

ರಕ್ಷಣಾ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುವ ಸೈನಿಕ್ ಸ್ಕೂಲ್ ಸೊಸೈಟಿಯ ಒಂದು ಭಾಗವಾಗಿರುವ ಮಣಿಪುರದ ಇಂಪಾಲ್ನಲ್ಲಿರುವ ಸೈನಿಕ್ ಶಾಲೆಯಲ್ಲಿರುವ ಲ್ಯಾಬ್ ಅಸಿಸ್ಟೆಂಟ್ ಹಾಗೂ ಜನರಲ್ ಎಂಪ್ಲಾಯ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಅರ್ಜಿ ಸಲ್ಲಿಸಬಹುದು. ಒಟ್ಟು 16 ಸ್ಥಾನಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಎಸ್ಸಿಗೆ 3 ಸ್ಥಾನ, ಎಸ್ಟಿಗೆ 1, ಇತರ ಹಿಂದುಳಿದ ವರ್ಗಕ್ಕೆ 6, ಸಾಮಾನ್ಯವರ್ಗದ ಆಭ್ಯರ್ಥಿಗೆ 6 ಸ್ಥಾನ ಮೀಸಲಿರಿಸಲಾಗಿದೆ. ಶಾರ್ಟ್ಲಿಸ್ಟ್ ಮಾಡಲಾದ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ/ ಸ್ಕಿಲ್ ಪರೀಕ್ಷೆ ಮತ್ತು ಸಂದರ್ಶನಕ್ಕೆ ಆಹ್ವಾನಿಸಲಾಗುವುದು.
ಒಟ್ಟು ಹುದ್ದೆಗಳು: 16
ಹುದ್ದೆ ವಿವರ
* ಲ್ಯಾಬ್ ಅಸಿಸ್ಟೆಂಟ್ (ಬಯೋಲಜಿ) - 1
ವಿಜ್ಞಾನದಲ್ಲಿ ದ್ವಿತೀಯ ಪಿಯುಸಿ ಅಥವಾ ತತ್ಸಮಾನ ಶಿಕ್ಷಣ ಪಡೆದಿರಬೇಕು. ಇದಕ್ಕಿಂತ ಹೆಚ್ಚಿನ ಶಿಕ್ಷಣ ಪಡೆದವರಿಗೆ ಹಾಗೂ ವೃತ್ತಿ ಅನುಭವ ಇರುವವರಿಗೆ ಆದ್ಯತೆ ನೀಡಲಾಗುವುದು. ಮಾಸಿಕ 25,500-81,100 ರೂ. ವೇತನ ಜತೆ ವಸತಿ ಸೌಲಭ್ಯ, ಎನ್ಪಿಎಸ್, ಎಲ್ಟಿಸಿ, ಗ್ರಾಚುಟಿ, ವೈದ್ಯಕೀಯ ಭತ್ಯೆ, ಪ್ರಯಾಣ ಭತ್ಯೆ, ಸೈನಿಕ್ ಸ್ಕೂಲ್ ಸೊಸೈಟಿಯ ನಿಯಮದನುಸಾರ ಇಬ್ಬರು ಮಕ್ಕಳಿಗೆ ಅನುದಾನಿತ ಶಾಲಾ ಶಿಕ್ಷಣದ ವ್ಯವಸ್ಥೆ ನೀಡಲಾಗುವುದು.
* ಜನರಲ್ ಎಂಪ್ಲಾಯಿ (ರೆಗ್ಯುಲರ್) - 2
* ಜನರಲ್ ಎಂಪ್ಲಾಯಿ (ಕಾಂಟ್ರಾಕ್ಚುವಲ್) - 13
ಎಸ್ಸೆಸ್ಸೆಲ್ಸಿ ಅಥವಾ ತತ್ಸಮಾನ ಶಿಕ್ಷಣ ಅಥವಾ ಹೆಚ್ಚಿನ ಶಿಕ್ಷಣ ಪಡೆದಿರಬೇಕು. ಮಲ್ಟಿ ಸ್ಕಿಲ್ಡ್ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು. ಜನರಲ್ ಎಂಪ್ಲಾಯಿ ರೆಗ್ಯಲರ್ಗೆ ಮಾಸಿಕ 18,000-56,900 ರೂ. ವೇತನ ಇದೆ. ಕಾಂಟ್ರಾಕ್ಚುವಲ್ ಅಭ್ಯರ್ಥಿಗಳಿಗೆ ಮಾಸಿಕ ನಿರ್ಧಿಷ್ಟ 9000 ರೂ. ವೇತನ ನೀಡಲಾಗುವುದು.
ವಯೋಮಿತಿ: 1.7.2021ಕ್ಕೆ ಅನ್ವಯವಾಗುವಂತೆ ಎಲ್ಲ ಹುದ್ದೆಗಳಿಗೂ ಕನಿಷ್ಠ 18 ವರ್ಷ, ಗರಿಷ್ಠ 50 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.
ಅರ್ಜಿ ಶುಲ್ಕ: ಎಲ್ಲ ಅಭ್ಯರ್ಥಿಗಳು ಡಿಡಿ ಮುಖಾಂತರ 500 ರೂ. ಅನ್ನು ಅರ್ಜಿ ಶುಲ್ಕ ರೂಪದಲ್ಲಿ ಪಾವತಿಸಬೇಕು.
ಸೂಚನೆ: ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿದ ಬಳಿಕ ಅಭ್ಯರ್ಥಿಗಳು ಅದರ ಒಂದು ಪ್ರತಿಯನ್ನು ಭಾವಚಿತ್ರದೊಂದಿಗೆ e Principal, Sainik School Imphal, P.O. Pangei Yangdong, Imphal East, Manipur, Pin – 795114 ವಿಳಾಸಕ್ಕೆ ಕಳುಹಿಸಲು ಸೂಚಿಸಲಾಗಿದೆ.
ಅರ್ಜಿ ಸಲ್ಲಿಸಲು ಕೊನೇ ದಿನ: 29.8.2021 (ಎಂಪ್ಲಾಮೆಂಟ್ ನ್ಯೂಸ್ನಲ್ಲಿ ಜಾಹೀರಾತು ಪ್ರಕಟವಾಗಿ 30 ದಿನದ ಒಳಗೆ)
ಅಧಿಸೂಚನೆಗೆ: https://bit.ly/3llbWxN|
ಮಾಹಿತಿಗೆ: ssimphal.nic.in