ಪಂಜಾಬ್‌ ರೈತರಿಗಾಗಿ ಕಪ್ಪು ಬಾವುಟ ಹಾರಿಸಿದ ಸಿಧು- ಬ್ಲ್ಯಾಕ್‌ ಡೇ ಆಚರಣೆ: ವಿಡಿಯೋ ವೈರಲ್‌

flag
Published on

ಚಂಡೀಗಢ: ಕೇಂದ್ರ ಸರ್ಕಾರ ಜಾರಿ ಮಾಡಿರುವ ಮೂರು ಕೃಷಿ ಕಾಯ್ದೆಗೆ ಇದೀಗ ಆರು ತಿಂಗಳು. ಆದ್ದರಿಂದ ಪಂಜಾಬ‌ ರೈತರು ಮೇ 26 ಅನ್ನು ಬ್ಲ್ಯಾಕ್‌ ಡೇ ಎಂದು ಆಚರಿಸಲು ನಿರ್ಧರಿಸಿದ್ದು, ಇದು ಪಂಜಾಬ್‌ ಸೇರಿದಂತೆ ಕೆಲವು ರಾಜ್ಯಗಳ ರೈತರು ಕಪ್ಪು ಬಾವುಟವನ್ನು ಮನೆಯ ಮೇಲೆ ಹಾರಿಸುತ್ತಿದ್ದಾರೆ.

ಅದೇ ರೀತಿ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ತಮ್ಮ ಮನೆಯ ಮೇಲೆ ಕಪ್ಪು ಬಾವುಟ ಹಾರಿಸಿ, ಕೃಷಿ ಕಾಯ್ದೆಯಿಂದ ಪಂಜಾಬ್‌ ರೈತರ ಅಭಿವೃದ್ಧಿ ಆಗುವುದಿಲ್ಲ. ಆದ್ದರಿಂದ ಬ್ಲ್ಯಾಕ‌ ಡೇ ಆಚರಿಸುತ್ತಿದ್ದೇವೆ ಎಂದಿದ್ದಾರೆ. ಧ್ವಜ ಹಾರಿಸಿರುವ ವಿಡಿಯೋ ಅನ್ನು ಅವರು ಟ್ವೀಟ್‌ ಮಾಡಿದ್ದಾರೆ.

ಈ ಕಾನೂನನ್ನು ಹಿಂದಕ್ಕೆ ಪಡೆಯುವವರೆಗೂ ಧ್ವಜ ಇಳಿಸುವುದಿಲ್ಲ. ಪ್ರತಿ ಪಂಜಾಬ್‌ ರೈತರು ಇದಕ್ಕೆ ಬೆಂಬಲಿಸಬೇಕು ಎಂದಿದ್ದಾರೆ. ಕಳೆದ 20-25 ವರ್ಷಗಳಿಂದ ಆದಾಯ ಕುಸಿತ ಕಾಣುತ್ತಿದ್ದು, ಖರ್ಚು ಹೆಚ್ಚಾಗುತ್ತಿದೆ. ರೈತರು ಸಂಕಷ್ಟದಲ್ಲಿದ್ದಾರೆ. ಮೂರು ಕೃಷಿ ಕಾನೂನುಗಳು ರೈತರು, ದಿನಗೂಲಿ ಕಾರ್ಮಿಕರು ಮತ್ತು ವ್ಯಾಪಾರಿಗಳ ಹೊಟ್ಟೆ ಮೇಲೆ ಹೊಡೆಯಲಿವೆ. ಆದ್ದರಿಂದ ಪಂಜಾಬ್ ರೈತರು ಆಂದೋಲನ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net