ಇದೇ ತಿಂಗಳು ನನ್ನ ಮದುವೆ- ಎಲ್ಲರೂ ಬನ್ನಿ: ಸಂಜನಾ ಆಹ್ವಾನ; ಆದರಿದು ಬುದ್ಧಿವಂತರಿಗೆ ಮಾತ್ರ!

sanjana3
Published on

ಬೆಂಗಳೂರು: ಇತ್ತೀಚೆಗೆ ಭಾರಿ ಸುದ್ದಿಯಲ್ಲಿದ್ದ ನಟಿಯರ ಪೈಕಿ ಸಂಜನಾ ಗಲ್ರಾಣಿ ಕೂಡ ಒಬ್ಬರು. ಡ್ರಗ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲುವಾಸವಾಗಿದ್ದು, ನಂತರ ಬಿಡುಗಡೆಹೊಂದಿರುವ ಈ ನಟಿಯ ಸುದ್ದಿ ಸದ್ಯ ತಣ್ಣಗಾಗಿತ್ತು.

ದಿನನಿತ್ಯವೂ ಬಿಸಿಬಿಸಿ ಚರ್ಚೆಯಲ್ಲಿ ಇರುತ್ತಿದ್ದ ಸಂಜನಾ, ತಮ್ಮ ಸುದ್ದಿ ತಣ್ಣಗಾಗುತ್ತಿದ್ದಂತೆಯೇ ಈಗ ಮತ್ತೊಮ್ಮೆ ಸುದ್ದಿ ಮಾಡಿದ್ದಾರೆ. ಅದು ಅವರ ಮದುವೆಯ ವಿಷಯ!

ಹಾಗೆಂದು ಇವರ ಮದುವೆಯ ವಿಷಯ ಇದಾಗಲೇ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆಯೆನ್ನಿ. ಈಕ ಮುಸ್ಲಿಂ ಯುವಕನನ್ನು ಮದುವೆಯಾಗಿದ್ದು, ಆ ಬಗ್ಗೆ ಇದಾಗಲೇ ಸಾಕಷ್ಟು ಫೋಟೋಗಳು ವೈರಲ್‌ ಆಗಿವೆ. ಆದರೆ ಇದುವರೆಗೆ ಅದರ ಬಗ್ಗೆ ತುಟಿಕ್‌ ಪಿಟಿಕ್‌ ಅನ್ನದ ಈ ನಟಿ, ಇದೀಗ ತಾವು ಮದುವೆಯಾಗುತ್ತಿರುವುದಾಗಿ ಆಹ್ವಾನ ನೀಡಿದ್ದಾರೆ.

ಈ ದಿನಾಂಕದಂದು ತಮ್ಮ ಮದುವೆಯಿದ್ದು, ಅಂದು ಎಲ್ಲರೂ ತಪ್ಪದೇ ಬರಬೇಕು ಎಂದು ಫೋಟೋ ಹಾಕಿದ್ದಾರೆ. ಇದು ಅವರೇ ಹಾಕಿದ್ದೋ ಅಥವಾ ಅವರ ಹೆಸರಿನಲ್ಲಿ ಬೇರೆ ಯಾರೋ ಪ್ರಚಾರ ಮಾಡುತ್ತಿರುವುದೋ ತಿಳಿದಿಲ್ಲ. ಒಟ್ಟಿನಲ್ಲಿ ಈ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗುತ್ತಿದೆ.

ಇದನ್ನು ನೋಡಿದವರು ಮತ್ತೊಂದು ಮದುವೆಯಾಗುತ್ತಿದ್ದಾರಾ? ಮೊದಲ ಗಂಡನ ಗತಿಯೇನು? ಬಹುಶಃ ಈಗ ಹಿಂದೂ ಹುಡುಗನನ್ನು ಆಗುತ್ತಿರಬಹುದು ಹೀಗೆ ತಮಗೆ ಮನಸ್ಸಿಗೆ ತೋಚಿದಂತೆ ಕಮೆಂಟ್‌ ಮಾಡಿದ್ದಾರೆ.

ಆದರೆ 'ಬುದ್ಧಿವಂತರು' ಮಾತ್ರ ಈ ಆಹ್ವಾನ ನೋಡಿ ನಕ್ಕಿದ್ದಾರೆ. ಅದಕ್ಕೆ ಕಾರಣ, ಇದನ್ನು ನಿಜವಾಗಿಯೂ ಸಂಜನಾ ಬರೆದದ್ದು ಹೌದೋ, ಅಲ್ಲವೋ ಎಂದಲ್ಲ, ಬದಲಿಗೆ ಅಲ್ಲಿರುವ ದಿನಾಂಕ ನೋಡಿ...!

ಏಕೆಂದರೆ ಅದರಲ್ಲಿ ಫೆಬ್ರುವರಿ 30ರದಂದು ಮದುವೆ ಎಂದು ಇದೆ. ಫೆಬ್ರುವರಿ ತಿಂಗಳಿನಲ್ಲಿ ಇರುವುದು 28 ದಿನ ಮಾತ್ರ ಅಲ್ಲವೆ? ಅದಕ್ಕೇ ಹೇಳಿದ್ದು ಇದು ಬುದ್ಧಿವಂತರಿಗೆ ಮಾತ್ರ ಎಂದು. ಈ ಆಹ್ವಾನ ಪತ್ರಿಕೆ ನೋಡಿದ ತಕ್ಷಣ ನಿಮಗೆ ಏನು ಅನ್ನಿಸಿತು?

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net