

ವಿಜಯನಗರ: ಉತ್ತರ ಕರ್ನಾಟಕದ ಹಿರಿಯ ವಿರಶೈವ ಲಿಂಗಾಯಿತ ಜಗದ್ಗುರುಗಳು ಡಾ. ಸಂಗನ ಬಸವ ಮಹಾಸ್ವಾಮಿಗಳು ಇಂದು ಬೆಳಗ್ಗೆ ಲಿಂಗೈಕ್ಯರಾಗಿದ್ದಾರೆ. ಇವರು ಹೊಸಪೇಟೆಯ ಕೊಟ್ಟೂರು ಮಠ ಸಂಸ್ಥಾನದ ಜಗದ್ಗುರುಗಳಾಗಿದ್ದರು. ಇವರಿಗೆ 87 ವರ್ಷ ವಯಸ್ಸಾಗಿತ್ತು.
ಹೃದಯ ಕಾಯಿಲೆಯಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೇ ಲಿಂಗೈಕ್ಯರಾಗಿದ್ದಾರೆ. ಶಿಕ್ಷಣ ಸಂಸ್ಥೆಗಳು ಮೂಲಕ ತ್ರೀವಿಧ ದಾಸೋಹಿಯಾಗಿದ್ದ ಶ್ರೀಗಳು, ಹಾಲಕೆರೆ ಶ್ರೀ ಅನ್ನದಾನೇಶ್ವರ ಸಂಸ್ಥಾನ ಮಠ ಹೊಸಪೇಟೆ, ಬಳ್ಳಾರಿಯ ಕೊಟ್ಟೂರು ಸ್ವಾಮಿಮಠ, ಶ್ರೀಮದ ಶಿವಯೋಗಿ ಮಂದಿರದ ಅಧ್ಯಕ್ಷರಾಗಿದ್ದರು. ಬಸವಾದಿ ಶರಣರ ವಚನಗಳನ್ನು ನಾಡಿನಾದ್ಯಂತ ಪಸರಿಸುವ ಕಾಯಕಾದಲ್ಲಿ ನಿರತರಾಗಿದ್ದರು.
ಹೊಸಪೇಟೆ ,ಬಳ್ಳಾರಿ, ಗದಗ ಬಾಗಲಕೋಟೆಯಲ್ಲಿ ಶಿಕ್ಷಣ ಸಂಸ್ಥೆಗಳನ್ನ ಕಟ್ಟಿ ಬಡವರಿಗೆ ಅನ್ನ ಅಕ್ಷರ ದಾಸೋಹ ಮಾಡುತ್ತಿದ್ದರು. ಬಸವ ತತ್ವದ ಮೂಲ ದೀನದಲಿತರ ಕಲ್ಯಾಣಕ್ಕೆ ಶ್ರಮಿಸಿದ್ದ ಶ್ರೀಗಳು ಇವರು.
ಕಾವಿಧಾರಿಯಾಗಿ ಮಠಕ್ಕೆ ಸೀಮಿತವಾಗಿರದೆ ಜನಪರ ವಿಚಾರಧಾರೆಗಳನ್ನು ಹೊಂದಿದ್ದ ಶ್ರೀಗಳ ಅಂತ್ಯಸಂಸ್ಕಾರವನ್ನು ಭಕ್ತರ ಅಪೇಕ್ಷೆಯಂತೆ ಇಳಕಲ್ ಗಡದ ಹಾಲಕೆರೆ ಮಠದಲ್ಲಿ ನಡೆಸಲಾಗುವುದು. ವೀರಶೈವ ಲಿಂಗಾಯಿತ ಧರ್ಮದ ವಿಧಿವಿಧಾನದಂತೆ ಅಂತ್ಯಕ್ರೀಯೆ ನಡೆಯಲಿದೆ. (ದಿಗ್ವಿಜಯ ನ್ಯೂಸ್)