

ನವದೆಹಲಿ: ಟಿಕ್ಟಾಕ್ ಬ್ಯಾನ್ ಆಗುವ ಮೊದಲು ಭಾರತದಲ್ಲಿ ಟಿಕ್ಟಾಕ್ನಲ್ಲಿ ವಿಡಿಯೋ ಮಾಡುತ್ತಿದ್ದವರು ಅದೆಷ್ಟೋ ಮಂದಿ. ಇದೀಗ ಎಲ್ಲರಿಗೂ ರೀಲ್ಸ್ ಹುಚ್ಚು. ಬಗೆಬಗೆ ನೃತ್ಯ ಮಾಡಿ ರೀಲ್ಸ್ನಲ್ಲಿ ಹರಿಬಿಡುತ್ತಾರೆ. ಅವುಗಳ ಪೈಕಿ ಕೆಲವೊಂದು ಭಾರಿ ವೈರಲ್ ಆಗುತ್ತವೆ.
ಅಂಥದ್ದೇ ಒಂದು ನೃತ್ಯವೀಗ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಅದು ಗಗನ ಸಖಿಯರ ಡಾನ್ಸ್. ದೀಪಿಕಾ ಪಡುಕೋಣೆ ಅವರು ನಟಿಸಿರುವ ಬಲಮ್ ಪಿಚ್ಕಾರಿ ಹಾಡಿಗೆ ಸ್ಪೈಸ್ಜೆಟ್ನಲ್ಲಿ ಕೆಲಸ ಮಾಡುವ ಗಗನಸಖಿಯರು ನರ್ತಿಸಿದ್ದಾರೆ.
ಗಗನಸಖಿ ಉಮಾ ಅವರು ತಾವು ನರ್ತಿಸಿರುವ ನೃತ್ಯದ ವಿಡಿಯೋ ಅನ್ನು ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಪ್ರಯಾಣಿಕರು ಇಲ್ಲದ ನೆಲದ ಮೇಲೆ ವೀಡಿಯೊವನ್ನು ಚಿತ್ರೀಕರಿಸಲಾಗಿದೆ, ಪೂರ್ವ ಅನುಮತಿಯನ್ನು ತೆಗೆದುಕೊಳ್ಳಲಾಗಿದೆ ಎಂದು ಬರೆದುಕೊಂಡಿದ್ದಾರೆ.