಎಲ್ಲಿಯೇ ಅಡಗಿದ್ದರೂ ಆಕೆಯನ್ನು ಬಂಧಿಸುವಂತೆ ಭಾರಿ ಅಭಿಯಾನ ನಡೆದಿತ್ತು. ಕೊನೆಗೂ ಹೀರ್‌ ಖಾನ್‌ನನ್ನು ಹುಡುಕಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಇಸ್ಲಾಮಿಕ್ ಮೂಲಭೂತವಾದಿ ಮಹಿಳೆ ಈಕೆ ಎನ್ನಲಾಗಿದೆ. ArrestHeerKhan ಹ್ಯಾಷ್‌ಟ್ಯಾಗ್‌ನೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಅಭಿಯಾನ ಶುರುವಾದ ಹಿನ್ನೆಲೆಯಲ್ಲಿ, ಪ್ರಯಾಗ್ರಾಜ್ ಪೊಲೀಸರು ಮಹಿಳೆಯನ್ನು ಬಂಧಿಸಿದ್ದು ಎಫ್‌ಐಆರ್‌ ದಾಖಲು ಮಾಡಿದ್ದಾರೆ. ತನ್ನನ್ನು ಪೊಲೀಸರು ಬಂಧಿಸುತ್ತಾರೆ ಎಂದು ತಿಳಿಯುತ್ತಲೇ ತಲೆಮರೆಸಿಕೊಂಡಿದ್ದಳು ಈಕೆ.

ಇಸ್ಲಾಮಿಕ್ ಮೂಲಭೂತವಾದಿ ಮಹಿಳೆ ಹೀರ್ ಖಾನ್ ಯುಟ್ಯೂಬ್ ಚಾನೆಲ್ 'ಬ್ಲ್ಯಾಕ್ ಡೇ 5 ಆಗಸ್ಟ್' ನಲ್ಲಿ ಹಿಂದೂ ದೇವತೆಗಳಿಗೆ ಅಪವಿತ್ರ ಭಾಷೆಯನ್ನು ಬಳಸುವ ವೀಡಿಯೊವನ್ನು ಹಂಚಿಕೊಂಡಿದ್ದಾಳೆ. ರಾಮ ಮಂದಿರಕ್ಕೆ ಭೂಮಿಪೂಜೆ ಮಾಡಿರುವ ದಿನವಾಗಿದೆ ಇದು. ಇದನ್ನೇ ಮೂಲವಾಗಿಟ್ಟುಕೊಂಡು ಸೀತೆಯ ಬಗ್ಗೆ ಬಹಳ ಮುಜುಗರದ ಪದವನ್ನು ಬಳಸಿರುವ ಈಕೆ, ಅಯೋಧ್ಯೆಯ ಕುರಿತಾಗಿಯೂ ತೀರಾ ಕೆಟ್ಟ ಪದ ಪ್ರಯೋಗ ಮಾಡಿದ್ದಾಳೆ.

"ಅಲ್ಲಾಹ್ ಹೊರತು ಬೇರೆ ಯಾರಿಗೂ ನಾನು ಹೆದರುವುದಿಲ್ಲ’ ಎನ್ನುತ್ತಲೇ ಹೀರ್‌ ಖಾನ್‌ ಹಿಂದೂ ದೇವತೆಗಳ ಬಗ್ಗೆ ಕೆಟ್ಟದ್ದಾಗಿ ಮಾತನಾಡಿದ್ದಾಳೆ. ಇಸ್ಲಾಂ ಧರ್ಮದ ವಿರುದ್ಧ ಯಾರಾದರೂ ಏನಾದರೂ ಹೇಳಿದರೆ ಮುಸ್ಲಿಮರು ಮೌನವಾಗಿ ಕುಳಿತುಕೊಳ್ಳುವುದಿಲ್ಲ ಎಂದೂ ಹೇಳಿಕೊಂಡಿರುವ ಈಕೆ, ಹಿಂದೂಗಳ ಬಗ್ಗೆ ಕೆಟ್ಟದ್ದಾಗಿ ಮಾತನಾಡಿದ್ದಾಳೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net