ಸಾವಿನ ಬಳಿಕವೂ ಹಲವರ ಬಾಳಲ್ಲಿ ಬೆಳಕು ತೋರಲಿದ್ದಾರೆ ಆರ್​ಜೆ ರಚನಾ: ನೇತ್ರದಾನ

rachana
Published on

ಬೆಂಗಳೂರು: "ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ’ ಚಿತ್ರ ಖ್ಯಾತಿಯ, ಸುಂದರ ನಿರೂಪಣೆ ಮೂಲಕ ಸಹಸ್ರಾರು ಅಭಿಮಾನಿಗಳ ಮನ ಗೆದ್ದಿದ್ದ ರೇಡಿಯೋ ಜಾಕಿ (ಆರ್​ಜೆ) ರಚನಾ ಹೃದಯಾಘಾತದಿಂದ ಇಂದು ನಿಧನರಾಗಿದ್ದಾರೆ. ಇವರು ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.

35 ವರ್ಷದ ಪ್ರಾಯದಲ್ಲಿಯೇ ಹೃದಯಾಘಾತದಿಂದ ಮೃತಪಟ್ಟು, ಅಭಿಮಾನಿಗಳಿಗೆ ಶಾಕ್​ ನೀಡಿರುವ ರಚನಾ, ಇದೀಗ ಹಲವರ ಬಾಳಲ್ಲಿ ಬೆಳಕಾಗಲಿದ್ದಾರೆ. ಚಿತ್ರನಟಿಯಾಗಿ, ಆರ್​ಜೆಯಾಗಿ ತಮ್ಮ ಆರೋಗ್ಯದ ಬಗ್ಗೆ ಅಪಾರ ಕಾಳಜಿಯಿಂದ ಇದ್ದ ರಚನಾರಿಗೆ ಹೃದಯಾಘಾತವಾಗಿದ್ದು ಹೇಗೆ ಎಂಬ ಬಗ್ಗೆ ಅಭಿಮಾನಿ ಬಳಗದಲ್ಲಿ ಅಚ್ಚರಿ ಮೂಡಿದೆ.

ಬೆಂಗಳೂರಿನ ಜೆಪಿ ನಗರದ ಮನೆಯಲ್ಲಿ ರಚನಾಗೆ ಎದೆ ನೋವು ಕಾಣಿಸಿದ್ದು, ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆದರೆ ಅವರು ಮೃತಪಟ್ಟಿದ್ದರು. ಕಳೆದ ಮೂರು ವರ್ಷಗಳಿಂದ ರಚನಾ ಅವರು ಅರ್​ಜೆ ಕೆಲಸ ಬಿಟ್ಟಿದ್ದರು. ರಚನಾ ತಂದೆ-ತಾಯಿ ಚಾಮರಾಜಪೇಟೆಯಲ್ಲಿ ವಾಸವಿದ್ದರು. ಇದೀಗ ಅವರ ಕುಟುಂಬಸ್ಥರು ನೇತ್ರದಾನಕ್ಕೆ ಮುಂದಾಗಿದ್ದಾರೆ.

ಇವರು ‘ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ’ ಚಿತ್ರದಲ್ಲೂ ಆರ್​ಜೆಯಾಗಿ ಕಾಣಿಸಿಕೊಂಡಿದ್ದ ರಚನಾ ತಮ್ಮ ಸಂಭಾಷಣೆಗಳಿಂದ ಗಮನ ಸೆಳೆದಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net